ವಿಶ್ವಕಪ್‌ನಲ್ಲಿ ಶುಭಮನ್‌ ಗಿಲ್‌ ಸ್ಥಾನ ತುಂಬ್ತಾರಾ ಈ ಸ್ಟಾರ್‌ ಕ್ರಿಕೆಟರ್‌! ಇಶಾನ್‌ ಕೈ ತಪ್ಪಿದ ಬಿಗ್‌ ಚಾನ್ಸ್‌?

Shubman Gill Absence : ಅನಾರೋಗ್ಯದ ಕಾರಣ ಶುಭಮನ್‌ ಗಿಲ್ ಮೊದಲ ಪಂದ್ಯದಂತೆ ಅಫ್ಘಾನಿಸ್ತಾನ ವಿರುದ್ಧದ (IND vs AFG) ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

Written by - Chetana Devarmani | Last Updated : Oct 10, 2023, 01:41 PM IST
  • ಐಸಿಸಿ ವಿಶ್ವಕಪ್ 2023 ರಲ್ಲಿ ಗಿಲ್‌ ಅನುಪಸ್ಥಿತಿ
  • ಶುಭಮನ್‌ ಗಿಲ್‌ ಸ್ಥಾನಕ್ಕೆ ಈ ಸ್ಟಾರ್‌ ಕ್ರಿಕೆಟರ್‌?
  • ಇಶಾನ್‌ ಕೈ ತಪ್ಪಿದ ಬಿಗ್‌ ಚಾನ್ಸ್‌?
ವಿಶ್ವಕಪ್‌ನಲ್ಲಿ ಶುಭಮನ್‌ ಗಿಲ್‌ ಸ್ಥಾನ ತುಂಬ್ತಾರಾ ಈ ಸ್ಟಾರ್‌ ಕ್ರಿಕೆಟರ್‌! ಇಶಾನ್‌ ಕೈ ತಪ್ಪಿದ ಬಿಗ್‌ ಚಾನ್ಸ್‌?  title=
Shubman Gill

Shubman Gill Replacement: ಭಾರತ ಐಸಿಸಿ ವಿಶ್ವಕಪ್ 2023 ರಲ್ಲಿ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಸುದೀರ್ಘ ಪಯಣದಲ್ಲಿ ಟ್ರೋಫಿ ಗೆಲ್ಲಲು ಭಾರತದ ತಂಡದಲ್ಲಿ ಹಲವು ದೌರ್ಬಲ್ಯಗಳು ತೆರೆದುಕೊಂಡಿವೆ. ಬೌಲಿಂಗ್ ಬಗ್ಗೆ ಹೆಚ್ಚು ದೂರಲು ಸಾಧ್ಯವಾಗದಿದ್ದರೂ, ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ.

ಆದರೆ ಬ್ಯಾಟಿಂಗ್ ವಿಭಾಗವು ಭಾರತ ತಂಡಕ್ಕೆ ಸ್ವಲ್ಪ ಗಮನ ನೀಡಬೇಕಾದ ಕ್ಷೇತ್ರವಾಗಿದೆ. 7 ಮತ್ತು 8ನೇ ಕ್ರಮಾಂಕದಲ್ಲಿ ಬರುವ ಜಡೇಜಾ ಮತ್ತು ಅಶ್ವಿನ್ ಉತ್ತಮ ಕೊಡುಗೆ ನೀಡಿದರೆ ಮಾತ್ರ ಭಾರತ ದೊಡ್ಡ ಸ್ಕೋರ್‌ನತ್ತ ಸಾಗಲು ಟೀಂ ಇಂಡಿಯಾಗೆ ಸಾಧ್ಯವಾಗುತ್ತದೆ. ಅದೇ ರೀತಿ ವಿರಾಟ್, ರಾಹುಲ್, ಹಾರ್ದಿಕ್ ಮಧ್ಯ ಕ್ರಮಾಂಕದಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ಶುಭಮನ್‌ ಗಿಲ್ ಅನುಪಸ್ಥಿತಿ ಟೀಂ ಇಂಡಿಯಾವನ್ನು ಕಾಡುತ್ತಿದ್ದಂತೆ ಭಾಸವಾಗಿದೆ. 

