ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ

HSRP Number Plate: ರಾಜ್ಯದಲ್ಲಿ ಈಗಾಗಲೇ ಶೇಕಡಾ 72ರಷ್ಟು ಅಂದರೆ 47,64,293 ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿವೆ. 

Written by - Yashaswini V | Last Updated : Jul 10, 2024, 11:26 AM IST
  • ಈಗಾಗಲೇ ಶೇಕಡಾ 72% ರಷ್ಟು ಅಂದರೆ 47,64,293 ವಾಹನಗಳು HSRP ನಂಬರ್ ಪ್ಲೇಟ್ ಅಳವಡಿಕೆ
  • ಎಚ್‌ಎಸ್‌ಆರ್‌ಪಿ ಕಡ್ಡಾಯ ನಂಬರ್ ಪ್ಲೇಟ್ ಖಡ್ಡಾಯದ ದಿನಾಂಕ ಮುಂದೂಡಿದ ಸಾರಿಗೆ ಇಲಾಖೆ
  • 2024 ರ ಸೆಪ್ಟೆಂಬರ್ 15ರ ವರೆಗೆ ಗಡುವು ವಿಸ್ತರಣೆ ಮಾಡಿ ಆದೇಶ
ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ title=

HSRP Number Plate: ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿರುವ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗಾಗಿ ನಿಗದಿಗೊಳಿಸಿದ್ದ ಅಂತಿಮ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದ್ದು 2024ರ ಸೆಪ್ಟೆಂಬರ್ 15ರವರೆಗೆ ಗಡುವು ಮುಂದೂಡಿಕೆ ಮಾಡಲಾಗಿದೆ. ಇಂದು ಕರ್ನಾಟಕ ಗೆಜೆಟ್ ನಲ್ಲೂ ಈ ಬಗ್ಗೆ ಅಂತಿಮ‌ ಅದಿಸೂಚನೆ ಪ್ರಕಟವಾಗಲಿದೆ. 

ಈಗಾಗಲೇ 72% ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ: 
ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಗಸ್ಟ್ 18, 2023ರಿಂದ ಜುಲೈ 05, 2024ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 47,74,293 ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) (Highly Secure Registration Plates-HSRP) ಅಳವಡಿಸಲಾಗಿದೆ. ಇನ್ನುಳಿದಂತ ವಾಹನಗಳ ಮಾಲೀಕರಿಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್  ಪ್ಲೇಟ್ ಅಳವಡಿಸಿಕೊಳ್ಳಲು 2024ರ ಸೆಪ್ಟೆಂಬರ್ 15ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ಪ್ರತೀ ವಾಹನದ ಮೇಲೆ 1 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. 

ಇದನ್ನೂ ಓದಿ- PPFನಿಂದ NPSವರೆಗೆ ನೌಕರರಿಗಾಗಿ ಇಲ್ಲಿದೆ ಟಾಪ್ 5 ಉತ್ತಮ ಹೂಡಿಕೆ ಆಯ್ಕೆಗಳು

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಎಚ್ಚರಿಕೆ ನೀಡಿರುವ RTO: 
ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಕೂಡ ಎಚ್ಚರಿಕೆ ನೀಡಿರುವ ಆರ್‌ಟಿ‌ಓ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಸರ್ಕಾರ ನಿಗಡಿಗೊಳಿಸಿರುವ ಹಣವನ್ನಷ್ಟೇ ಸ್ವೀಕರಿಸಬೇಕು. ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಹಣ ವಸೂಲಿ ಮಾಡಿದ ಡೀಲರ್ ಗಳ ಹೆಸರುಗಳನ್ನು ಬ್ಲಾಕ್ ಲಿಸ್ಟ್ ನಲ್ಲಿ ಹಾಕಲಾಗುತ್ತದೆ ಎಂದು ತಿಳಿಸಿದೆ. 

HSRP ಎಂದರೇನು? 
ಎಚ್‌ಎಸ್‌ಆರ್‌ಪಿ- ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್‌  ಹೊಸ ರೀತಿಯ ಟ್ಯಾಂಪರ್ ಪ್ರೂಫ್ ನಂಬರ್ ಪ್ಲೇಟ್ ಆಗಿದ್ದು, ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿದೆ. ಒಮ್ಮೆ ಸ್ಥಾಪಿಸಿದ ನಂತರ, ಲಾಕ್ ಅನ್ನು ಮುರಿಯುವ ಮೂಲಕ ಮಾತ್ರ ಅದನ್ನು ತೆಗೆದುಹಾಕಬಹುದು, ಅದನ್ನು ಬದಲಾಯಿಸಲು ಕಷ್ಟವಾಗುತ್ತದೆ. 

ಇದನ್ನೂ ಓದಿ- ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗೆ ವೇಗ-ಸಿಎಂ

ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಎಲ್ಲಾ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಏಕರೂಪದ ಫಾಂಟ್ ಮತ್ತು ವಿನ್ಯಾಸವನ್ನು ಹೊಂದಿದ್ದು, ಎಡಭಾಗದಲ್ಲಿ ನೀಲಿ 'ಚಕ್ರ' ಚಿಹ್ನೆಯನ್ನು ಹೊಂದಿರುತ್ತದೆ. ಪ್ಲೇಟ್‌ನ ಹಿನ್ನೆಲೆ ಬಣ್ಣವು ವಾಹನದ ಪ್ರಕಾರವನ್ನು ಆಧರಿಸಿ ಬದಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News