ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ, ಅಧ್ಯಯನ ನಡೆಸಿ ತೀರ್ಮಾನ: ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ

ಹುಬ್ಬಳ್ಳಿ: ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದಾಗ ಆಗಿದ್ದ ಸಚಿವ ಪಿಯೂಶ್ ಗೋಯಲ್ ಅವರೊಂದಿಗೆ ಚರ್ಚಿಸಿತ್ತು. ಆದರೆ, ಅನೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಬೇಕಿದ್ದರಿಂದ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

Written by - Prashobh Devanahalli | Last Updated : Jun 14, 2024, 10:17 PM IST
    • ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಒದಗಿಸುವ ಸಂಬಂಧ ಸಂಪೂರ್ಣ ಅಧ್ಯಯನ
    • ಅನೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಬೇಕಿದ್ದರಿಂದ ಸಾಧ್ಯವಾಗಿಲ್ಲ
    • ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ
ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ, ಅಧ್ಯಯನ ನಡೆಸಿ ತೀರ್ಮಾನ: ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ title=
Pralhad Joshi

ಹುಬ್ಬಳ್ಳಿ: ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಒದಗಿಸುವ ಸಂಬಂಧ ಸಂಪೂರ್ಣ ಅಧ್ಯಯನ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, 10 ಕೆಜಿ ಅಕ್ಕಿ ವಿತರಣೆ ಸಂಬಂಧ ಸಂಪೂರ್ಣ ಅಧ್ಯಯನ ನಡೆಸಿಯೇ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಇದನ್ನೂ ಓದಿ: ಭಾರತ ಆಲೌಟ್ ಆಯ್ತೆಂದು ಕುಣಿದಾಡಿದ ಪಾಕ್ ಫ್ಯಾನ್ಸ್… ತನ್ನ ತಂಡ ಸೋಲ್ತಿದ್ದಂತೆ ಹೀಗ್ ಮಾಡೋದಾ!

ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದಾಗ ಆಗಿದ್ದ ಸಚಿವ ಪಿಯೂಶ್ ಗೋಯಲ್ ಅವರೊಂದಿಗೆ ಚರ್ಚಿಸಿತ್ತು. ಆದರೆ, ಅನೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಬೇಕಿದ್ದರಿಂದ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಯುದ್ಧ, ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತೇ ಆಹಾರೋತ್ಪನ್ನದ ಕೊರತೆ ಎದುರಿಸುತ್ತಿತ್ತು. ಜಾಗತಿಕ ಮಟ್ಟದಲ್ಲಿ ಆಹಾರ ಸಂಕಷ್ಟ ಈಗಲೂ ಇದೆ. ಭಾರತವೊಂದೇ ಇದರಿಂದ ಹೊರತಾಗಿದೆ ಎಂದು ಆಹಾರ ಖಾತೆ  ನೂತನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದೇಶಕ್ಕೆ ಆಹಾರ ಭದ್ರತೆ, ಗ್ರಾಹಕರ ಹಿರಕ್ಷಣೆ ಮತ್ತು ಭವಿಷ್ಯದಲ್ಲಿ ಎನರ್ಜಿ ಸ್ವಾವಲಂಬನೆ ಸಾಧನೆ ದೃಷ್ಟಿಯಿಂದ ಮಹತ್ತರ ಜವಾಬ್ದಾರಿ ನನ್ನ ಹೆಗಲಿಗಿದ್ದು, ಪ್ರಧಾನಿ ಆಶಯದಂತೆ ಬಹುದೊಡ್ಡ ಕೊಡುಗೆ ನೀಡಲು ಸಿದ್ಧನಿದ್ದೇನೆ ಎಂದರು.

