Price Hike: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ನೀಡಲಾಗುತ್ತಿರುವ "ಪಂಚ ಗ್ಯಾರೆಂಟಿ"ಗಳ ಖುಷಿ ಬೆನ್ನಲ್ಲೆ ಜನ ಸಾಮಾನ್ಯರಿಗೆ ದರ ಏರಿಕೆ ಶಾಕ್ ಉಂಟಾಗಿದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ ಆಗಿದೆ.
ಹೌದು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಈಗಾಗಲೇ ಪೆಟ್ರೋಲ್, ವಿದ್ಯುತ್ ದರಗಳ ಏರಿಕೆಯಿಂದ ಬಸವಳಿದಿದ್ದ ಸಾಮಾನ್ಯರಿಗೆ ಗಗನಾಮುಖಿ ಆಗುತ್ತಿರುವ ತರಕಾರಿ, ದಿನಸಿ ಬೆಲೆಗಳು ಮತ್ತಷ್ಟು ಹೊರೆಯಾಗಿವೆ. ಅಷ್ಟಕ್ಕೂ ರಾಜ್ಯದಲ್ಲಿ ದಿನಸಿ ಸೊಪ್ಪು-ತರಕಾರಿಗಳ ಬೆಲೆ ಏರಿಕೆಗೆ ಕಾಣವಾದರೂ ಏನು ಎಂದು ನೋಡುವುದಾದರೆ...
ರಾಜ್ಯದಲ್ಲಿ ಸೃಷ್ಟಿಯಾಗಲಿದಿಯಾ ಆಹಾರ ವಸ್ತುಗಳ ಅಭಾವ!
ಸೊಪ್ಪು ತರಕಾರಿಗಳಿಗೆ ಮಳೆ ಸಮಸ್ಯೆ ಕಾರಣ ಎನ್ನಬಹುದು. ಆದರೂ, ಬೇಳೆ ಕಾಳುಗಳ ಅಭಾವಕ್ಕೆ ಕಾರಣವೇನು....? ಮಳೆ ಅಭಾವ ಒಂದೇ ಕಾರಣಕ್ಕೆ ಪರಿಸ್ಥಿತಿ ಕೈ ಮೀರುತ್ತಿದೀಯಾ...? ಅಥವಾ ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಲಾಗ್ತಿದೀಯಾ...?
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವ್ಯಾಪಾರಿಗಳು ಕೃತಕ ಅಭಾವ ಸೃಷ್ಠಿ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ- Foreign Transaction: ನೀವೂ ವಿದೇಶ ವಹಿವಾಟು ನಡೆಸುತ್ತೀರಾ? ಜುಲೈ 1 ರಿಂದ ಬದಲಾಗುತ್ತಿದೆ ಈ ನಿಯಮ
ಈಗಾಗಲೇ ಕಳೆದ ಕೆಲ ತಿಂಗಳಿನಿಂದಲೂ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನ ಸಾಮಾನ್ಯರಿಗೆ ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಷ್ಟಕ್ಕೂ ತರಕಾರಿ, ದಿನಸಿ ವಸ್ತುಗಳ ಈ ಪ್ರಮಾಣದ ಅಭಾವಕ್ಕೆ ಕಾರಣವೇನು...?
* ರಾಜ್ಯದಲ್ಲಿ ಅನೇಕ ಕಡೆ ಮಳೆ ಅಭಾವದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
* ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿಯೂ ಇಳಿಕೆ ಕಂಡು ಬಂದಿದೆ.
* ಕಳೆದ ಬಾರಿ ಅತಿವೃಷ್ಠಿ ಮತ್ತು ನೆಟೆ ರೋಗಕ್ಕೆ 70% ನಷ್ಟು ತೊಗರಿ ಬೆಳೆ ನಷ್ಟವಾಗಿತ್ತು.
* ಅತಿವೃಷ್ಟಿಯಿಂದ ಹಲಸಂದಿ, ಹುರುಳಿ ಬೇಳೆ ಕೂಡ ನಷ್ಟವಾಗಿದ್ದು ದರ ಏರಿಕೆ ಕಂಡಿದೆ.
