Russia Ukraine War: ರಷ್ಯಾದ ಸೇನಾ ದಾಳಿಗೆ ಉಕ್ರೇನ್‌ನ ಪ್ರಸಿದ್ಧ ನಟಿ ಬಲಿ!

ರಷ್ಯಾದ ಸೇನಾ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವನ್ನಪ್ಪಿದ್ದಾರೆ. ಕೈವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ರಷ್ಯಾದ ರಾಕೆಟ್ ದಾಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Written by - Zee Kannada News Desk | Last Updated : Mar 18, 2022, 02:50 PM IST
  • ಉಕ್ರೇನ್ ಮೇಲೆ ನಿರಂತರ ದಾಳಿ ಮುಂದುವರೆಸಿರುವ ರಷ್ಯಾ ಸೇನೆ
  • ರಷ್ಯಾದ ರಾಕೆಟ್ ದಾಳಿಗೆ ಬಲಿಯಾದ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್
  • ಅನೇಕ ಚಿತ್ರಗಳಲ್ಲಿ ನಟಿಸಿದ್ದ 67 ವರ್ಷದ ನಟಿಯ ಸಾವಿಗೆ ಉಕ್ರೇನ್ ಸಂತಾಪ
Russia Ukraine War: ರಷ್ಯಾದ ಸೇನಾ ದಾಳಿಗೆ ಉಕ್ರೇನ್‌ನ ಪ್ರಸಿದ್ಧ ನಟಿ ಬಲಿ! title=
ರಷ್ಯಾದ ರಾಕೆಟ್ ದಾಳಿಗೆ ಪ್ರಸಿದ್ಧ ನಟಿ ಬಲಿ

ನವದೆಹಲಿ: ಫೆಬ್ರವರಿ 24ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧ(Russia Ukraine War)ವು ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ. ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಈ ಮಧ್ಯೆ ರಷ್ಯಾ ಸೇನಾ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್(Oksana Shvets) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೈವ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ನಟಿ ಬಲಿಯಾಗಿದ್ದಾರೆ. ಒಕ್ಸಾನಾ ಅವರ ತಂಡ ಯಂಗ್ ಥಿಯೇಟರ್ ನಟಿಯ ಸಾವನ್ನು ಖಚಿತಪಡಿಸಿದೆ. ‘ಕೈವ್‌ನ ವಸತಿ ಕಟ್ಟಡದ ಮೇಲೆ ನಡೆಸಿದ ರಾಕೆಟ್ ದಾಳಿಯ ವೇಳೆ ಉಕ್ರೇನಿಯನ್ ಕಲಾವಿದೆ ಒಕ್ಸಾನಾ ಶ್ವೆಟ್ಸ್ ಕೊಲ್ಲಲ್ಪಟ್ಟರು’ ಎಂದು ತಿಳಿಸಲಾಗಿದೆ.

ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ

ವರದಿಗಳ ಪ್ರಕಾರ ನಟಿ ಒಕ್ಸಾನಾ(Ukraine's Famous Actress)ಗೆ 67 ವರ್ಷ ವಯಸ್ಸಾಗಿತ್ತು. ಅವರಿಗೆ ಉಕ್ರೇನ್‌ನ ಅತ್ಯುನ್ನತ ಕಲಾತ್ಮಕ ಗೌರವ ನೀಡಲಾಗಿತ್ತು. ‘ಉಕ್ರೇನ್‌ನ ಗೌರವಾನ್ವಿತ ಕಲಾವಿದೆ’ ಎಂದು ಅವರನ್ನು ಕರೆಯಲಾಗುತ್ತದೆ. ಒಕ್ಸಾನಾ ಶ್ವೆಟ್ಸ್ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ‘ದಿ ಸೀಕ್ರೆಟ್ ಆಫ್ ಸೇಂಟ್ ಪ್ಯಾಟ್ರಿಕ್’, ‘ಟುಮಾರೊ ವಿಲ್ ಬಿ ಟುಮಾರೋ’ ಮತ್ತು ‘ದಿ ರಿಟರ್ನ್ ಆಫ್ ಮುಖ್ತಾರ್’ ಸೇರಿವೆ.

ಇದನ್ನೂ ಓದಿ: ಕೊರೊನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ ಬಿಡುಗಡೆ

ಯಂಗ್ ಥಿಯೇಟರ್ ಮಾಹಿತಿ ನೀಡಿದೆ

ಈ ಘಟನೆಯ ನಂತರ ಯಂಗ್ ಥಿಯೇಟರ್ ಕಮ್ಯುನಿಟಿ ತನ್ನ ಅಧಿಕೃತ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಕೈವ್‌ನ ವಸತಿ ಕಟ್ಟಡದ ಮೇಲೆ ರಾಕೆಟ್ ದಾಳಿ(Russian Attack)ಯ ಸಂದರ್ಭದಲ್ಲಿ ಉಕ್ರೇನಿಯನ್ ತಾರೆ ಒಕ್ಸಾನಾ ಶ್ವೆಟ್ಸ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ‘ನಮ್ಮ ದೇಶಕ್ಕೆ ಬಂದ ಶತ್ರುಗಳಿಗೆ ಕ್ಷಮೆಯಿಲ್ಲ!’ ಅಂತಾ ಪೋಸ್ಟ್ ನಲ್ಲಿ ಬರೆಯಲಾಗಿದ್ದು, ‘ಪ್ರತಿಭಾವಂತ ನಟಿಗೆ ಗೌರವ ಸಲ್ಲಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದೆ.

ದಾಳಿ ಮುಂದುವರೆಸಿರುವ ರಷ್ಯಾ  

ಫೆಬ್ರವರಿ 24ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧ(Russia Ukraine Crisis)ವು ಇಂದಿಗೂ ನಿಲ್ಲುತ್ತಿಲ್ಲ. ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಈಗ ರಷ್ಯಾದ ಸೇನೆಯು ಉಕ್ರೇನ್‌ನ ಪ್ರಮುಖ ಸ್ಥಳಗಳನ್ನು ತನ್ನ ಗುರಿಯನ್ನಾಗಿಸಿಕೊಂಡಿದೆ. ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ರಷ್ಯಾವು ಪ್ರಮುಖ ದಾಳಿಯನ್ನು ನಡೆಸಬಹುದು ಎಂದು ಉಕ್ರೇನ್‌ನ ರಕ್ಷಣಾ ಸಚಿವಾಲಯವು ಹೇಳಿಕೊಂಡಿದೆ.

ಇದನ್ನೂ ಓದಿ: ರಷ್ಯಾಕ್ಕೆ ವಿಮಾನದ ಬಿಡಿ ಭಾಗಗಳನ್ನು ಪೂರೈಸಲು ನಿರಾಕರಿಸಿದ ಚೀನಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News