ಶುಭ್ಮನ್ ಗಿಲ್ ಅಲ್ಲವೇ ಅಲ್ಲ… ಈ 5 ಆಟಗಾರರಿದ್ದರೆ ಸಾಕು ಟೀಂ ಇಂಡಿಯಾಗೆ WTC ಟ್ರೋಫಿ ಕನ್ಫರ್ಮ್!

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಲಿದೆ. ಏಕೆಂದರೆ ಟೀಂ ಇಂಡಿಯಾದಲ್ಲಿರುವ ಆ 5 ಆಟಗಾರರು ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಟ್ರೋಫಿಯನ್ನು ಏಕಾಂಗಿಯಾಗಿ ಭಾರತಕ್ಕೆ ಗೆದ್ದು ಕೊಡುವ ಆ 5 ಭಯಾನಕ ಕ್ರಿಕೆಟಿಗರ ಬಗ್ಗೆ ತಿಳಿಯೋಣ.

Written by - Bhavishya Shetty | Last Updated : Jun 1, 2023, 01:17 PM IST
    • ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಲಿದೆ
    • ವಿಶ್ವದ ಈ ಎರಡು ಬಲಿಷ್ಠ ತಂಡಗಳು ಪರಸ್ಪರ ಸೆಣಸಾಡಿದರೆ ಸಂಭ್ರಮ ಉತ್ತುಂಗಕ್ಕೇರಲಿದೆ
    • ಟೀಂ ಇಂಡಿಯಾದಲ್ಲಿರುವ ಆ 5 ಆಟಗಾರರು ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಲಿದ್ದಾರೆ
ಶುಭ್ಮನ್ ಗಿಲ್ ಅಲ್ಲವೇ ಅಲ್ಲ… ಈ 5 ಆಟಗಾರರಿದ್ದರೆ ಸಾಕು ಟೀಂ ಇಂಡಿಯಾಗೆ WTC ಟ್ರೋಫಿ ಕನ್ಫರ್ಮ್! title=
Test Championship

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯವು ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತವು ವಿಶ್ವದ ನಂ.1 ತಂಡವಾಗಿದೆ ಮತ್ತು ಆಸ್ಟ್ರೇಲಿಯಾ ವಿಶ್ವದ ನಂ.2 ತಂಡವಾಗಿದೆ. ವಿಶ್ವದ ಈ ಎರಡು ಬಲಿಷ್ಠ ತಂಡಗಳು ಪರಸ್ಪರ ಸೆಣಸಾಡಿದರೆ ಸಂಭ್ರಮ ಉತ್ತುಂಗಕ್ಕೇರಲಿದೆ.

ಇದನ್ನೂ ಓದಿ: ಈತನೂ RCB ಪ್ಲೇಯರ್.. ಆದ್ರೆ ವಿರಾಟ್’ಗೆ ದೊಡ್ಡ ಶತ್ರು! WTC ಫೈನಲ್’ನಲ್ಲಿ ಈತನಿಂದಲೇ ಟೀಂ ಇಂಡಿಯಾಗೆ ಸಂಕಷ್ಟ!

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಲಿದೆ. ಏಕೆಂದರೆ ಟೀಂ ಇಂಡಿಯಾದಲ್ಲಿರುವ ಆ 5 ಆಟಗಾರರು ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಟ್ರೋಫಿಯನ್ನು ಏಕಾಂಗಿಯಾಗಿ ಭಾರತಕ್ಕೆ ಗೆದ್ದು ಕೊಡುವ ಆ 5 ಭಯಾನಕ ಕ್ರಿಕೆಟಿಗರ ಬಗ್ಗೆ ತಿಳಿಯೋಣ.

1. ರವೀಂದ್ರ ಜಡೇಜಾ: ರವೀಂದ್ರ ಜಡೇಜಾ ಅವರು ಟೀಮ್ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿದ್ದಾರೆ ಮತ್ತು ಅವರು ಏಕಾಂಗಿಯಾಗಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಟ್ರೋಫಿಯನ್ನು ಗೆದ್ದುಕೊಡಬಹುದು. ಇತ್ತೀಚೆಗೆ, ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ 2023 ರ ಫೈನಲ್‌ ನಲ್ಲಿ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಬಾರಿಸುವ ಮೂಲಕ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಸಾಧ್ಯವಾದ ವಿಜಯವನ್ನು ನೀಡಿದರು.  ಅಂತೆಯೇ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ರವೀಂದ್ರ ಜಡೇಜಾ ಆಲ್ ರೌಂಡರ್ ಪ್ರದರ್ಶನವನ್ನು ನೀಡಬಲ್ಲರು..

