ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೊಯಂಬತ್ತೂರಿನಲ್ಲಿ ಸದ್ಗುರುಗಳಿಗೆ ಅದ್ಧೂರಿ ಸ್ವಾಗತ

Written by - Zee Kannada News Desk | Last Updated : Apr 2, 2024, 06:45 AM IST
  • • ಮಾರ್ಚ್ 17, 2024 ರಂದು ನವದೆಹಲಿಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಸದ್ಗುರುಗಳು ಇಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರಕ್ಕೆ ಮರಳಿದರು
  • • ಸುತ್ತಲಿನ ಆದಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸದ್ಗುರುಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲು ಈಶ ಯೋಗ ಕೇಂದ್ರದ ಪ್ರವೇಶದ್ವಾರದಲ್ಲಿ ನೆರೆದಿದ್ದರು.
  • • ಈಶ ಯೋಗ ಕೇಂದ್ರದ ಒಳಗೆ ವಾತಾವರಣವು ಉತ್ಸಾಹ ಮತ್ತು ನಿರೀಕ್ಷೆಯಿಂದ ತುಂಬಿತ್ತು.
ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೊಯಂಬತ್ತೂರಿನಲ್ಲಿ ಸದ್ಗುರುಗಳಿಗೆ ಅದ್ಧೂರಿ ಸ್ವಾಗತ title=

ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೊಯಂಬತ್ತೂರಿಗೆ ಆಗಮಿಸಿದ ಸದ್ಗುರುಗಳಿಗೆ ಹೃತ್ಪೂರ್ವಕ ಸ್ವಾಗತ. ಸದ್ಗುರುಗಳ ಆಗಮನದ ಸಂಭ್ರಮದ ವೀಡಿಯೊ/ಫೋಟೋಗಳನ್ನು ವೀಕ್ಷಿಸಿ.

ಏಪ್ರಿಲ್ 1, 2024: ನವದೆಹಲಿಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸೋಮವಾರ ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರುಗಳಿಗೆ, ಕೊಯಂಬತ್ತೂರು ನಗರವು ಸಂತಸದಿಂದ ಹೃತ್ಪೂರ್ವಕ ಸ್ವಾಗತವನ್ನು ನೀಡಿತು.

ಕೊಯಂಬತ್ತೂರಿನ ವಿಮಾನ ನಿಲ್ದಾಣದಲ್ಲಿ ಜನರು, ಸಂಭ್ರಮದ ಮತ್ತು ಶುಭಾಶಯ ಫಲಕಗಳೊಂದಿಗೆ  ಜಮಾಯಿಸಿದ್ದರು, ಸದ್ಗುರುಗಳ ಆಗಮನವನ್ನು ಕಾತುರದಿಂದ ನಿರೀಕ್ಷಿಸುವ ಮೂಲಕ ಹಬ್ಬದ ವಾತಾವರಣ ಪ್ರಾರಂಭವಾಯಿತು. ಕೊಯಂಬತ್ತೂರಿನ ನಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಕೇಂದ್ರಕ್ಕೆ ಹೋಗುವ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತರು, ಸದ್ಗುರುಗಳ ಮರಳುವಿಕೆಯನ್ನು ಸಂಭ್ರಮಿಸಿದರು.
https://www.instagram.com/reel/C5N1YF4P5sf/
ಈಶ ಯೋಗ ಕೇಂದ್ರದಲ್ಲಿ, ಆದಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸಂಭ್ರಮಾಚರಣೆಯ ಮುಂಚೂಣಿಯಲ್ಲಿದ್ದರು, ಸಾಂಪ್ರದಾಯಿಕ ಸಂಗೀತ, ಸುಮಧುರ ಡ್ರಮ್‌ಗಳು ಮತ್ತು ಹೃದಯಸ್ಪರ್ಶಿ ಜಾನಪದ ಹಾಡುಗಳೊಂದಿಗೆ ಸದ್ಗುರುಗಳನ್ನು ಉತ್ಸಾಹದಿಂದ ಸ್ವಾಗತಿಸಿದರು. ಉರಿ ಬಿಸಿಲಿನ ನಡುವೆಯೂ ಸದ್ಗುರುಗಳ ಆಗಮನದ ನಿರೀಕ್ಷೆಯಲ್ಲಿ ಪ್ರವೇಶ ದ್ವಾರದಲ್ಲಿ ಕಾದು ನಿಂತಿದ್ದ ಅವರ ಉತ್ಸಾಹ ಮುಗಿಲು ಮುಟ್ಟಿತ್ತು.

