Vegetables Price: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಆಕಾಶ ಮುಟ್ಟುತ್ತಿದ್ದು ಜನ ಸಾಮಾನ್ಯರಿಗೆ ಬದುಕುವುದೇ ಕಷ್ಟ ಎಂಬಂತಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸೊಪ್ಪು ತರಕಾರಿಗಳ ಬೆಲೆ ಇಂದೂ ಕೂಡ ಏರಿಕೆ ಕಂಡಿದೆ.
ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ!
Everything Is Expensive: ನಾಳೆ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ ಈ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಹಣ್ಣು, ಹೂ, ತರಕಾರಿಗಳ ಬೆಲೆಯು ಏರಿಕೆಯಾಗಿದೆ. ಹಬ್ಬದ ಪ್ರಯುಕ್ತ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು ನಡೆಯುತ್ತಿದೆ.
ಅಕಾಲಿಕ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರುತ್ತಲೇ ಇದ್ದು, 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ ಕೆಜಿಗೆ 80 ರೂ ಆಗಿದೆ. ಇದು ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ಹಾಪ್ ಕಾಮ್ಸ್ ಗಳಲ್ಲಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ. ಅಲ್ಲದೇ ಪ್ರತೀ ನಿತ್ಯವೂ ತರಕಾರಿ ಹಾಗು ಹಣ್ಣುಗಳ ಬೆಲೆಯನ್ನು ಪರಿಷ್ಕರಣೆ ಮಾಡಿ ವಹವಾಟು ನಡೆಸುತ್ತಿದೆ.
ಪ್ರತಿನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಸುವ ಹಾಪ್ ಕಾಮ್ಸ್, ರೈತರು ಹಾಗು ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.