Russia-Ukraine War: ಉಕ್ರೇನ್ ವಿರುದ್ಧ 3ನೇ ಮಹಾಯುದ್ಧಕ್ಕೆ ಸಜ್ಜಾಗುತ್ತಿದೆಯಾ ರಷ್ಯಾ..?

ಅಮೆರಿಕ ಮತ್ತದರ ಪಟಾಲಂ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿರುವುದು ರಷ್ಯಾ ಅಧ್ಯಕ್ಷರನ್ನು ಕೆರಳಿ ಕೆಂಡವಾಗಿಸಿದೆ.

Written by - Malathesha M | Edited by - Puttaraj K Alur | Last Updated : Aug 26, 2022, 12:47 PM IST
  • ಉಕ್ರೇನ್ ವಿರುದ್ಧ 3ನೇ ಮಹಾಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆಯಾ ರಷ್ಯಾ?
  • ಉಕ್ರೇನ್‌ ಸೇನೆಗೆ ನೀಡುತ್ತಿರುವ ಸಹಾಯದ ಮೊತ್ತವನ್ನು ಮತ್ತಷ್ಟು ಹೆಚ್ಚಿಸುತ್ತಿರುವ ಪಾಶ್ಚಿಮಾತ್ಯರು
  • ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸುತ್ತಿರುವುದಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಗರಂ
Russia-Ukraine War: ಉಕ್ರೇನ್ ವಿರುದ್ಧ 3ನೇ ಮಹಾಯುದ್ಧಕ್ಕೆ ಸಜ್ಜಾಗುತ್ತಿದೆಯಾ ರಷ್ಯಾ..? title=
Russia-Ukraine War

ನವದೆಹಲಿ: ಎಲ್ಲೆಲ್ಲೂ ಚೆಲ್ಲಾಡಿರುವ ನೆತ್ತರು. ಕಂದಮ್ಮ, ಅಮ್ಮ & ಅಪ್ಪನ ದೇಹಗಳು ಛಿದ್ರ ಛಿದ್ರ… ಕುಸಿದು ಬಿದ್ದ ಕಟ್ಟಡಗಳು, ಹಾರಿ ಹೋಗಿರುವ ಮನೆ ಛಾವಣಿ ಹೀಗೆ ಎಲ್ಲೆಲ್ಲೂ ವಿನಾಶದ ಸೂಚನೆ. ಅಷ್ಟಕ್ಕೂ ಆ ಜಾಗ 6 ತಿಂಗಳ ಹಿಂದೆ ಸ್ವರ್ಗದಂತಿತ್ತು. ಆದರೆ ಈಗ ಮನುಷ್ಯರ ವಧೆ ಮಾಡುವ ಸ್ಥಳವಾಗಿ ಭೀಕರ ಸ್ವರೂಪ ಪಡೆದಿದೆ. 2ನೇ ಮಹಾಯುದ್ಧದ ಬೆಚ್ಚಿ ಬೀಳಿಸುವ ಘಟನೆಗಳನ್ನು ಮತ್ತೆ ಮತ್ತೆ ಕಣ್ಣಮುಂದೆ ತರುತ್ತಿದೆ.

ಹೌದು, ನಾವಿಲ್ಲಿ ಹೇಳುತ್ತಿರುವುದು ಉಕ್ರೇನ್‌ ದುರಂತ ಕಥೆಯನ್ನು. ರಷ್ಯಾದ ಭೀಕರ ದಾಳಿಗೆ ಸಿಲುಕಿ, ಅಕ್ಷರಶಃ ಮೃತ್ಯು ಕೂಪದಲ್ಲಿ ನರಳುತ್ತಿರುವ ಅಮಾಯಕರ ವ್ಯಥೆಯನ್ನು. ರಷ್ಯಾ ಹಾಗೂ ಉಕ್ರೇನ್‌ ನಡುವೆ ಭೀಕರ ಯುದ್ಧ ಆರಂಭವಾಗಿ 6 ತಿಂಗಳು ಉರುಳಿದೆ. ಆದರೆ ಈಗಲೂ ಯುದ್ಧ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಬದಲಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜಗತ್ತಿನ ಎದೆ ನಡುಗಿಸುವ ನಿರ್ಧಾರ ಕೈಗೊಂಡಿದ್ದಾರೆ. ರಷ್ಯಾ ಸೇನೆಗೆ ಹಾಗೂ ರಷ್ಯಾ ಸೇನಾಧಿಕಾರಿಗಳಿಗೆ ಪುಟಿನ್‌ ನೀಡಿರುವ ಆದೇಶ 3ನೇ ಮಹಾಯುದ್ಧದ ಆರಂಭಕ್ಕೆ ಮುನ್ನುಡಿ ಬರೆಯುತ್ತಿದೆ. ಜಗತ್ತು ಮತ್ತೆ ಇಬ್ಭಾಗವಾಗಿ ಹೋಗುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: Imran Khan : ಇಮ್ರಾನ್ ಖಾನ್‌ಗೆ ಮಧ್ಯಂತರ ಜಾಮೀನು

ಉಕ್ರೇನ್‌ಗೆ ಶಸ್ತ್ರಾಸ್ತ್ರ!

