Tejas Movie: ಮಂಗಳವಾರ ಲಕ್ನೋದ ಲೋಕಭವನ ಸಭಾಂಗಣದಲ್ಲಿ ನಟಿ ಕಂಗನಾ ರನೌತ್ ಇತ್ತೀಚೆಗೆ ತೆರೆಗೆ ಬಂದ ಬಾಕ್ಸ್ ಆಫೀಸ್ನಲ್ಲಿ ಪ್ಲಾಪ್ ಆಗಿರುವ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರವನ್ನು ವೀಕ್ಷಿಸಿದ ಬಳಿಕ ಭಾವುಕರಾಗಿದ್ದಾರೆ.
Kangana Ranaut : ವಿಭಿನ್ನ ಸಿನಿಮಾಗಳ ಮೂಲಕ ಡಿಫರೆಂಡ್ ರೋಲ್ನಲ್ಲಿ ಕಂಗನಾ ಅಭಿಮಾನಿಗಳನ್ನು ತೆರೆ ಮೇಲೆ ರಂಜಿಸುತ್ತಾ ಬಂದಿದ್ದಾರೆ. ಸದ್ಯ ಕಂಗನಾ ಅಭಿನಯದ ತೇಜಸ್ ಸಿನಿಮಾ ತೆರೆತಂಡಿದೆ. ಈ ವೇಳೆ ಹಿರಿಯ ನಟ ಅನುಪಮ್ ಖೇರ್ ಕಂಗನಾ ಅವರನ್ನು ಹೊಗಳಿದ್ದಾರೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಆಧುನಿಕ ಜಗತ್ತಿನಲ್ಲಿ ಶಸ್ತ್ರಾಸ್ತ್ರ ಬೇಡ ಎನ್ನುವ ರಾಷ್ಟ್ರವೇ ಇಲ್ಲ. ಏಕೆಂದರೆ ತನ್ನ ದೇಶವನ್ನು ಕಾಪಾಡಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳುವ ಅನಿವಾರ್ಯತೆ ಪ್ರತಿಯೊಂದು ರಾಷ್ಟ್ರಕ್ಕೂ ಇರುತ್ತದೆ. ಬಹುತೇಕ ದೇಶಗಳು ತಮಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತವೆ. ಆದರೆ ಈ ಜಗತ್ತಿನಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಯುದ್ಧ ಸಾಮಗ್ರಿಗಳನ್ನ ರಫ್ತು ಮಾಡುತ್ತವೆ. ಈ ಸಾಲಿನಲ್ಲಿ ಭಾರತದ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಅತ್ಯದ್ಭುತವಾಗಿದೆ.
ಏರೋ ಇಂಡಿಯಾದ ಏರೋ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ, ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ವಾಯುಸೇವೆ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದಿದ್ದಾರೆ.
Aero india 2021: ಸಂಯೋಜಿತ ವಾಯು ಕಾರ್ಯಾಚರಣೆ ತಂಡ, ಅಂದರೆ ಸಿಎಟಿಎಸ್ ಮುಖ್ಯ ತೇಜಸ್ ಫೈಟರ್ ಜೆಟ್ ಅನ್ನು ಹೊಂದಿದೆ, ಇದು ಪ್ರಸ್ತುತ ತೇಜಸ್ನ ಅತ್ಯಾಧುನಿಕ ರೂಪವಾಗಿದೆ. ಇದರೊಂದಿಗೆ ಕ್ಯಾಟ್ ವಾರಿಯರ್ ಇರುತ್ತದೆ, ಇದು ದೊಡ್ಡ ಗಾತ್ರದ ಸಶಸ್ತ್ರ ಯುದ್ಧ ಯುಎವಿ ಆಗಿದೆ. ನೆಲ-ದಾಳಿ, ಗಾಳಿಯಿಂದ ಗಾಳಿಗೆ ಕ್ಷಿಪಣಿಗಳ ಜೊತೆಗೆ, ಕ್ಯಾಟ್ ವಾರಿಯರ್ನಲ್ಲಿ ಗ್ಲೈಡ್ ಬಾಂಬ್ ಕೂಡ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
Mega Defence Deal: ಹಿಂದುಸ್ತಾನ್ ಏರೋನ್ಯಾಟಿಕ್ಸ್ ಮೂಲಕ ಲಿಮಿಟೆಡ್ ತಯಾರಿಸಿರುವ ಈ ವಿಮಾನಗಳಿಗಾಗಿ 48 ಸಾವಿರ ಕೋಟಿ ರೂ.ಗಳ ಡೀಲ್ ಮಾಡಿಕೊಳ್ಳಲಾಗಿದೆ. ಇದು ಭಾರತದ ಇದುವರೆಗಿನ ಅತಿ ದೊಡ್ಡ ಸ್ವದೇಶಿ ಡೀಲ್ ಆಗಿದೆ.
ಭಾರತೀಯ ವಾಯುಪಡೆ (ಐಎಎಫ್) ತನ್ನ ಫೈಟರ್ ಸ್ಕ್ವಾಡ್ರನ್ ಬಲವನ್ನು ಹೆಚ್ಚಿಸಲು 36 ಫ್ರೆಂಚ್ ರಾಫೆಲ್ ಜೆಟ್ಗಳನ್ನು ಮತ್ತು ಸ್ಥಳೀಯ ತೇಜಸ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಯನ್ನು ಸೇರ್ಪಡೆಗೊಳಿಸುತ್ತಿದೆ.
ಡಿಆರ್ಡಿಒ, ಎಡಿಎ ಅಭಿವೃದ್ಧಿಪಡಿಸಿದ ಎಲ್ಸಿಎ ನೇವಿ, ಸಮುದ್ರ ಆಧಾರಿತ ಪರೀಕ್ಷಾ ಕೇಂದ್ರದಲ್ಲಿ ವ್ಯಾಪಕ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಶನಿವಾರ ಬೆಳಿಗ್ಗೆ 10.02 ಕ್ಕೆ ಐಎನ್ಎಸ್ ವಿಕ್ರಮಾದಿತ್ಯಕ್ಕೆ ಯಶಸ್ವಿಯಾಗಿ ಇಳಿಯಿತು.
ತೇಜಸ್ ಹಲವಾರು ನಿರ್ಣಾಯಕ ಸಾಮರ್ಥ್ಯಗಳನ್ನು ಹೊಂದಿರುವ ಬಹು-ಪಾತ್ರ ನಿರ್ವಹಿಸಲಿದ್ದು, ಇದು ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.