Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

UP Viral Video: ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ರಸ್ತೆಯ ಹೊರಗೆ ಕುಳಿತು ಆಟವಾಡುತ್ತಿದ್ದಳು. ಈ ವೇಳೆ ಬಿಳಿ ಬಣ್ಣದ ಕಾರು ಬಂದು ಮಗುವಿನ ಮೇಲೆ ಹರಿದಿದೆ. ಮಗುವಿನ ತಾಯಿ ತಕ್ಷಣವೇ ತನ್ನ ಮಗುವನ್ನು ಎತ್ತಿಕೊಂಡು ಗೋಳಾಡುತ್ತಾ ಆಸ್ಪತ್ರೆಯ ಕಡೆಗೆ ಹೋಗಿದ್ದಾಳೆ.

Written by - Puttaraj K Alur | Last Updated : Jun 30, 2024, 05:27 PM IST
  • ಮಗುವಿನ ಮೇಲೆ ಕಾರು ಹತ್ತಿಸಿದ ಬೇಜವಾಬ್ದಾರಿ ಚಾಲಕ
  • ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿರುವ ಆಘಾತಕಾರಿ ಘಟನೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವ ವಿಡಿಯೋ
Viral Video: ಮನೆ ಹೊರಗೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ! title=
CCTVಯಲ್ಲಿ ಆಘಾತಕಾರಿ ಘಟನೆ!

UP Viral Video: ತಾಯಿಯೊಂದಿಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೇಜವಾಬ್ದಾರಿ ಚಾಲಕನೊಬ್ಬ ಕಾರು ಹತ್ತಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  

ನೋಯ್ಡಾದ ಸೆಕ್ಟರ್ 63ರ ʼಬಿʼ ಬ್ಲಾಕ್‌ನಲ್ಲಿ ತಾಯಿಯೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗುವಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಆಘಾತಕಾರಿ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

ಇದನ್ನೂ ಓದಿ: ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ

ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ರಸ್ತೆಯ ಹೊರಗೆ ಕುಳಿತು ಆಟವಾಡುತ್ತಿದ್ದಳು. ಈ ವೇಳೆ ಬಿಳಿ ಬಣ್ಣದ ಕಾರು ಬಂದು ಮಗುವಿನ ಮೇಲೆ ಹರಿದಿದೆ. ಮಗುವಿನ ತಾಯಿ ತಕ್ಷಣವೇ ತನ್ನ ಮಗುವನ್ನು ಎತ್ತಿಕೊಂಡು ಗೋಳಾಡುತ್ತಾ ಆಸ್ಪತ್ರೆಯ ಕಡೆಗೆ ಹೋಗಿದ್ದಾಳೆ.

ಗಾಯಗೊಂಡ ಮಗುವನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಕಂಡುಬಂದಿರುವ ಮಹಿಳೆಯನ್ನು ರಿಂಕಿ ಎಂದು ಗುರುತಿಸಲಾಗಿದ್ದು, ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. 

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ 88 ವರ್ಷಗಳ ಹಿಸ್ಟರಿ ಬ್ರೇಕ್, 2 ದಿನ ಭಾರೀ ಮಳೆ ಅಲರ್ಟ್!!

ಘಟನೆಯ ಬಗ್ಗೆ ಸೆಕ್ಟರ್ 63 ಠಾಣೆಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ವಾಹನವನ್ನು ಸೀಝ್‌ ಮಾಡಿದ್ದು, ಆರೋಪಿ ಕಾರು ಚಾಲಕನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News