ಉಕ್ರೇನ್‌ ಮತ್ತು ರಷ್ಯಾ ಯುದ್ಧ ಕೇವಲ 2 ದೇಶಗಳ ನಡುವೆ ನಡೆಯುತ್ತಿಲ್ಲ. ಇಲ್ಲಿ ರಷ್ಯಾ ವಿರುದ್ಧ ದಾಳ ಉರುಳಿಸುತ್ತಿರುವುದು ವಿಶ್ವದ ದೊಡ್ಡಣ್ಣನ ಪಟ್ಟದಲ್ಲಿ ಕೂತಿರುವ ಅಮೆರಿಕ. ಆದರೆ ಮುಂದೆ ನಿಂತು ಜೀವ ಕಳೆದುಕೊಳ್ಳುತಿರುವುದು ಉಕ್ರೇನ್‌ ಯೋಧರು ಹಾಗೂ ನಾಗರಿಕರು ಮಾತ್ರ. ಇಂತಹ ಸಂದಿಗ್ಧ ಪರಿಸ್ಥಿತಿ ಅಮೆರಿಕ ಹಾಗೂ ನ್ಯಾಟೋ ಪಡೆಗಳಿಗೆ ರಾಜಕೀಯ ದಾಳವಾಗಿ ಪರಿವರ್ತನೆ ಆಗಿದೆ. ಹೀಗಾಗಿಯೇ ಉಕ್ರೇನ್‌ ಸೇನೆಗೆ ನೀಡುತ್ತಿರುವ ಸಹಾಯದ ಮೊತ್ತವನ್ನ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಪಾಶ್ಚಿಮಾತ್ಯರು.

ಪುಟಿನ್‌ ಗರಂ..!

ಅಮೆರಿಕ ಮತ್ತದರ ಪಟಾಲಂ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿರುವುದು ರಷ್ಯಾ ಅಧ್ಯಕ್ಷರನ್ನು ಕೆರಳಿ ಕೆಂಡವಾಗಿಸಿದೆ. ಮೊದಲೇ ಪುಟಿನ್‌ ಗುಪ್ತಚರ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದವರು. ಇದೀಗ ಅಮೆರಿಕ ಮತ್ತು ನ್ಯಾಟೋ ರಾಷ್ಟ್ರಗಳ ಕುತಂತ್ರ ಅರಿತು ಪ್ರತಿತಂತ್ರ ರೂಪಿಸಿದ್ದಾರೆ. ಇದೇ ಕಾರಣಕ್ಕೆ 2023ರ ವೇಳೆಗೆ ರಷ್ಯಾದ ಶಸ್ತ್ರಾಸ್ತ್ರ ಪಡೆಗಳ ಬಲವನ್ನು 1.37 ಲಕ್ಷಕ್ಕೆ ಹೆಚ್ಚಿಸಲು ಪುಟಿನ್ ಆದೇಶಿಸಿದ್ದಾರೆ.‌

ಇದನ್ನೂ ಓದಿ: ಭತ್ತದ ವಿಸ್ತಿರ್ಣದಲ್ಲಿ ಕುಸಿತ, ಭಾರತದ ಮತ್ತು ಪ್ರಪಂಚದ ಮೇಲಾಗುವ ಪರಿಣಾಮವೇನು ಗೊತ್ತೇ?

ಇದು ಕೇವಲ ಸೈನಿಕರ ಅಥವಾ ಸೇನಾ ಬಲವನ್ನು ಹೆಚ್ಚಿಸುವ ವಿಚಾರವಲ್ಲ. ಮೊದಲ ಹಾಗೂ 2ನೇ ಮಹಾಯುದ್ಧದ ಸಂದರ್ಭದಲ್ಲೂ ಇದೇ ರೀತಿ ಬೆಳವಣಿಗೆಗಳು ನಡೆದಿದ್ದವು. ಯುದ್ಧ ಆರಂಭಕ್ಕೂ ಮುನ್ನ ಇಂತಹದ್ದೇ ಕಿಡಿ ಹೊತ್ತಿತ್ತು. ನಂತರ 1914ರಿಂದ 1918ರವರೆಗೂ ಮೊದಲ ಮಹಾಯುದ್ಧಕ್ಕೇ ಕಿಡಿ ಸಿಡಿಸಲಾಗಿತ್ತು. ನಂತರದಲ್ಲಿ 1939–1945ರ ಮಧ್ಯೆ ಭೀಕರ 2ನೇ ವರ್ಲ್ಡ್‌ ವಾರ್‌ ನಡೆದು, 5 ಕೋಟಿಗೂ ಹೆಚ್ಚು ಜನ ಮೃತಪಟ್ಟಿದ್ದರು. 2022ರಲ್ಲಿ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿರುವುದು 3ನೇ ಮಹಾಯುದ್ಧದ ಭೀತಿಯ ಕಹಳೆ ಮೊಳಗಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್‌ ಸೇನಾ ಬಲ ಹೆಚ್ಚಿಸಿಕೊಳ್ಳಲು ಮಾಸ್ಟರ್‌ ಪ್ಲ್ಯಾನ್‌ ಮಾಡಿರುವುದು ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News