Tamil Nadu Fraud Case: ಬ್ಯೂಟಿ ಪಾರ್ಲರ್ನಲ್ಲಿ ನಕಲಿ ಪೊಲೀಸ್ ಆಂಟಿಯ ಮುಖವಾಡ ಬಟಾ ಬಯಲಾಗಿರುವ ಘಟನೆ ನಡೆದಿದೆ. ಹೌದು, ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನನ್ನು ಬಿಟ್ಟು ಲವರ್ ಜೊತೆಗೆ ಸೇರಿಕೊಂಡು ತಾನು ಸಬ್ ಇನ್ಸ್ಪೆಕ್ಟರ್ ಅನ್ನುತಾ ಸಿಕ್ಕ ಸಿಕ್ಕಲ್ಲಿ ಅವಾಜ್ ಹಾಕಿ ಅಲೆದಾಡುತ್ತಿದ್ದ ಆಂಟಿಯ ಅಸಲಿ ಬಣ್ಣ ಬ್ಯೂಟಿ ಪಾರ್ಲರ್ನಲ್ಲಿ ಬಯಲಾಗಿದೆ. ಅಭಿಪ್ರಭಾ (34) ಎಂಬ ನಕಲಿ SI ಇದೀಗ ಖಾಕಿ ಬಲೆಗೆ ಸಿಕ್ಕಿ ಬಿದ್ದಿದ್ದಾಳೆ.
ಮಧುರೈ ಮೂಲದ ಥೇನಿ ಪೆರಿಯಕುಲಂನ ನಿವಾಸಿ ಅಭಿಪ್ರಭಾ ವಂಚನೆ ಮತ್ತು ಪೊಲೀಸರ ವೇಷ ಧರಿಸಿ ಅನೇಕರಿಗೆ ಬೆದರಿಕೆ ಹಾಕಿದ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾಳೆ. ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ನ ಬ್ಯೂಟಿಪಾರ್ಲರ್ಗೆ ತೆರಳಿದ್ದ ಅಭಿಪ್ರಭಾ ಫೇಶಿಯಲ್ ಮಾಡಿಸಿದ್ದಾಳೆ. ಬಳಿಕ ʼನಾನು ದುಡ್ಡು ಕೊಡಲ್ಲ, ನಾನ್ಯಾರು ಗೊತ್ತಿಲ್ವಾ.. ನಾನು ಪೊಲೀಸ್ʼ ಅಂತಾ ಅವಾಜ್ ಹಾಕಿ ಹೋಗಿದ್ದಾಳೆ.
ಇದನ್ನೂ ಓದಿ: ರೈಲಿನ ಪ್ರತಿಯೊಂದು ಬೋಗಿಯ ಮೇಲೆ ಈ ರೀತಿಯ ವೃತ್ತಾಕಾರದ ಮುಚ್ಚಳಗಳು ಏಕೆ ಇರುತ್ತವೆ ಗೊತ್ತೆ..?
ನಕಲಿ SI ಮಾತಿನ ಧಾಟಿಯಿಂದ ಅನುಮಾನಗೊಂಡ ಪಾರ್ಲರ್ನ ವೆಂಕಟೇಶ್ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಖಾಕಿ ಟೀಂ ಅಭಿಪ್ರಭಾಳನ್ನು ಅರೆಸ್ಟ್ ಮಾಡಿದ್ದಾರೆ. ಅವಳನ್ನು ವಿಚಾರಣೆ ನಡೆಸಿದಾಗ ಆಕೆ ಅನೇಕರಿಗೆ ಪೊಲೀಸರ ಸೋಗಿನಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಅಭಿಪ್ರಭಾಳ ಮೊಬೈಲ್ ಪರಿಶೀಲಿಸಿದ್ದ ಪೊಲೀಸರಿಗೆ ವಿವಿಧ ನಗರಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿರುವ ಡಿಫರೆಂಟ್ ಫೋಸ್ನ ಫೋಟೋಗಳು ಕಂಡುಬಂದಿದೆ. 13 ವರ್ಷಗಳ ಹಿಂದೆ ಓರ್ವನನ್ನು ಮದುವೆಯಾಗಿದ್ದ ಆಕೆ ಆತನಿಂದ ವಿಚ್ಛೇದ ಪಡೆದು, ನಂತರ ಓರ್ವನೊಂದಿಗೆ ಲವ್ನಲ್ಲಿದ್ದಳು. ಲವರ್ ಜೊತೆಗೆ ಸೇರಿ ಪೊಲೀಸರ ಸೋಗಿನಲ್ಲಿ ಈ ದಂಧೆ ಮಾಡುತ್ತಿದ್ದಳು ಅಂತಾ ತನಿಖೆಯಿಂದ ಬಯಲಾಗಿದೆ. ಖಾಕಿಪಡೆ ಇದೀಗ ಆಕೆಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಉಲ್ಟಾ ಪಲ್ಟಾ ಬರೆದರೂ ಈ ಊರಿನ ಹೆಸರು ಮಾತ್ರ ಬದಲಾಗಲ್ಲ..! ಗದಗ ಅಲ್ಲ.. ಬೇರೆ ಜಿಲ್ಲೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