ಆಗಸ್ಟ್ 7ಕ್ಕೆ ದೇಶಾದ್ಯಂತ ಸಾರಿಗೆ ಮುಷ್ಕರ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಬಸ್ ಗಳ ಓಡಾಟ ಆಗಸ್ಟ್ 7 ರಂದು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

Last Updated : Jul 30, 2018, 03:23 PM IST
ಆಗಸ್ಟ್ 7ಕ್ಕೆ ದೇಶಾದ್ಯಂತ ಸಾರಿಗೆ ಮುಷ್ಕರ title=

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೋಟಾರು ವಾಹನ ಕಾಯ್ದೆ ವಿರೋಧಿಸಿ ದೇಶಾದ್ಯಂತ ಆಗಸ್ಟ್ 7 ರಂದು ಸಾರಿಗೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

20 ಅಂಶಗಳನ್ನೊಳಗೊಂಡ ಮೋಟಾರು ಸಾರಿಗೆ ಕಾಯ್ದೆ-2017ನ್ನು ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು, ಲೋಕಸಭೆಯ ಅಂಗೀಕಾರವಾಗಬೇಕಿದೆ. ಇದು ಖಾಸಗಿ ಕಂಪನಿಗಳ ಹುನ್ನಾರವಾಗಿದ್ದು, ಈ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಆಗಸ್ಟ್​ 7ರಂದು ರಾಜ್ಯ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ವಿಭಾಗ ಸೇರಿದಂತೆ ಸಾರಿಗೆ ಸಂಘಟನೆಗಳು ಮುಷ್ಕರ ನಡೆಸಲು ಮುಂದಾಗಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಬಸ್ ಗಳ ಓಡಾಟ ಆಗಸ್ಟ್ 7 ರಂದು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಮೋಟಾರು ಸಾರಿಗೆ ಕಾಯ್ದೆ-2017ರಲ್ಲಿ ಜಾರಿಗೆ ತರಲು ಹೊರಟಿರುವ ವಾಹನಗಳ ಅಪಘಾತವಾದರೆ ಚಾಲಕರಿಗೆ 10 ಲಕ್ಷದ ವರೆಗೆ ದಂಡ, ಲೈಸನ್ಸ್ ರಿನೀವಲ್ ಶುಲ್ಕ ಪ್ರಮಾಣ ಹೆಚ್ಚಳ, ಸಿಗ್ನಲ್ ಜಂಪ್ ಅಪರಾಧಕ್ಕೆ 1,500ರೂ. ದಂಡ  ಸೇರಿದಂತೆ ಈ ಕಾಯ್ದೆಯಲ್ಲಿ ಹಲವು ನಿಯಮಗಳಲ್ಲಿ ಬದಲಾವಣೆ ತರಬೇಕು. ಇಲ್ಲವಾದರೆ ದೇಶಾದ್ಯಂತ ಮುಷ್ಕರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಂಘಟನೆಗಳು ತಿಳಿಸಿವೆ.
 

Trending News