ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲೆಕ್ಸಾಂಡರ್ ಡುಗಿನ್, ‘ವಿಶ್ವದಲ್ಲಿ ಒಂದು ದೇಶ ತನ್ನ ಪ್ರಾಬಲ್ಯ ಸಾಧಿಸುವುದನ್ನು ತಪ್ಪಿಸಲು, ಎಲ್ಲಾ ದೇಶಗಳು ಬಲಿಷ್ಠವಾಗಿರಲು ಬೆಂಬಲಿಸುತ್ತಾ ಈ ಯುದ್ಧ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಕೋಳಿ ಜಗಳದಂತೆ ಆರಂಭವಾಗಿ, ಭೀಕರ ಯುದ್ಧಕ್ಕೆ ತಿರುಗಿದ ಉಕ್ರೇನ್ VS ರಷ್ಯಾ ನಡುವಿನ ಸಮರಕ್ಕೆ ಇಂದಿಗೆ ಭರ್ತಿ 6 ತಿಂಗಳು. ಮಾತುಕತೆ ಮೂಲಕವೇ ಮುಗಿದು ಹೋಗಬೇಕಿದ್ದ ಯುದ್ಧ ಸಾವಿರಾರು ಅಮಾಯಕರ ಪ್ರಾಣತ್ಯಾಗಕ್ಕೆ ಕಾರಣವಾಗಿದೆ.
ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ರಫ್ತು ಮಾಡದಂತೆ ಭಾರತ ಸೇರಿದಂತೆ ಇತರ ದೇಶಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಇದು ಉಕ್ರೇನ್ನೊಂದಿಗಿನ ಯುದ್ಧಕ್ಕೆ ರಷ್ಯಾ ಹಣವನ್ನು ನೀಡುತ್ತದೆ ಎಂಬುವುದು ಆ ದೇಶಗಳ ನಂಬಿಕೆಯಾಗಿದೆ.
ರಷ್ಯಾದ ಸೇನಾ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವನ್ನಪ್ಪಿದ್ದಾರೆ. ಕೈವ್ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ರಷ್ಯಾದ ರಾಕೆಟ್ ದಾಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಶತ್ರುದೇಶಕ್ಕೆ ಸವಾಲು ಹಾಕಿದ್ದಾರೆ. ಉಕ್ರೇನ್ ನ ರಾಷ್ಟ್ರಪತಿ ಭವನದಿಂದ ಶತ್ರು ಸೇನೆಗೆ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
Russia-Ukraine War: ರಷ್ಯಾದ ದಾಳಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಬಗ್ಗೆ ವಾಗ್ಧಾಳಿ ಜೋರಾಗಿಯೇ ಇದೆ. ಝೆಲೆನ್ಸ್ಕಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ಹೇಳುತ್ತಿವೆ. ಇದೀಗ ಉಕ್ರೇನ್ನ ವಿರೋಧ ಪಕ್ಷದ ನಾಯಕರೊಬ್ಬರು ಈ ವಿಚಾರದಲ್ಲಿ ದೊಡ್ಡ ಹಕ್ಕು ಮಂಡಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಅಮೆರಿಕ ಹೇರಿದ ನಿರ್ಬಂಧಗಳ ಬಗ್ಗೆ ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರು ರಷ್ಯಾದೊಂದಿಗಿನ ನಮ್ಮ ಸಂಬಂಧಗಳು ಹಾಗೇ ಇರುತ್ತವೆ ಎಂದು ಹೇಳಿದ್ದಾರೆ. ರಷ್ಯಾ ಮತ್ತು ಅಮೆರಿಕದೊಂದಿಗೆ ಭಾರತದ ಸಂಬಂಧ ಗಟ್ಟಿಯಾಗಿದೆ ಎಂದು ಬಣ್ಣಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಾಜ್ಯದ ವಿದ್ಯಾರ್ಥಿಯೋರ್ವ ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದ ರಾಕೆಟ್ ದಾಳಿಗೆ ಹಾವೇರಿ ಮೂಲದ ನವೀನ್ ಬಲಿಯಾಗಿದ್ದಾರೆ. ಮೃತ ನವೀನ್ ಜತೆ ವಾಸವಿದ್ದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸದ್ಯದ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಹಿಂಸೆ, ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅವರ ಪೋಷಕರು ನೋಡಬೇಕಾದ ಸ್ಥಿತಿ ಬಂದಿರುವುದನ್ನು ನೋಡಿ ತುಂಬಾ ನೋವಾಗಿದೆ ಅಂತಾ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದರು.
ರಷ್ಯಾ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸೇರಿದಂತೆ ಯುರೋಪಿನ ಹಲವು ದೇಶಗಳು ಉಕ್ರೇನ್ಗೆ ಸಹಾಯ ಮಾಡುತ್ತಿವೆ. ಏತನ್ಮಧ್ಯೆ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ವಿದೇಶಾಂಗ ಸಚಿವರ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ.
ರಷ್ಯಾದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಯುದ್ಧದಿಂದ ಉಕ್ರೇನ್ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈಗ ಅಮೆರಿಕಾದ ರಕ್ಷಣಾ ಇಲಾಖೆಯು ಉಕ್ರೇನ್ಗೆ ಹೆಚ್ಚುವರಿ 350 ಮಿಲಿಯನ್ ಡಾಲರ್ ಮೊತ್ತದ ತತಕ್ಷಣದ ಮಿಲಿಟರಿ ಸಹಾಯವನ್ನು ನೀಡುವುದಾಗಿ ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ.
Russia-Ukraine Crisis - ರಷ್ಯಾ-ಉಕ್ರೇನ್ (Russia-Ukraine War) ಯುದ್ಧದ ಮಧ್ಯೆ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಬಗ್ಗೆ ಅಮೆರಿಕ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.