ದುಬೈ: ಮಾನವ ಸಂಘರ್ಷಗಳು ನಡೆದಾಗ ಹಲವು ಪ್ರಾಯೋಗಿಕ ಪರಿಸ್ಥಿತಿಗಳನ್ನು ನಿರ್ವಹಿಸಬೇಕು ಎಂದು ಸದ್ಗುರು ವಿಯಾನ್ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಇಶಾ ಫೌಂಡೆಶನ್ ನ ಮುಖ್ಯಸ್ಥರಾಗಿರುವ ಸದ್ಗುರು "ಸುಸ್ಥಿರ ಅಭಿವೃದ್ದಿವೊಂದೇ ದಕ್ಷಿಣ ಏಷ್ಯಾವನ್ನು ಮುನ್ನಡೆಸುವ ಮಾರ್ಗ ಎಂದು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಭಾವನೆಗಳು ಮತ್ತು ಪ್ರಾಮುಖ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಆದರೆ ಇದು ಕೆಲವೊಮ್ಮೆ ಕಷ್ಟವಾಗುತ್ತದೆ" ಎಂದು ಅಭಿಪ್ರಾಯಪಟ್ಟರು.
#WIONGlobalSummit: @SadhguruJV, who is the head of the Isha Foundation, a non-profit organization, emphasised that sustainable development was the way forward for #SouthAsia.https://t.co/4AeKRobvGL
— WION (@WIONews) February 20, 2019
ಜಗತ್ತಿನ 33% ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅವರೆಲ್ಲರೂ ಕೂಡ ಇದೆ ಪ್ರದೇಶದಿಂದ ಬಂದವರು ಎಂದು ಅವರು ತಿಳಿಸಿದರು. ಇದೇ ವೇಳೆ
ಅಂತರರಾಷ್ಟ್ರೀಯ ಪತ್ರಕರ್ತ ರಿಜ್ ಖಾನ್ ಕೂಡ ಉಪಸ್ಥಿತರಿದ್ದರು.
"ಕಾಶ್ಮೀರಿ ಜನರ ಯೋಗಕ್ಷೇಮಕ್ಕಾಗಿ ಪಾಕಿಸ್ತಾನದ ಜನರು ಸಹ ಆಸಕ್ತಿಯನ್ನು ಹೊಂದಿದ್ದಾರೆಂದು ನಾನು ಹೇಳುತ್ತೇನೆ,"ನಾವು ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿದಾಗ ಅವು ದ್ವಿಗುಣಗೊಳ್ಳುತ್ತವೆ "ಎಂದು ಹೇಳಿದರು.
ಇದಕ್ಕೂ ಮೊದಲು ವಿಯಾನ್ ಜಾಗತಿಕ ಶೃಂಗಸಭೆಯನ್ನು ಶೇಖ್ ನಹಯನ್ ಮಬಾರಕ್ ಅಲ್ ನಹಾಯನ್ ಉದ್ಘಾಟಿಸಿದರು.