Team India Cricketer: ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಅವರ ನಂಬರ್-3 ಬ್ಯಾಟಿಂಗ್ ಸ್ಥಾನವನ್ನು ಈ ಆಟಗಾರ ಕಸಿದುಕೊಳ್ಳಬಹುದು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಜುಲೈ 12 ರಿಂದ ಪ್ರಾರಂಭವಾಗಲಿದೆ.
Virat Kohli's Net Worth: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರು. ಕೇವಲ ಕ್ರಿಕೆಟ್ ಮಾತ್ರವಲ್ಲ… ಗಳಿಕೆ ಅಂತ ಬಂದಾಗ ಕೂಡ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಬಂದ ವರದಿ ಪ್ರಕಾರ 2023ರಲ್ಲಿ ವಿರಾಟ್ ಆಸ್ತಿ ಮೌಲ್ಯ 1000 ಕೋಟಿ ರೂ. ದಾಟಿದೆ.
ENG vs AUS, Ashes 1st Test: ಸಚಿನ್ ಅವರ ಈ ದೊಡ್ಡ ದಾಖಲೆಯನ್ನು ಮುರಿಯುವುದು ಸುಲಭದ ಕೆಲಸವಲ್ಲ, ಆದರೆ ಪ್ರಸ್ತುತ ಯಾವುದಾದರೂ ಒಬ್ಬ ಬ್ಯಾಟ್ಸ್ಮನ್ ಆ ದಾಖಲೆ ಮುರಿಯಲು ಸಾಧ್ಯ ಎಂದರೆ ಅದು ಇಂಗ್ಲೆಂಡ್ ನ ಈ ಬ್ಯಾಟ್ಸ್ಮನ್ ನಿಂದ ಮಾತ್ರ.
Virat Kohli Captaincy: ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಈ ವಿಚಿತ್ರ ಪೋಸ್ಟ್ ನಿಂದ ಮುಂದಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಜನ ಊಹಿಸುತ್ತಿದ್ದಾರೆ.
Virat Kohli vs Naveen ul haq: ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ನವೀನ್-ಉಲ್-ಹಕ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಪಂದ್ಯ ಮುಗಿದ ನಂತರ ಇಬ್ಬರೂ ಆಟಗಾರರು ಕೈಕುಲುಕುತ್ತಿದ್ದರು. ಆಗ ನವೀನ್ ವಿರಾಟ್ ಮುಖಾಮುಖಿಯಾದರು. ಇದಾದ ನಂತರ ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ಜಗಳಕ್ಕೆ ಮಧ್ಯಪ್ರವೇಶ ಮಾಡಿದರು
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ 209 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸುವ ಮೂಲಕ ಮತ್ತೊಮ್ಮೆ ನಿರಾಸೆಯನ್ನು ಅನುಭವಿಸಿದೆ.ಆಸ್ಟ್ರೇಲಿಯಾ ತಂಡವು ನೀಡಿದ 444 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ತಂಡವು ಎರಡನೇ ಇನಿಂಗ್ಸ್ ನಲ್ಲಿ ಕೇವಲ 234 ರನ್ ಗಳಿಗೆ ಸರ್ವಪತನವನ್ನು ಕಂಡಿದೆ.
WTC 2023 ರ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಊಟ ಮಾಡುವಾಗ ಸಹ ಆಟಗಾರರೊಂದಿಗೆ ಚಾಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಈ ವಿಡಿಯೋಗೆ ಟೀಕೆಗಳ ಸುರಿಮಳೆ ಬರುತ್ತಿದೆ. ಇದೀಗ ತಮ್ಮ ಇನ್ಸ್ಟಾಗ್ರಾಮನ್ನಲ್ಲಿ ಸ್ಟೇಟಸ್ನಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ ಕಿಂಗ್ ಕೊಹ್ಲಿ.
ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಭಾರತದ ವಿರುದ್ಧ 31 ನೇ ಟೆಸ್ಟ್ ಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಹಾಗೂ ರಿಕ್ಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
Virat Kohli Biggest Rival: ಇಂಗ್ಲೆಂಡ್ ನ ಆಲ್ ರೌಂಡರ್ ಮೊಯಿನ್ ಅಲಿ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಯಾವಾಗಲೂ ದೊಡ್ಡ ಶತ್ರು ಎಂದು ಸಾಬೀತುಪಡಿಸಿದ್ದಾರೆ. ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.
WTC Final 2023: ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್ ನಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 112 ರನ್ ಗಳಿಸಿದರೆ, ನಂತರ ಅವರು ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಗರಿಷ್ಠ ಸ್ಕೋರರ್ ಆಗಲಿದ್ದಾರೆ.
IND vs AUS, WTC Final 2023: ಈ ದೊಡ್ಡ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ರಿಕಿ ಪಾಂಟಿಂಗ್ ಹೇಳಿಕೆ ನೀಡಿದ್ದಾರೆ. ಭಾರತ ತಂಡವು ಜಡೇಜಾ ಮತ್ತು ಅಶ್ವಿನ್ ಅವರನ್ನು ಆಯ್ಕೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಹೇಳಿದರು. ಜಡೇಜಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು.