ಪ್ರಧಾನಿ ಮೋದಿ ವಿಶ್ವಾಸವಿತ್ತು ಪ್ರಮುಖ ಖಾತೆ ಕೊಟ್ಟಿದ್ದಾರೆ: ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿರಿಸಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಪ್ರಮುಖ ಖಾತೆಗಳನ್ನು ಕೊಟ್ಟಿದ್ದಾರೆ. ಅಂತೆಯೇ ಹುಬ್ಬಳ್ಳಿ-ಧಾರವಾಡ ಮತದಾರರು ಸತತ 5ನೇ ಬಾರಿ ಗೆಲುವು ದಾಖಲಿಸಿ ಕೊಟ್ಟಿದ್ದಾರೆ. ಇವರಿಗೆ ಆಭಾರಿಯಾಗಿದ್ದೇನೆ ಎಂದು ಜೋಶಿ ತಿಳಿಸಿದರು.

ಕರ್ನಾಟಕಕ್ಕೆ ಆದ್ಯತೆ ಮೇರೆಗೆ ಯೋಜನೆ:

ಭವಿಷ್ಯದಲ್ಲಿ ಇಂಧನ ಸ್ವಾವಲಂಬನೆಗೆ ಬಹುದೊಡ್ಡ ಕೊಡುಗೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕಕ್ಕೆ ಆದ್ಯತೆ ಮೇರೆಗೆ ಯೋಜನೆಗಳನ್ನು ಕೊಡಲಾಗುತ್ತದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. 2014ರಲ್ಲಿ ಕೇವಲ 76 ಮೆಗಾವ್ಯಾಟ್ ಉತ್ಪಾದನೆ ಆಗುತ್ತಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಬ್ಸಿಡಿ ಪರಿಕರ, ಪಿ ಎಲ್ ಐ ಯೋಜನೆಗಳನ್ನು ನೀಡಿದ ಮೇಲೆ 293 ಮೆಗಾವ್ಯಾಟ್ ಉತ್ಪಾದನೆಗೆ ಹೆಚ್ಚಳ ಕಂಡಿದೆ. ಭವಿಷ್ಯದಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಅಲ್ಲಿ ಅಂತರಿಕ ಬೇಗುದಿ ತಂದಿದೆ ಗ್ಯಾರೆಂಟಿ: ಕಾಂಗ್ರೆಸ್ ಘೋಷಿಸಿದ ಗ್ಯಾರೆಂಟಿ ಈಗ ಆ ಪಕ್ಷದ ಆಂತರಿಕ ಬೇಗುದಿಗೆ ಕಾರಣವಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಇದನ್ನೂ ಓದಿ: 3 ಸ್ಥಾನ, 7 ತಂಡಗಳ ಪೈಪೋಟಿ… ಸೂಪರ್ 8 ಪ್ರವೇಶಿಸಬೇಕೆಂದರೆ ಈ 2 ತಂಡಗಳಿಗೆ ಆ ದೇವರೇ ಗತಿ!!

ಗ್ಯಾರೆಂಟಿಗಳನ್ನು ಮುಂದುವರಿಸುವ ಮತ್ತು ನಿಲ್ಲಿಸುವ ವಿಚಾರದಲ್ಲಿ ಕಾಂಗ್ರೆಸ್ಸಿಗರಲ್ಲೇ ಸ್ಪಷ್ಟತೆ ಇಲ್ಲ. ಗೊಂದಲದಲ್ಲಿ ಇದ್ದಾರೆ. ಕೆಲ ಸಚಿವ, ಶಾಸಕರು ಗ್ಯಾರೆಂಟಿ ನಿಲ್ಲಿಸಲು ಆಗ್ರಹಿಸುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಮಾತ್ರ ನಿಲ್ಲಿಸಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ಆಂತರಿಕ ಬೇಗುಡಿಯನ್ನು ಮೊದಲು ಪರಿಹರಿಸಿಕೊಳ್ಳಲಿ ಎಂದು ಪ್ರಲ್ಹಾದ ಜೋಶಿ ಸಲಹೆ ಮಾಡಿದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News