ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡುತ್ತಿರುವುದು ಒಳ್ಳೆಯದಲ್ಲ... ನಾವು ಚಳವಳಿ ಹೋರಾಟ ನಡೆಸುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ... ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ಕಿಡಿ... ಕನ್ನಡಿಗರ ಶಾಂತಿ ಸಹನೆಯ ನಡೆಯನ್ನು ಕೇಂದ್ರ ಗಮನಿಸುತ್ತಿಲ್ಲ
ಕಾವೇರಿ ನೀರು ಪ್ರಾಧಿಕಾರದ ವಿರುದ್ಧ ಸಿಡಿದೆದ್ದ ವಾಟಾಳ್ ನಾಗರಾಜ.. ಮೈಸೂರು ಬ್ಯಾಂಕ್ ಸರ್ಕಲ್ನಲ್ಲೇ ಕುಳಿತು ವಿಭಿನ್ನ ಪ್ರತಿಭಟನೆ.. ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ವಾಟಾಳ್ ಆಗ್ರಹ
ಕಾವೇರಿ ನೀರು ಡೆಡ್ ಸ್ಟೋರೆಜ್ ನತ್ತ ಸಾಗ್ತಿದ್ರೂ ತಮಿಳುನಾಡಿಗೆ ಬಿಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದೇ ರೀತಿ ಮುಂದುವರೆದರೆ ರಾಜ್ಯದ ಜನರಿಗೆ ನೀರನ ಸಂಕಷ್ಟ ಎದುರಾಗುತ್ತೆ.ರಾಜ್ಯದಲ್ಲಿ ಬರಗಾಲ ಆವರಿಸುತ್ತೆ ಎಂದು ಬೇಸರವನ್ನ ವ್ಯಕ್ತಿಪಡಿಸಿದ್ದಾರೆ.
ದಿನಬಳೆಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಚಿನ್ನದ ಬೆಲೆಯ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಜನಸಮಾನ್ಯರಿಗೆ ಕೈಗೆಟುಕದ ರಿತ್ತಿಯಲ್ಲಿ ಆಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಕೇಳುವರಿಲ್ಲ ಹೇಳುವರಿಲ್ಲ ಎನ್ನುವ ಪರಿಸ್ಥಿತಿ ಸ್ವಾತಂತ್ರ್ಯ ಬಂದು 76 ವರ್ಷವಾದರೂ ದೇಶ ಮತ್ತು ರಾಜ್ಯದಲ್ಲಿ ಉಂಟಾಗಿದೆ ಎಂದು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರವರು ಇಂದು ಮಧ್ಯಾಹ್ನ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ 1 ರೂ.ಗೆ ರಾಗಿ ಮುದ್ದೆ, ಸಾರು ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
Karnataka Assembly Election: ಸಿದ್ದರಾಮಯ್ಯ ಅವರಂತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಪ್ರಧಾನಿ ಇಲ್ಲಿಗೆ ಬಂದು ಭಾವನಾತ್ಮಕವಾಗಿ ಮಾತನಾಡಿ ಹೋಗುತ್ತಾರೆ. ಆದರೆ, 40% ಲಂಚದ ಬಗ್ಗೆ ಅವರೆಲ್ಲೂ ಮಾತನಾಡಲ್ಲ, ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ, ಲಂಚ ತಿನ್ನಲ್ಲ -ತಿನ್ನಲು ಬಿಡಲ್ಲ ಎನ್ನುತ್ತಾರೆ. ಇಲ್ಲಿ ಬಿಜೆಪಿ ಅವರು 40% ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
Karnataka assembly Election: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಶಾಸಕ ವಾಟಾಳ್ ನಾಗರಾಜ್, ಚಾಮರಾಜನಗರದ ಮಾರಿಗುಡಿ ಬೀದಿಯಲ್ಲಿನ ಹಣ್ಣು ಮಾರಾಟಗಳ ಗಾಡಿಗಳಲ್ಲಿ ಕುಳಿತು ಮಾವು, ಸೇಬು, ಬಾಳೆ ಮಾರಾಟ ಮಾಡಿ ಮತಬೇಟೆ ನಡೆಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಬಹುಪಾಲು ಮಂದಿ ರೈತರು ಬಾಳೆ, ಅರಿಶಿಣ ಹಾಗೂ ಟೊಮ್ಯಾಟೊ, ಸಣ್ಣ ಈರುಳ್ಳಿಯನ್ನು ಬೆಳೆಯಲಿದ್ದು ತಮಿಳುನಾಡು ಮತ್ತು ಮೈಸೂರು ಉತ್ತಮ ಮಾರುಕಟ್ಟೆಗಳಾಗಿದೆ. ಹಾಗಾಗಿಯೇ ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮೆಟೊ, ಬಾಳೆ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕೆಂದು ಇಲ್ಲಿನ ಜನರ ಬಹುವರ್ಷಗಳ ಬೇಡಿಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.