WTC Final 2023: ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ತುಂಬಾ ಅಪಾಯಕಾರಿಯಾಗಿತ್ತು. ಮತ್ತೊಮ್ಮೆ ಅವರು ಮಾರಣಾಂತಿಕ ಬ್ಯಾಟಿಂಗ್ ಮೂಲಕ ವಿಶ್ವದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಹುದೊಡ್ಡ ಸಾಧನೆ ಮಾಡುವ ಎಲ್ಲಾ ಸಾಧ್ಯತೆ ಇದೆ.
ICC WTC Final 2023: ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಟೆಸ್ಟ್ ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ. ಇನ್ನು ಪಾಂಟಿಂಗ್ ಪ್ರಕಾರ, ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಪ್ರಮುಖ ಪಾತ್ರ ವಹಿಸಿ ದಾಖಲೆ ನಿರ್ಮಿಸಬಹುದು. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್ ಗಳಲ್ಲಿ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ.
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಲಿದೆ. ಏಕೆಂದರೆ ಟೀಂ ಇಂಡಿಯಾದಲ್ಲಿರುವ ಆ 5 ಆಟಗಾರರು ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಟ್ರೋಫಿಯನ್ನು ಏಕಾಂಗಿಯಾಗಿ ಭಾರತಕ್ಕೆ ಗೆದ್ದು ಕೊಡುವ ಆ 5 ಭಯಾನಕ ಕ್ರಿಕೆಟಿಗರ ಬಗ್ಗೆ ತಿಳಿಯೋಣ.
WTC Final 2023 IND vs AUS: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC Final 2023) ಫೈನಲ್ ಗೆ ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ತಂಡವು ಫಾರ್ಮ್ಬಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಜೋಶ್ ಹೇಜಲ್ ವುಡ್ ಸೋಮವಾರ ತಂಡದೊಂದಿಗೆ ಅಭ್ಯಾಸ ನಡೆಸಿದರು. ಈ ಮಹತ್ವದ ಪಂದ್ಯದ ಮುಂದೆ ಉತ್ತಮ ಭಾವನೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.
PAK Cricketer Statement on Kohli: ವಿರಾಟ್ ಕೊಹ್ಲಿ ಅಪಾಯಕಾರಿ ಫಾರ್ಮ್ನಲ್ಲಿದ್ದಾರೆ. ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ತುಂಬಾ ಮಾರಕವಾಗಿ ಬ್ಯಾಟ್ ಮಾಡಿದ್ದರು. ಅವರು ಆಡಿದ 14 ಪಂದ್ಯಗಳಲ್ಲಿ, 639 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕ ಮತ್ತು ಎರಡು ಶತಕಗಳು ಸೇರಿವೆ. ಕೊಹ್ಲಿ ಈ ಸೀಸನ್ ನಲ್ಲಿ 53.25 ಸರಾಸರಿಯಲ್ಲಿ ಮತ್ತು 139.82 ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿದರು.
Virat Kohli Daughter Vamika : ಸ್ಟಾರ್ ಜೋಡಿಗಳಲ್ಲಿ ಒಂದಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳನ್ನು ಎಷ್ಟು ಪ್ರೀತಿ ಮಾಡ್ತಾರೆ, ಅವಳ ಜೊತೆ ಎಷ್ಟು ಸಮಯ ಕಳೆಯುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಚಿತ್ರಗಳ ಮೂಲಕ ತಿಳಿಯುತ್ತದೆ. ಇದೀಗ ಅನುಷ್ಕಾ ತಮ್ಮ ಮಗಳಿಗಾಗಿ ತ್ಯಾಗವೊಂದಕ್ಕೆ ಸಿದ್ದರಾಗಿದ್ದಾರೆ.
Virat Kohli : ಕಿಂಗ್ ಅಂತಾನೇ ಕರೆಸಿಕೊಳ್ಳೊ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿದೆ. ಐಪಿಲ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿ ಟೀಕೆಗಳಿಗೆ ಸರಿಯಾಗಿ ಉತ್ತರ ನೀಡಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಇವರು. ಇದೀಗ ತಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದಾರೆ.
ಜೂನ್ 7 ರಿಂದ 11 ರವರೆಗೆ ಓವಲ್ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ಫೈನಲ್ಗೆ ಮುಂಚಿತವಾಗಿ ಟೀಮ್ ಇಂಡಿಯಾ ಗುರುವಾರ ಲಂಡನ್ನಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿತು.ಭಾರತ ತಂಡದ ಒಂದು ಭಾಗವು ಈಗಾಗಲೇ ಇಂಗ್ಲೆಂಡ್ ಗೆ ಆಗಮಿಸಿದ್ದು, ಈಗ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.