Bike Taxi Ban: ಬೈಕ್ ಚಾಲಕರು ಹಾಗೂ ಆಟೋ ಚಾಲಕರ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಲಾಗಿದೆ. ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಲು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಕಾನೂನು ಸುವ್ಯವಸ್ಥೆ, ದಕ್ಕೆ, ರಾಜಸ್ವ ಸಂಗ್ರಹಕ್ಕೆ ಹಿನ್ನಡೆ ಹಾಗೂ ಮಹಿಳೆಯರಿಗೆ ಅಸುರಕ್ಷಿತ ಸೇರಿ ಹಲವು ಕಾರಣ ನೀಡಿ ಬ್ಯಾನ್ ಮಾಡಿ ಆದೇಶಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳು ಸಂತಸ ವ್ಯಕ್ತಪಡಿಸಿವೆ.
ವೀಕೆಂಡ್ ಕರ್ಪ್ಯೂ (Weekend Curfew) ಸಂದರ್ಭದಲ್ಲಿ ಅಂದರೆ ಶನಿವಾರ, ಭಾನುವಾರ ಸಾರಿಗೆ (Transport) ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ ಬಿಎಂಟಿಸಿ ಬಹುತೇಕ ಸ್ತಬ್ಧವಾಗಲಿದೆ. ವೀಕೆಂಡ್ ಕರ್ಫ್ಯೂ ದಿನ ಶೇ. 10ರಷ್ಟು ಬಿಎಂಟಿಸಿ ಬಸ್ ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಆದರೆ ಈ ಬಸ್ ಗಳು ಸಾಮಾನ್ಯ ಪ್ರಯಾಣಿಕರ ಓಡಾಟಕ್ಕೆ ಲಭ್ಯವಿರುವುದಿಲ್ಲ.
ಶೀಘ್ರದಲ್ಲಿಯೇ ದೇಶದ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜ್ಯಗಳು ಜೈವಿಕ ಇಂಧನ, ಸಿಎನ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಸಾರ್ವಜನಿಕ ಸಾರಿಗೆಗೆ ಬಳಸುವಂತೆ ಅವರು ಕೋರಿದ್ದಾರೆ.
ನಿತಿನ್ ಗಡ್ಕರಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದ ಸವದಿ, ಲಾಕ್ ಡೌನ್ ನಿಂದಾಗಿ ಕರ್ನಾಟಕದ ಸಾರಿಗೆ ವಲಯದ ಮೇಲೆ ಯಾವ ರೀತಿ ದುಷ್ಪರಿಣಾಮ ಉಂಟಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಆರೋಗ್ಯ ಸೇವೆಗೆ ವಾಹನಗಳೊಂದಿಗೆ ತೆರಳುವ ಚಾಲಕರಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಮತ್ತು ವೈದ್ಯಕೀಯ ಪರಿಕರಗಳನ್ನು, ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.