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಈ ಸ್ಟಾರ್ ಆಟಗಾರ ! ಟೀಂ ಇಂಡಿಯಾಗೆ ಮತ್ತೊಂದು ಸಂಕಷ್ಟ 

ಅನಾರೋಗ್ಯದ ಕಾರಣ ಶುಭಮನ್‌ ಗಿಲ್ ಮೊದಲ ಪಂದ್ಯದಂತೆ ಅಫ್ಘಾನಿಸ್ತಾನ ವಿರುದ್ಧದ (IND vs AFG) ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅವರು ಅಕ್ಟೋಬರ್ 14ರಂದು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೂ ಅದು ಅನುಮಾನವೇ ಎಂದು ಹೇಳಲಾಗ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲೂ ಗಿಲ್ ಸ್ಥಾನವನ್ನು ಇಶಾನ್ ಕಿಶನ್ ಅವರೇ ತುಂಬುತ್ತಾರಾ ಎಂಬ ಪ್ರಶ್ನೆ ಮೂಡಿದೆ. 

ಇಶಾನ್ ಕಿಶನ್ ಓಪನ್ ಮಾಡಲು ಪರದಾಡುತ್ತಿರುವುದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಂಡಿದೆ. ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ನೀಡುವುದು ಸರಿಯೇ ಎಂಬುದು ಕೆಲವರ ಅಭಿಪ್ರಾಯ. ಶ್ರೇಯಸ್ ಅಯ್ಯರ್‌ ಅವರು ಗಿಲ್‌ ಸ್ಥಾನ ತುಂಬಬಹುದು ಎಂದು ಕೆಲವರು ಊಹಿಸಿದ್ದಾರೆ. ಶ್ರೇಯಸ್ 4 ನೇ ಸ್ಥಾನದಲ್ಲಿ ಸತತವಾಗಿ ಉತ್ತಮವಾಗಿದ್ದಾರೆ. ಅವರಿಗೆ ಮುಂದುವರಿಯಲು ಅವಕಾಶ ನೀಡುವುದು ದೂರದ ನಿರ್ಧಾರ ಎಂದು ಕೆಲವರು ಭಾವಿಸುತ್ತಾರೆ.

ಇದನ್ನೂ ಓದಿ: "ಬದುಕಿನಲ್ಲಿ ಅತಿಯಾಗಿ ಕಾಡಿದ್ದೇ ಈ ನೋವು" - ಮನದ ಭಾರ ಹೊರಹಾಕಿದ ಕೆ ಎಲ್ ರಾಹುಲ್ ! 

ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಬದಲಿಗೆ ಸೂರ್ಯಕುಮಾರ್ ಯಾದವ್ ಸೇರ್ಪಡೆಯಾಗಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ. ಆದ್ದರಿಂದ ಟಾಪ್ ಫಾರ್ಮ್ ನಲ್ಲಿರುವ ರಾಹುಲ್ ಅವರನ್ನು ಗಿಲ್ ಓಪನಿಂಗ್ ಸ್ಲಾಟ್ ನಲ್ಲಿ ಪ್ರಯೋಗಿಸಿ ನಂತರ ವಿರಾಟ್, ಶ್ರೇಯಸ್ ಮತ್ತು ಹಾರ್ದಿಕ್ ಅವರನ್ನು ಸತತ ಬ್ಯಾಟಿಂಗ್ ಗೆ ಇಳಿಸಬಹುದು ಎನ್ನಲಾಗಿದೆ. ಅದರೊಂದಿಗೆ ಸೂರ್ಯಕುಮಾರ್ ಯಾದವ್ 6ನೇ ಆಟಗಾರನಾಗಿ ಬಂದು ಫಿನಿಶರ್ ಪಾತ್ರವನ್ನು ವಹಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಗಿಲ್ ತಂಡಕ್ಕೆ ಬಂದಾಗ ಸ್ಪಿನ್ನರ್ ಅನ್ನು ತಂಡದಿಂದ ತೆಗೆದುಹಾಕಬೇಕು. ಗಿಲ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಇದಕ್ಕೆ ಹೊಂದಿಕೊಳ್ಳುತ್ತಾರಾ ಎಂಬುದನ್ನು ಪರೀಕ್ಷಿಸಲು ಅಫ್ಘಾನಿಸ್ತಾನ ಟೂರ್ನಿಯೇ ಸೂಕ್ತ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News