2. ಚೇತೇಶ್ವರ ಪೂಜಾರ:  ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನಲ್ಲಿ ಚೇತೇಶ್ವರ ಪೂಜಾರ ಟೀಮ್ ಇಂಡಿಯಾದ ಮಾರಕ ಅಸ್ತ್ರ ಎಂದು ಸಾಬೀತುಪಡಿಸುತ್ತಾರೆ. ಐಪಿಎಲ್ 2023 ಭಾರತದಲ್ಲಿ ನಡೆಯುತ್ತಿದ್ದಾಗ, ಚೇತೇಶ್ವರ ಪೂಜಾರ ಇಂಗ್ಲೆಂಡ್‌ ನಲ್ಲಿ ಕೌಂಟಿ ಕ್ರಿಕೆಟ್ ಆಡುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಬರಲಿದ್ದಾರೆ. ಚೇತೇಶ್ವರ ಪೂಜಾರ ಭಾರತ ಪರ 102 ಟೆಸ್ಟ್‌ಗಳಲ್ಲಿ 43.89 ಸರಾಸರಿಯಲ್ಲಿ 7154 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 19 ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ.

3. ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿ ಫಾರ್ಮ್‌ ನಲ್ಲಿ ಆಡುತ್ತಿದ್ದಾರೆ. ಐಪಿಎಲ್ 2023 ರಲ್ಲಿ, ವಿರಾಟ್ ಕೊಹ್ಲಿ 2 ಶತಕ ಮತ್ತು 6 ಅರ್ಧ ಶತಕಗಳ ಸಹಾಯದಿಂದ 639 ರನ್ ಗಳಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ತಡೆಗೋಡೆಯಾಗಿ ವಿರಾಟ್ ಕೊಹ್ಲಿ ನಿಲ್ಲುವುದು ಖಚಿತ. ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಸ್ಲೆಡ್ಜಿಂಗ್ ಮತ್ತು ಬ್ಯಾಟಿಂಗ್‌ ನಲ್ಲಿ ರನ್‌ ಗಳ ಮಳೆಯಿಂದ ವಿನಾಶವನ್ನುಂಟು ಮಾಡುತ್ತಾರೆ. ಕಳೆದ 9 ತಿಂಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ, ಏಕದಿನ ಅಂತಾರಾಷ್ಟ್ರೀಯ, ಟೆಸ್ಟ್ ಕ್ರಿಕೆಟ್ ಮತ್ತು ಐಪಿಎಲ್‌ ನಲ್ಲಿ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಭಾರತ ಪರ 108 ಟೆಸ್ಟ್ ಪಂದ್ಯಗಳಲ್ಲಿ 48.93 ಸರಾಸರಿಯಲ್ಲಿ 8416 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 28 ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

4. ಮೊಹಮ್ಮದ್ ಶಮಿ: ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಅತ್ಯಂತ ಅಪಾಯಕಾರಿ ವೇಗದ ಬೌಲರ್, ಕಳೆದ ಒಂದು ವರ್ಷದಿಂದ, ಮೊಹಮ್ಮದ್ ಶಮಿ ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ತುಂಬುತ್ತಿದ್ದಾರೆ. ಮೊಹಮ್ಮದ್ ಶಮಿ ಇತ್ತೀಚೆಗೆ ಐಪಿಎಲ್ 2023 ರಲ್ಲಿ ಗರಿಷ್ಠ 28 ವಿಕೆಟ್‌ ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲೂ, ಮೊಹಮ್ಮದ್ ಶಮಿ ಆಸ್ಟ್ರೇಲಿಯಾವನ್ನು ಸೋಲಿಸುವ ಲಕ್ಷಣ ಕಾಣುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 12 ಕೋಟಿಗೂ ಅಧಿಕ ವೀಕ್ಷಕರಿಂದ Tata IPL​-2023 ಫೈನಲ್​ ಪಂದ್ಯ ವೀಕ್ಷಣೆ..!

5. ಅಜಿಂಕ್ಯ ರಹಾನೆ: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಎಂಬುದನ್ನು ಸಾಬೀತುಪಡಿಸಲಿದ್ದಾರೆ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅಜಿಂಕ್ಯ ರಹಾನೆ ಅವರು 2014, 2018 ಮತ್ತು 2021ರ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಆಡಿದ ಅನುಭವ ಹೊಂದಿದ್ದಾರೆ. ಅಜಿಂಕ್ಯ ರಹಾನೆ ಅವರಂತಹ ಅನುಭವಿ ಬ್ಯಾಟ್ಸ್‌ಮನ್ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಆಡಿದಾಗ, ತಂಡ ಶಕ್ತಿ ಪಡೆಯುತ್ತದೆ. ಅಜಿಂಕ್ಯ ರಹಾನೆ 82 ಟೆಸ್ಟ್ ಪಂದ್ಯಗಳಲ್ಲಿ 12 ಶತಕಗಳನ್ನು ಬಾರಿಸುವ ಮೂಲಕ 4931 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News