ಈ ಬಾರಿ ಕೂಡ ಮುಂಗಾರು ರಾಜ್ಯದ ಹಲವೆಡೆ ಕೈ ಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿರೋದು ಈ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬೇಳೆಕಾಳುಗಳು | ಹಳೆಯ ದರ (ರೂಪಾಯಿಗಳಲ್ಲಿ) | ಹೊಸ ದರ (ರೂಪಾಯಿಗಳಲ್ಲಿ) |
ತೊಗರಿ ಬೇಳೆ | 125 | 160 |
ಹೆಸರುಬೇಳೆ | 74 | 105 |
ಅವರೆ ಬೇಳೆ | 140 | 180 |
ಉದ್ದಿನ ಬೇಳೆ | 100 | 135 |
ಜೀರಿಗೆ | 186 | 600 |
ಹಲಸಂದಿ | 100 | 120 |
ಹುರುಳಿ | 60 | 105 |
ಹುಣಸೆಹಣ್ಣು | 126 | 180 |
ರಾಜ್ಮಾ | 99 | 135 |
ಮೆಣಸಿನ ಪುಡಿ | 186 | 425 |
ದನಿಯಾ ಪೌಡರ್ | 150 | 218 |
ಮೆಣಸು | 380 | 529 |
ಏಲಕ್ಕಿ | 1150 | 1850 |
ಬ್ಯಾಡಗಿ ಮೆಣಸಿನಕಾಯಿ | 330 | 850 |
ಗೋಧಿ ಹಿಟ್ಟು | 26 | 32 |
ಮೈದಾ | 28 | 36 |
ತರಕಾರಿಗಳು |
ಕಳೆದ ವಾರದ ಬೆಲೆ (ರೂಪಾಯಿಗಳಲ್ಲಿ) |
ಈ ವಾರದ ಬೆಲೆ (ರೂಪಾಯಿಗಳಲ್ಲಿ) |
ಬೀನ್ಸ್ | 60 | 110 |
ಕ್ಯಾರೇಟ್ | 50 | 90 |
ಮೂಲಂಗಿ | 25 | 49 |
ನುಗ್ಗೆಕಾಯಿ | 80 | 100 |
ಬೀಟ್ ರೂಟ್ | 35 | 50 |
ಹಸಿಮೆಣಸಿನಕಾಯಿ | 95 | 115 |
ಬೆಂಡೆಕಾಯಿ | 30 | 54 |
ಬೆಳ್ಳುಳ್ಳಿ | 145 | 170 |
ಟಮೋಟೊ | 35 | 65 |
ಕರಿಬೇವು | 50 | 80 |
ಕೊತ್ತಂಬರಿ ಸೊಪ್ಪು(ಕಂತೆ) | 10 | 45 |
ನವಿಲು ಕೋಸು | 35 | 70 |
ಶುಂಠಿ | 120 | 200 |
ಹಣ್ಣುಗಳು |
ಕಳೆದ ವಾರದ ಬೆಲೆ (ರೂಪಾಯಿಗಳಲ್ಲಿ) |
ಈ ವಾರದ ಬೆಲೆ (ರೂಪಾಯಿಗಳಲ್ಲಿ) |
ಸೇಬು | 180 | 288 |
ಮೂಸಂಬಿ | 70 | 114 |
ದಾಳಿಂಬೆ | 180 | 278 |
ಅನಾನಸ್ | 40 | 60 |
ಸಪೋಟ | 80 | 107 |
ಏಲಕ್ಕಿ ಬಾಳೆ | 60 | 74 |
ಇದನ್ನೂ ಓದಿ- Free Travel For Senior Citizen: ಇನ್ಮುಂದೆ ಹಿರಿಯ ನಾಗರಿಕರಿಗೂ ಉಚಿತ ಬಸ್ ಸೇವೆ!
ಮದ್ಯ ಪ್ರಿಯರನ್ನೂ ಕಾಡ್ತಿದೆ ಬೆಲೆ ಏರಿಕೆ ಬಿಸಿ!
