Kangana Ranaut : ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದೆಯಾಗಿ ಸ್ಪರ್ಧಿಸಿ, ತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಭಾರಿ ಬಹುಮತದೊಂದಿಗೆ ಗೆದ್ದಿದ್ದಾರೆ. ಸಂಸದೆಯಾಗಿ ಗೆದ್ದ ನಂತರ ಕೊಯಮತ್ತೂರಿನ ಇಶಾ ಫೌಂಡೇಶನ್ಗೆ ಹೋಗಿ, ಅಲ್ಲಿ ಆದಿಯೋಗಿಯನ್ನು ಭೇಟಿ ಮಾಡಿ ಸದ್ಗುರುಗಳ ಆಶೀರ್ವಾದ ಪಡೆದಿರುವ ಫೋಟೋಸ್ ಸದ್ಯಕ್ಕೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಸ್ ವೈರಲ್ ಆಗುತ್ತಿವೆ.
ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೊಯಂಬತ್ತೂರಿಗೆ ಆಗಮಿಸಿದ ಸದ್ಗುರುಗಳಿಗೆ ಹೃತ್ಪೂರ್ವಕ ಸ್ವಾಗತ. ಸದ್ಗುರುಗಳ ಆಗಮನದ ಸಂಭ್ರಮದ ವೀಡಿಯೊ/ಫೋಟೋಗಳನ್ನು ವೀಕ್ಷಿಸಿ.
ಏಪ್ರಿಲ್ 1, 2024: ನವದೆಹಲಿಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸೋಮವಾರ ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರುಗಳಿಗೆ, ಕೊಯಂಬತ್ತೂರು ನಗರವು ಸಂತಸದಿಂದ ಹೃತ್ಪೂರ್ವಕ ಸ್ವಾಗತವನ್ನು ನೀಡಿತು.
ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.
Brain Bleeding: ಮೆದುಳಿನೊಳಗಿನ ರಕ್ತನಾಳವು ಸೋರಿಕೆಯಾದಾಗ ಅಥವಾ ಛಿದ್ರಗೊಂಡಾಗ ಈ ಪರಿಸ್ಥಿತಿಯು ಉಂಟಾಗುತ್ತದೆ, ಇದು ತಲೆಬುರುಡೆಯೊಳಗೆ ರಕ್ತದ ಶೇಖರಣೆಗೆ ಕಾರಣವಾಗುತ್ತದೆ. ಈ ಶೇಖರಣೆಯು ಮೆದುಳಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
Sadhguru Winning Manthra for Team India: ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈ ಅಮೋಘ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ಸದ್ಗುರು ಸಹ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ.
ರಾಜ್ಯ ಪರಿಸರ ಬಜೆಟ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಶ ಫೌಂಡೇಶನ್ ನ ಜಮೀನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹರಡುತ್ತಿರುವ ಕೆಲವು ಸುಳ್ಳು ಮಾಹಿತಿಗಳಿಂದ ನಮಗೆ ತೀವ್ರ ನೋವಾಗಿದೆ. ನಮ್ಮ ಮೇಲೆ ಮಾಡಲಾದ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ಅಸತ್ಯವಾಗಿವೆ ಎಂದು ಫೌಂಡೇಶನ್ ಸ್ಪಷ್ಟಪಡಿಸಿದೆ.
ಸದ್ಗುರುಗಳ ವಿರುದ್ಧ ರಾಜ್ಯ ಕಾಂಗ್ರೆಸ್ನ ಮಾಜಿ ಎಂಎಲ್ಸಿ ಶ್ರೀ ರಮೇಶ್ ಬಾಬು ಅವರ ವೈಯಕ್ತಿಕ ಅಪವಾದ ಮತ್ತು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಇಶಾ ಫೌಂಡೇಶನ್ ರಮೇಶ್ ಬಾಬು ವಿರುದ್ಧ ಲೀಗಲ್ ನೋಟಿಸ್ ನೀಡಿಲು ಸಿದ್ಧತೆ ನಡೆಸಿದೆ.
ಬಾಲಿವುಡ್ ನಟಿ ಕಂಗನಾ ರಾವತ್ ಯಾವಾಗಲೂ ಪರಿಸರ ಮತ್ತು ಸಾಮಾಜಿಕ ಸಮಸ್ಯೆ ಕುರಿತ ವಿಚಾರಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದು ಸ್ಥಳೀಯ ನೇಕಾರರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದರಿಂದ ಹಿಡಿದು ಏಕ-ಬಳಕೆಯ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವವರೆಗೆ ಅವರು ಮುಕ್ತವಾಗಿ ಬೆಂಬಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.