ನಟಿ ಕಂಗನಾ ಅಭಿನಯದ ʼತೇಜಸ್‌ʼ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಯೋಗಿ ಆದಿತ್ಯನಾಥ್..!‌

Tejas Movie: ಮಂಗಳವಾರ ಲಕ್ನೋದ ಲೋಕಭವನ ಸಭಾಂಗಣದಲ್ಲಿ ನಟಿ ಕಂಗನಾ ರನೌತ್ ಇತ್ತೀಚೆಗೆ ತೆರೆಗೆ ಬಂದ ಬಾಕ್ಸ್ ಆಫೀಸ್‌ನಲ್ಲಿ ಪ್ಲಾಪ್ ಆಗಿರುವ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರವನ್ನು ವೀಕ್ಷಿಸಿದ ಬಳಿಕ ಭಾವುಕರಾಗಿದ್ದಾರೆ. 

Written by - Zee Kannada News Desk | Last Updated : Nov 1, 2023, 12:00 PM IST
  • ಲಕ್ನೋನ ಲೋಕಭವನ ಸಭಾಂಗಣದಲ್ಲಿ ಮಂಗಳವಾರ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನ
  • ಸಿನಿಮಾ ನೋಡಿದ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾವುಕರಾದರು
  • ಸಿಎಂ ಯೋಗಿ ಆದಿತ್ಯನಾಥ್‌ ಮುಗುಳ್ನಗುತ್ತಲೇ ಕಂಗನಾಗೆ ಗಿಫ್ಟ್ ಕೊಟ್ಟಿದ್ದಾರೆ
ನಟಿ ಕಂಗನಾ ಅಭಿನಯದ ʼತೇಜಸ್‌ʼ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಯೋಗಿ ಆದಿತ್ಯನಾಥ್..!‌  title=

Kanagana Ranautʼs Tejas Movie: ನಿನ್ನೆಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗಾಗಿ ನಟಿ ಕಂಗನಾ ರನೌತ್ ಇತ್ತೀಚೆಗೆ ಬಿಡುಗಡೆಯಾಗಿರುವ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದು, ಲಕ್ನೋದ ಲೋಕಭವನ ಸಭಾಂಗಣದಲ್ಲಿ ಚಿತ್ರವನ್ನು ವೀಕ್ಷಿಸಿ  ನಂತರ ಸಿಎಂ ಯೋಗಿ ಆದಿತ್ಯನಾಥ್ ಕಣ್ಣೀರು ಹಾಕಿದರು.

ವಿಶೇಷ ಪ್ರದರ್ಶನಕ್ಕೆ ಕಂಗನಾ ರನೌತ್ ಬಿಳಿ ಸೀರೆ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದು, ಈಕೆ ತನ್ನ ಕೂದಲನ್ನು ತುರುಬು ಕಟ್ಟಿ ಮುದ್ದಾಗಿ ಕಾಣಿಸುತ್ತಿದ್ದರು. ಈ ನಟಿ ಫೋಟೋಗಳನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ಇಂದು ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ಹುತಾತ್ಮರ ಜೀವನ ಆಧಾರಿತ ತೇಜಸ್ ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿದೆ. ನೀವು ಮೊದಲ ಚಿತ್ರದಲ್ಲಿ ನೋಡುವಂತೆ ಮಹಾರಾಜ್ ಜೀ ಅವರಿಗೆ ಕೊನೆಯವರೆಗೂ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.

 

ಇದನ್ನು ಓದಿ: BBK 10: ʼಈ ಸೀರಿಯಲ್ ಡೈಲಾಗ್‌ ನನ್ ಹತ್ರ ಬೇಡ ́ ಎಂದು ವಿನಯ್‌ ಅವಾಜ್‌ : ಕಣ್ಣೀರಟ್ಟ ಭಾಗ್ಯಶ್ರೀ

ನಟಿ ಕಂಗನಾ ಯೋಗಿ ಆದಿತ್ಯನಾಥ್‌ಗೆ  " ಒಬ್ಬ ಸೈನಿಕನಿಗೆ ಇದಕ್ಕಿಂತ ಇನ್ನೇನು ಬೇಕು...? ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ಕಂಡು ಮಹಾರಾಜ್ ಜೀ ಎಷ್ಟು ಭಾವುಕರಾದರು ಎಂದರೆ ಅವರ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಮಹಾರಾಜ್ ಜೀ, ನಿಮ್ಮ ಪ್ರಶಂಸೆ ಮತ್ತು ಆಶೀರ್ವಾದದಿಂದ ನಾವು ಕೃತಜ್ಞರಾಗಿರುತ್ತೇವೆ" ಎಂದು ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಸಿಎಂ ಯೋಗಿ ಆದಿತ್ಯನಾಥ್‌ ಮುಗುಳ್ನಗುತ್ತಲೇ ಕಂಗನಾಗೆ ಗಿಫ್ಟ್ ಕೊಟ್ಟಿದ್ದಾರೆ.

ತೇಜಸ್‌ ಸಿನಿಮಾ ಬಿಡುಗಡೆಯಾಗುವ ಮೊದಲೇ, ನಟಿ ಕಂಗನಾ ರನೌತ್ ಅವರು ದೆಹಲಿಯ ಇಂಡಿಯನ್ ಏರ್‌ಫೋರ್ಸ್ ಆಡಿಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಲವಾರು ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News