ಮದ್ಯ ಪ್ರಿಯರಿಗೂ ಕುಡಿಯೋ ಮುಂಚೇನೆ ಕಿಕ್ ಏರಿಸುತ್ತಿರೋ ಕೆಲ ಮದ್ಯಗಳ ದರ.
>> ಕಳೆದ 15 ದಿನಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಬರೆ.
>> ಕುಡಿಯೋ ಮುಂಚೆ ದರ ಕೇಳಿದ್ರೆನೆ ತಲೆ ಗಿರ್ ಗಿಟ್ಲೇ.
>> ಪ್ರತಿ ಬಿಯರ್ ಮೇಲೂ 10ರಿಂದ 20 ರೂ ಏರಿಕೆ.
>> ಇತ್ತ ಸರ್ಕಾರ ಸುಂಕ ಏರಿಕೆ ಮಾಡದೇ ಇದ್ದರೂ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನೆ ಕಂಪನಿಗಳು.
>> ಇತ್ತ ಮತ್ತೆ ಹೊಸ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳದ ಭೀತಿ ಬೇರೆ.
>> ಸದ್ಯ ಕುಡಿದಾಗ ಕಿಕ್ ಏರಿದ್ರು, ಬಿಲ್ ಕೊಡುವಾಗಲೇ ಕಿಕ್ ಇಳಿಯೋ ಸ್ಥಿತಿಯಲ್ಲಿ ಮದ್ಯ ಪ್ರಿಯರು.
ಬಿಯರ್ ಗಳ ಹೆಸರು | ಹಳೆಯ ದರ (ರೂಪಾಯಿಗಳಲ್ಲಿ) | ಹೊಸ ದರ (ರೂಪಾಯಿಗಳಲ್ಲಿ) |
ಬಡ್ ವೈಸರ್ | 198 | 220 |
ಕಾರ್ಲ್ಸ್ ಬರ್ಗ್ | 190 | 220 |
ಬ್ಲಾಕ್ ಫೋಟ್ | 135 | 155 |
ಟುಬರ್ಗ್ | 140 | 150 |
ಹೇನಿಕೇನ್ | 210 | 235 |
ಕೊರೋನಾ | 220 | 235 |
ಕಿಂಗ್ ಫಿಶರ್ | 160 | 170 |
ಯುಬಿ ಪ್ರೀಮಿಯಂ | 125 | 135 |
ಯುಬಿ ಸ್ಟ್ರಾಂಗ್ | 130 | 135 |
ಕಿಂಗ್ ಫಿಶರ್ ಅಲ್ಟ್ರಾ | 190 | 220 |
ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೆ ಹೊಟೇಲ್ ಮಾಲೀಕರಿಂದಲೂ ಶಾಕ್..!?
ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಹೊಟೇಲ್ ಉದ್ಯಮದಿಂದಲೂ ಜನಸಾಮಾನ್ಯನಿಗೆ ಬರೆ ಎಳೆಯುವ ನಿರೀಕ್ಷೆಯಿದೆ. ಸದ್ಯದಲ್ಲೇ ಹೊಟೇಲ್ ತಿಂಡಿ ತಿನಿಸುಗಳು ದುಬಾರಿಯಾಗುವ ಸಾಧ್ಯತೆ ಇದೆ. ವಿದ್ಯುತ್, ಅಕ್ಕಿ, ಕಾಳು, ಸೊಪ್ಪು, ತರಕಾರಿ ದರ ಏರಿಕೆ ಬೆನ್ನಲ್ಲೆ ಹೊಟೇಲ್ ಗಳಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ದರ ಏರಿಕೆಯ ಹೊಡೆತದಿಂದ ಉದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡಿರುವ ಹೊಟೇಲ್ ಮಾಲೀಕರು, ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ ಬೆಲೆ ಏರಿಕೆಯ ಎಚ್ಚರಿಕೆ ಕೊಟ್ಟಿದ್ದು, ಅಗತ್ಯವಾಗಿ ನಾವು ಕೂಡ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.