Virat Kohli's Net Worth: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರು. ಕೇವಲ ಕ್ರಿಕೆಟ್ ಮಾತ್ರವಲ್ಲ… ಗಳಿಕೆ ಅಂತ ಬಂದಾಗ ಕೂಡ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಬಂದ ವರದಿ ಪ್ರಕಾರ 2023ರಲ್ಲಿ ವಿರಾಟ್ ಆಸ್ತಿ ಮೌಲ್ಯ 1000 ಕೋಟಿ ರೂ. ದಾಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸ್ಟಾಕ್ ಗ್ರೋ ಪ್ರಕಾರ, ವಿರಾಟ್ ಕೊಹ್ಲಿಯ ನಿವ್ವಳ ಮೌಲ್ಯ 1,050 ಕೋಟಿ ರೂ. (Virat Kohli Net worth). ವಿರಾಟ್ ಕ್ರೀಡೆಯಿಂದ ಮತ್ತು ಇತರ ಅನೇಕ ಪ್ಲಾಟ್ ಫಾರಂಗಳಿಂದ ಗಳಿಕೆ ಮಾಡುತ್ತಾರೆ.
'ಎ+' ಟೀಮ್ ಇಂಡಿಯಾ ಒಪ್ಪಂದದಿಂದ ವಿರಾಟ್ ಕೊಹ್ಲಿ ರೂ. 7 ಕೋಟಿ ಗಳಿಸುತ್ತಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ ನ ಒಂದು ಸೀಸನ್ ಗೆ ವಿರಾಟ್ 15 ಕೋಟಿ ರೂ. ಪಡೆಯುತ್ತಾರೆ. ಇದಲ್ಲದೆ, ಅವರು ಅನೇಕ ಬ್ರಾಂಡ್ ಗಳ ಮಾಲೀಕರೂ ಆಗಿದ್ದು, ಅದರಿಂದಲೂ ಹಣ ಬರುತ್ತದೆ.
ಇನ್ನು ವಿರಾಟ್ ಇನ್ಸ್ಟಾಗ್ರಾಂನಲ್ಲಿ 252 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಗಳಿಕೆ ಕೂಡ ಈ ಆದಾಯದ ಮೂಲದಲ್ಲಿ ಸೇರಿಕೊಂಡಿದೆ. ಹೂಪರ್ 2022-ಇನ್ಸ್ಟಾಗ್ರಾಂ ಶ್ರೀಮಂತ ಪಟ್ಟಿಯ ಪ್ರಕಾರ, ವಿರಾಟ್ ಪ್ರಾಯೋಜಿತ ಪೋಸ್ಟ್ ನಿಂದ ಸುಮಾರು 8.69 ಕೋಟಿ ರೂಪಾಯಿಗಳನ್ನು ಗಳಿಸುತ್ತಾರಂತೆ. ಟ್ವಿಟ್ಟರ್’ನಲ್ಲಿ ಒಂದು ಪೋಸ್ಟ್ ಗೆ 2.5 ಕೋಟಿ ಸಂಪಾದನೆ ಮಾಡುತ್ತಾರಂತೆ..
ವಿರಾಟ್ ಕೊಹ್ಲಿ ಬಳಿ ಐಷಾರಾಮಿ ಕಾರುಗಳ ಸಂಗ್ರಹವೂ ಇದೆ. ಇದರ ಜೊತೆಗೆ ಮುಂಬೈ ಮತ್ತು ಗುರುಗ್ರಾಂಬಲ್ಲಿ ಮನೆ ಹೊಂದಿದ್ದಾರೆ. ವಿರಾಟ್ ಅವರ ಗುರುಗ್ರಾಮ್ ಮನೆಯ ವೆಚ್ಚ ಸುಮಾರು 80 ಕೋಟಿ ರೂ, ಮತ್ತು ಮುಂಬೈನ ಮನೆಯ ವೆಚ್ಚ ಸುಮಾರು 34 ಕೋಟಿ ರೂ, ಇದೆ.