ಕೆಎಲ್ ರಾಹುಲ್ ಬದಲಾಗಿ ಈ ಆಟಗಾರನಿಗೆ ಸಿಗಬೇಕಿತ್ತು ಪಂದ್ಯ ಪುರುಷೋತ್ತಮ ಪ್ರಶಸ್ತಿ!

India vs Australia: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಕೇವಲ 199 ರನ್‌’ಗಳಿಗೆ ಸೀಮಿತವಾಯಿತು. ಭಾರತ ತಂಡವು ಕೂಡ ಕೆಟ್ಟ ಆರಂಭವನ್ನು ಪಡೆದರೂ ಸಹ ನಂತರದಲ್ಲಿ ಸುಧಾರಿಸಿಕೊಂಡಿತು.

Written by - Bhavishya Shetty | Last Updated : Oct 9, 2023, 04:09 PM IST
    • ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು 6 ವಿಕೆಟ್‌’ಗಳಿಂದ ಸೋಲಿಸಿತು
    • ಅದ್ಭುತ ಪ್ರದರ್ಶನಕ್ಕಾಗಿ ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು
    • ಜಡೇಜಾ ಸ್ಪಿನ್ ಮೋಡಿಗೆ ಬೆದರಿದ ಕಾಂಗಾರೂ ಪಡೆ
ಕೆಎಲ್ ರಾಹುಲ್ ಬದಲಾಗಿ ಈ ಆಟಗಾರನಿಗೆ ಸಿಗಬೇಕಿತ್ತು ಪಂದ್ಯ ಪುರುಷೋತ್ತಮ ಪ್ರಶಸ್ತಿ!  title=
World Cup 2023

India vs Australia, KL Rahul Man of the match: ಭಾನುವಾರ ನಡೆದ ಏಕದಿನ ವಿಶ್ವಕಪ್’ನ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು 6 ವಿಕೆಟ್‌’ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 199 ರನ್‌’ಗಳಿಗೆ ಆಲೌಟ್ ಆಯಿತು. ನಂತರ ಭಾರತ 41.2 ಓವರ್‌’ಗಳಲ್ಲಿ 4 ವಿಕೆಟ್‌’ಗೆ 201 ರನ್ ಗಳಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: CWC 2023: ಆರೆಂಜ್ ಜರ್ಸಿಯಲ್ಲಿ ಪಂದ್ಯ ಆಡಲಿದೆ ಭಾರತ...! ಯಾವ ತಂಡದ ವಿರುದ್ಧ? ಇಲ್ಲಿದೆ ಮಾಹಿತಿ   

ವಿರಾಟ್-ರಾಹುಲ್ ಜೊತೆಯಾಟ:

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಕೇವಲ 199 ರನ್‌’ಗಳಿಗೆ ಸೀಮಿತವಾಯಿತು. ಭಾರತ ತಂಡವು ಕೂಡ ಕೆಟ್ಟ ಆರಂಭವನ್ನು ಪಡೆದರೂ ಸಹ ನಂತರದಲ್ಲಿ ಸುಧಾರಿಸಿಕೊಂಡಿತು. ಟೀಂ ಇಂಡಿಯಾದ ಆರಂಭಿಕ 3 ವಿಕೆಟ್’ಗಳು ಪತನಗೊಂಡ ಬಳಿಕ ಭಾರತಕ್ಕೆ ನೆರವಾಗಿದ್ದು, ಕೊಹ್ಲಿ ಮತ್ತು ರಾಹುಲ್. ವಿರಾಟ್ ಕೊಹ್ಲಿ (85) ಮತ್ತು ಕೆಎಲ್ ರಾಹುಲ್ (97*) ಬ್ಯಾಟಿಂಗ್‌’ನೊಂದಿಗೆ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ರಾಹುಲ್ ಗೆಲುವಿನ ಸಿಕ್ಸರ್ ಜೊತೆಗೆ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌’ಗಳನ್ನು ಸಿಡಿಸಿದರು. ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿದರು. ವಿರಾಟ್ ಮತ್ತು ರಾಹುಲ್ ನಾಲ್ಕನೇ ವಿಕೆಟ್‌’ಗೆ 165 ರನ್‌ಗಳ ಜೊತೆಯಾಟ ನೀಡಿದರು.

ರಾಹುಲ್ ಪಂದ್ಯ ಶ್ರೇಷ್ಠ:

ಈ ಅದ್ಭುತ ಪ್ರದರ್ಶನಕ್ಕಾಗಿ ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ವಿಕೆಟ್‌ಕೀಪರ್‌ ಕಂ ಬ್ಯಾಟ್ಸ್’ಮನ್ ಆಗಿ ಕಣಕ್ಕಿಳಿದ ರಾಹುಲ್, ಕೊಹ್ಲಿ ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು.  

ಇದನ್ನೂ ಓದಿ: ನವೆಂಬರ್’ನಲ್ಲಿ ಈ ರಾಶಿಯವರ ಕದ ತಟ್ಟಲಿದೆ ಅದೃಷ್ಟ: ಸುಖದ ಸುಪ್ಪತ್ತಿಗೆ, ಬರಿದಾಗದಷ್ಟು ಸಂಪತ್ತು ಕರುಣಿಸುವಳು ತಾಯಿ ಮಹಾಲಕ್ಷ್ಮೀ

ಜಡೇಜಾ ಸ್ಪಿನ್ ಮೋಡಿಗೆ ಬೆದರಿದ ಕಾಂಗಾರೂ ಪಡೆ:

ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಜಡೇಜಾ ಅವರು ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಅಲೆಕ್ಸ್ ಕ್ಯಾರಿಯಂತಹ ಪ್ರಬಲ ಬ್ಯಾಟ್ಸ್‌ಮನ್‌’ಗಳನ್ನು ಪೆವಿಲಿಯನ್‌’ಗೆ ಕಳುಹಿಸಿದರು. ತಮ್ಮ 2 ಓವರ್‌’ಗಳಲ್ಲಿ 3 ವಿಕೆಟ್‌’ಗಳನ್ನು ಕಬಳಿಸಿ ಆಸ್ಟ್ರೇಲಿಯಾವನ್ನು ಒತ್ತಡಕ್ಕೆ ಸಿಲುಕಿಸಿದರು. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಪ್ರವಾಸಿ ತಂಡ 49.3 ಓವರ್‌’ಗಳಲ್ಲಿ 199 ರನ್‌’ಗಳಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ ಗರಿಷ್ಠ 46 ರನ್ ಗಳಿಸಿದರೆ, ಡೇವಿಡ್ ವಾರ್ನರ್ 41 ರನ್ ಕೊಡುಗೆ ನೀಡಿದರು. ಭಾರತದ ಪರ ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಇನ್ನು ಅನೇಕರು ಕೆ.ಎಲೆ ರಾಹುಲ್ ಬದಲಿಗೆ ರವೀಂದ್ರ ಜಡೇಜಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News