ಔಟ್‌ ಆಗಿದ್ದಕ್ಕೆ ಟ್ರೋಲ್‌..! ನೆಟ್ಟಿಗರಿಗೆ ತನ್ನದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ʼಕಿಂಗ್‌ ಕೊಹ್ಲಿʼ

WTC 2023 ರ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಊಟ ಮಾಡುವಾಗ ಸಹ ಆಟಗಾರರೊಂದಿಗೆ ಚಾಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಈ ವಿಡಿಯೋಗೆ ಟೀಕೆಗಳ ಸುರಿಮಳೆ ಬರುತ್ತಿದೆ.  ಇದೀಗ ತಮ್ಮ ಇನ್‌ಸ್ಟಾಗ್ರಾಮನ್‌ನಲ್ಲಿ ಸ್ಟೇಟಸ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್‌ ಮಾಡುವವರಿಗೆ ತಿರುಗೇಟು ನೀಡಿದ್ದಾರೆ ಕಿಂಗ್‌ ಕೊಹ್ಲಿ.

Written by - Krishna N K | Last Updated : Jun 9, 2023, 06:38 PM IST
  • ಜೂನ್ 8 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನಿಶ್ಚಿತ ಪರಿಸ್ಥಿತಿಯಲ್ಲಿದ್ದಾಗ ವಿರಾಟ್ ಕೊಹ್ಲಿ ಪಿಚ್‌ಗೆ ಕಾಲಿಟ್ಟರು.
  • ಆದ್ರೆ ದುರದೃಷ್ಟವಶಾತ್ 14 ರನ್‌ ಗಳಿಸುವ ಮೂಲ ಔಟ್‌ ಆಗಿ ಪೆವಿಲಿಯನ್‌ ಸೇರಿದ್ದರು.
  • ಡ್ರೆಸ್ಸಿಂಗ್ ರೂಮ್ ಕಡೆಗೆ ಮುಖ ಮಾಡಿದ್ದ ಕೊಹ್ಲಿ ಅಲ್ಲಿ ಊಟ ಮಾಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು.
ಔಟ್‌ ಆಗಿದ್ದಕ್ಕೆ ಟ್ರೋಲ್‌..! ನೆಟ್ಟಿಗರಿಗೆ ತನ್ನದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ʼಕಿಂಗ್‌ ಕೊಹ್ಲಿʼ title=

Virat Kohli : ಜೂನ್ 8 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023 ರ ಫೈನಲ್‌ನಲ್ಲಿ ಭಾರತವು 30/2 ರಲ್ಲಿ ಅನಿಶ್ಚಿತ ಪರಿಸ್ಥಿತಿಯಲ್ಲಿದ್ದಾಗ ವಿರಾಟ್ ಕೊಹ್ಲಿ ಪಿಚ್‌ಗೆ ಕಾಲಿಟ್ಟರು. ಆದ್ರೆ ದುರದೃಷ್ಟವಶಾತ್ 14 ರನ್‌ ಗಳಿಸುವ ಮೂಲ ಔಟ್‌ ಅದ್ರು. ಸ್ವಲ್ಪ ಸಮಯದ ನಂತರ, ರವೀಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ಪ್ರಯತ್ನದಲ್ಲಿ ಚೇತರಿಸಿಕೆ ಕಾಣಿಸಿಕೊಂಡಿತ್ತು.

ಇನ್ನು ಇದೇ ವೇಳೆ, ಔಟ್‌ ಆಗಿ ಪೆವಿಲಿಯನ್‌ ಸೇರಿದ್ದ ಕೊಹ್ಲಿ ಭಾರತೀಯ ಡ್ರೆಸ್ಸಿಂಗ್ ರೂಮ್ ಕಡೆಗೆ ಮುಖ ಮಾಡಿದ್ದರು. ಅಲ್ಲಿ ಅವರು ಶುಬ್ಮನ್ ಗಿಲ್, ಇಶಾನ್ ಕಿಶನ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ಊಟ ಸವಿಯುತ್ತಿರುವಾಗ ಸಂಭಾಷಣೆಯಲ್ಲಿ ತೊಡಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ:  Wrestlers Protest: ಕುಸ್ತಿ ಪ್ರತಿಭಟನೆಗೆ ಹೊಸ ತಿರುವು, ಪೊಲೀಸ್ ರಕ್ಷಣೆಯಲ್ಲಿ ಬ್ರಿಜ್ ಭೂಷಣ್ ಮನೆ ತಲುಪಿದ ಮಹಿಳಾ ಕುಸ್ತಿಪಟು

ಆಟಗಾರರು ಸಂತೋಷದಿಂದ ಮಾತುಕತೆಯಲ್ಲಿ ತೊಡಗಿರುವ ದೃಶ್ಯ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಅವರು ತಮ್ಮ ಕೋಪದಿಂದ ಭಾರತೀಯ ಮಾಜಿ ನಾಯಕ ವಿರಾಟ್‌ ಮೇಲೆ ಕಾಮೆಂಟ್‌ ಮತ್ತು ಟ್ರೋಲ್‌ಗಳ ಮೂಲಕ ಕಿಡಿಕಾರಿದರು. ಕೆಲವರು ಅವರನ್ನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಿ, ಅವರು WTC 2003 ಫೈನಲ್‌ನಲ್ಲಿ ಸ್ಕೋರ್ ಮಾಡಲು ವಿಫಲವಾದ ನಂತರ ಮೂರು ದಿನಗಳವರೆಗೆ ತಿನ್ನಲು ಸಚಿನ್‌ ಅವರಿಗೆ ಸಾಧ್ಯವಾಗಿರಲಿಲ್ಲ ಎನ್ನುವ ಮೂಲಕ  ವಿರಾಟ್‌ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು.

ವಿರಾಟ್ ಕೊಹ್ಲಿ ತಮ್ಮ ವಿಚಾರವಾಗಿ ಮಾತನಾಡುವವರಿಗೆ ತಿರುಗಿ ಉತ್ತರ ನೀಡದೆ ಎಂದೂ ಬಿಟ್ಟಿಲ್ಲ. ಈ ಬಾರಿ ತಮ್ಮ ವಿರುದ್ದ ಟ್ರೋಲ್‌ ಮಾಡಿದವರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿ ವಿಭಾಗದಲ್ಲಿ ಅಮೆರಿಕದ ಲೇಖಕ ಮಾರ್ಕ್ ಮ್ಯಾನ್ಸನ್ ಅವರ ಸಂದೇಶವನ್ನು ಹಂಚಿಕೊಂಡಿದ್ದಾರೆ, "ಇತರರ ಅಭಿಪ್ರಾಯಗಳ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು" ಎಂದು ಕೊಹ್ಲಿಯ ಟ್ರೋಲಿಗರ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: Wrestlers Protest: 'ಆಕೆಯ ಜೊತೆಗೆ ಅನುಚಿತ ವರ್ತನೆ ನಡೆದಿತ್ತು...' ಬ್ರಿಜ್ ಭೂಷಣ್ ವಿರುದ್ಧ ಅಂತಾರಾಷ್ಟ್ರೀಯ ರೇಫರಿ ಹೇಳಿಕೆ

ಇತ್ತ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. "ಬಹುಶಃ ಸ್ವಾತಂತ್ರ್ಯವೆಂದರೆ ಜೀವನವು ಒಂದು ನಿರ್ದಿಷ್ಟ ಮಾರ್ಗವಾಗಿರಬೇಕು ಎಂಬ ನಂಬಿಕೆಯನ್ನು ಬಿಡುವುದು" ಎಂಬ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News