Pakistan vs Sri Lanka: ವಿಕೆಟ್ ಕೀಪರ್ ಆಗಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ಕುಸಾಲ್ ಮೆಂಡಿಸ್!

Kusal Mendis breaks Kumar Sangakkara's record: ಕುಸಾಲ್ ಮೆಂಡಿಸ್ ಅವರು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದ ವಿಕೆಟ್‌ಕೀಪರ್ ಕುಮಾರ ಸಂಗಕ್ಕಾರ ಅವರ 112 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. 

Written by - Savita M B | Last Updated : Oct 10, 2023, 07:12 PM IST
  • ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್‌ನ 8 ನೇ ಲೀಗ್ ಪಂದ್ಯವು ಪ್ರಸ್ತುತ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
  • ಸತತ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಶ್ರೀಲಂಕಾ ತಂಡದ ಸ್ಕೋರ್ ಹೆಚ್ಚಾಯಿತು
  • ಕುಸಾಲ್ ಮೆಂಡಿಸ್ ಅವರು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದ ವಿಕೆಟ್‌ಕೀಪರ್ ಕುಮಾರ ಸಂಗಕ್ಕಾರ ದಾಖಲೆ ಮುರಿದಿದ್ದಾರೆ
Pakistan vs Sri Lanka: ವಿಕೆಟ್ ಕೀಪರ್ ಆಗಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ಕುಸಾಲ್ ಮೆಂಡಿಸ್! title=

World Cup 2023: ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್‌ನ 8 ನೇ ಲೀಗ್ ಪಂದ್ಯವು ಪ್ರಸ್ತುತ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಘೋಷಿಸಿದರು. ಅದರಂತೆ ಶ್ರೀಲಂಕಾ ತಂಡದಲ್ಲಿ ಪಡುಮ್ ನಿಸಂಗ ಮತ್ತು ಕುಸಾಲ್ ಪೆರೆರಾ ಇಬ್ಬರೂ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದರಲ್ಲಿ ಪೆರೇರಾ ಅವರನ್ನು ಹಸನ್ ಅಲಿ ರನೌಟ್ ಮಾಡಿದರು. ಅವರ ನಂತರ ಕುಸಾಲ್ ಮೆಂಡಿಸ್ ಕಣಕ್ಕಿಳಿದರು. 

ಮೆಂಡಿಸ್ ಮತ್ತು ನಿಸಂಗ ಜೋಡಿ 2ನೇ ವಿಕೆಟ್‌ಗೆ 102 ರನ್ ಗಳಿಸಿತು. ನಿಸಂಗ 61 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 51 ರನ್ ಗಳಿಸಿದರು. ಒಂದೆಡೆ ಆಕ್ರಮಣಕಾರಿ ಆಟವಾಡುತ್ತಿದ್ದ ಗುಸಾಲ್ ಮೆಂಡಿಸ್ ಸಿಕ್ಸರ್ ಬಾರಿಸಿ ವಿಶ್ವಕಪ್ ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇದಲ್ಲದೇ ಶ್ರೀಲಂಕಾ ತಂಡದ ಪರ ಅತಿ ವೇಗದ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. 

ಇದನ್ನೂ ಓದಿ-ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆಯೋ ಮಳೆ… ವರುಣಾತಂಕದ ಜೊತೆ ಪ್ರವಾಹದ ಭೀತಿ

ಆ ಬಳಿಕ ಸತತ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಶ್ರೀಲಂಕಾ ತಂಡದ ಸ್ಕೋರ್ ಹೆಚ್ಚಾಯಿತು. ಒಂದು ಹಂತದಲ್ಲಿ ಹಸನ್ ಅಲಿ ಓವರ್ ನಲ್ಲಿ ಸತತ 2 ಸಿಕ್ಸರ್ ಬಾರಿಸಿದರು. ಮೂರನೇ ಸಿಕ್ಸರ್ ಗೆ ಯತ್ನಿಸಿ ಕ್ಯಾಚ್ ಪಡೆದು ಔಟಾದರು. ಮೆಂಡಿಸ್ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ 122 ರನ್ ಗಳಿಸಿದರು.

ಈ ಪಂದ್ಯದಲ್ಲಿ 122 ರನ್ ಗಳಿಸುವ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರು ಪಾಕಿಸ್ತಾನದ ವಿರುದ್ಧ ವಿಕೆಟ್ ಕೀಪರ್ ಆಗಿ 112 ರನ್ ಗಳಿಸಿದ ದಾಖಲೆಯನ್ನು ಮುರಿದರು.

ಇದನ್ನೂ ಓದಿ-Asia Cup, 2023: ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸ್ಪೋಟಕ ಶತಕಕ್ಕೆ  ಬೆದರಿದ ಪಾಕ್

ODIಗಳಲ್ಲಿ ವಿಕೆಟ್‌ಕೀಪರ್‌ನಿಂದ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್:

122 ರನ್ - ಕುಸಾಲ್ ಮೆಂಡಿಸ್ - ಹೈದರಾಬಾದ್ - 2023*

112 ರನ್ - ಕುಮಾರ್ ಸಂಗಕ್ಕಾರ - ಕರಾಚಿ - 2023

97 ರನ್ - ಕುಮಾರ ಸಂಗಕ್ಕಾರ - ಕೊಲಂಬೊ - 2012

91 ರನ್ - ಕುಸಲ್ ಮೆಂಡಿಸ್ - ಕೊಲಂಬೊ - 2023

ವಿಶ್ವಕಪ್‌ನಲ್ಲಿ ಶ್ರೀಲಂಕಾದ ವಿಕೆಟ್‌ಕೀಪರ್‌ನಿಂದ ಗರಿಷ್ಠ ಸ್ಕೋರ್:

124 - ಕುಮಾರ ಸಂಗಕ್ಕಾರ ವಿರುದ್ಧ ಸ್ಕಾಟ್ಲೆಂಡ್, ಹೋಬರ್ಟ್, 2015

122 - ಕುಸಾಲ್ ಮೆಂಡಿಸ್ ವಿರುದ್ಧ ಪಾಕಿಸ್ತಾನ, ಹೈದರಾಬಾದ್, 2023*

117* - ಕುಮಾರ್ ಸಂಗಕ್ಕಾರ ವಿರುದ್ಧ ಇಂಗ್ಲೆಂಡ್, ವೆಲ್ಲಿಂಗ್ಟನ್, 2015

117 - ಕುಮಾರ್ ಸಂಗಕ್ಕಾರ vs ನ್ಯೂಜಿಲೆಂಡ್, ಮುಂಬೈ WS, 2011

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News