Karnataka Assembly Election 2023: ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಮತ್ತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂಬಾಗಿಲ ಮೂಲಕ ಎಂಟ್ರೀ ಕೋಡ್ತಿದೆ.
ಮತದಾರರ ಪಟ್ಟಿ ಡಿಲೀಟ್ ಮಾಡುವ ಕೀಳು ರಾಜಕೀಯ ಮಾಡಲ್ಲ ಎಂದು ಬಿಜೆಪಿ ಸಚಿವ ಮುನಿರತ್ನ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಿಮ್ಮ ನಡುವಳಿಕೆಗೆ ಬೇಸತ್ತು ಹೊರಬಂದಿದ್ದೇನೆ. ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಸಾಮಾಜಿಕ ಸೇವೆ ಮಾಡೊಕ್ಕೆ ಬಂದಿದ್ದೇನೆ . ಸಂಸದ ಡಿಕೆ ಸುರೇಶ್ ಅವರ ಕ್ಷೇತ್ರಕ್ಕೆ ಕೊಡುಗೆ ಏನು ಅನ್ನೋದು ಮೊದಲು ಅವರು ಲಿಸ್ಟ್ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BBMP ಅಧಿಕಾರಿಗಳಿಗೆ ಮಾನಸಿಕ ಹಿಂಸೆ ಕೊಡ್ತಿದ್ದಾರಾ..? - ಹಲಸೂರು ಗೇಟ್ ಪೊಲೀಸರು, ಪ್ರಾದೇಶಿಕ ಆಯುಕ್ತರು, ಚುನಾವಣಾ ಆಯೋಗ - BBMP ಅಧಿಕಾರಿಗಳು, ಸಿಬ್ಬಂದಿಗೆ ಮಾನಸಿಕ ಹಿಂಸೆ ಗಂಭೀರ ಆರೋಪ
ವೋಟರ್ ಐಡಿ ಅಕ್ರಮ ಪ್ರಕರಣ ಸಂಬಂಧ ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕರಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. ಒತ್ತಡ ಹಾಕಿದ ರಾಜಕೀಯದವರು ಯಾರು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Karnataka Voter ID Scam: 2017ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚುನಾವಣಾ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚಿಲುಮೆಗೆ ಆದೇಶ ನೀಡಲಾಗಿತ್ತು. ಸಿದ್ದರಾಮಯ್ಯನವರೇ ಇದನ್ನು ನೀವು ಮರೆತಿದ್ದೀರಾ ಅಥವಾ ಜಾಣ ಮರೆವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಚಿಲುಮೆ ಸಂಸ್ಥೆ ಬಗ್ಗೆ ಸೆಪ್ಟೆಂಬರ್ 20ರಂದೇ ಪೊಲೀಸ್ ಆಯುಕ್ತರಿಗೆ, ಬಿಬಿಎಂಪಿ & ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದೆ ಎಂದು ಪ್ರಾದೇಶಿಕ ಆಯುಕ್ತರ ವಿಚಾರಣೆ ವೇಳೆ ಸಮನ್ವಯ ಟ್ರಸ್ಟ್ನ ಮುಖ್ಯಸ್ಥೆ ಸುಮಂಗಲಾ ಅವರು ತಿಳಿಸಿದ್ದಾರೆ.
ಚಿಲುಮೆ ಸಂಸ್ಥೆ ವೋಟರ್ ಮಾಹಿತಿ ಸಂಗ್ರಹ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಿದ್ದು, 15ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡಿದ್ದಾರೆ. ಇಂದಿನಿಂದ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ನಡೆಯಲಿದೆ.
ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲು ಪಡೆದುಕೊಂಡ ಅನುಮತಿಯನ್ನು ಚಿಲುಮೆ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವುದರಿಂದ ತನಿಖೆ ನಡೆಯುತ್ತಿದೆ ಎಂದು ಕಟೀಲ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.