ಸ್ಥಳೀಯ ದಾಣಿಕಂಡಿ ಗ್ರಾಮದ ಬುಡಕಟ್ಟು ಮಹಿಳೆ ಶ್ರೀಮತಿ ವಿಜಯಾ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾ, “ಸದ್ಗುರುಗಳು ನಮಗೆ ನೀಡಿರುವ ಯೋಗ ಸಾಧನಗಳ ಮೂಲಕ ನಮಗೆ ಸಂತೋಷ ಮತ್ತು ಆರೋಗ್ಯವನ್ನು ತಂದಿದ್ದಾರೆ, ಆ ಮೂಲಕ ನಮ್ಮ ಗ್ರಾಮವನ್ನು ಪರಿವರ್ತಿಸಿದ್ದಾರೆ. ಅವರ ವೀಡಿಯೋಗಳನ್ನು ಕೇಳುತ್ತಾ, ನನ್ನ ಹಳ್ಳಿಯ ಯುವಕರು ದುಷ್ಚಟ ಮತ್ತು ಆಲಸ್ಯದಿಂದ ಹೊರಬರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಶಸ್ತ್ರಚಿಕಿತ್ಸೆಯ ಸುದ್ದಿ ಕೇಳಿದಾಗ, ನಾವು ಅತ್ಯಂತ ಕಳವಳಗೊಂಡೆವು. ಈಗ, ಅವರ ಸುರಕ್ಷಿತ ವಾಪಸಾತಿಯೊಂದಿಗೆ ನಾವು ತುಂಬಾ ಸಂತೋಷಗೊಂಡಿದ್ದೇವೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಎಂದು ಹೇಳಿದರು.

ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟ

ಯೋಗ ಕೇಂದ್ರದ ಒಳಗೂ ಸಹ ವಾತಾವರಣವು ಅತ್ಯಂತ ಉತ್ಸಾಹ ಮತ್ತು ನಿರೀಕ್ಷೆಯಿಂದ ತುಂಬಿ ತುಳುಕುತ್ತಿತ್ತು. ಸ್ವಯಂ ಸೇವಕರು, ಸದ್ಗುರುಗಳಿಗೆ ಪ್ರೀತಿ ಮತ್ತು ಸ್ವಾಗತದ ಸಂದೇಶಗಳಿಂದ ಅಲಂಕರಿಸಲ್ಪಟ್ಟ, ಕೈಗಳಿಂದ ಮಾಡಿದ ಪ್ರಕಾಶಮಾನವಾದ-ಬಣ್ಣದ ಫಲಕಗಳನ್ನು ಎತ್ತಿ ಹಿಡಿದರು. ಜೊತೆಗೆ ಡ್ರಮ್‌ಗಳ ಧ್ವನಿ ಮತ್ತು ಸಂತೋಷದಾಯಕ ಪಠಣಗಳು ಗಾಳಿಯಲ್ಲಿ ಪ್ರತಿಧ್ವನಿಸಿದವು.
https://www.instagram.com/p/C5N-vy1xAdt/
ಸದ್ಗುರುಗಳು ನವದೆಹಲಿಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಮಾರ್ಚ್ 27, 2024 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ಎಪ್ರಿಲ್ 1 ರಂದು ಕೊಯಂಬತ್ತೂರಿಗೆ ಹಿಂದಿರುಗಿದ್ದಾರೆ. ಪ್ರಪಂಚದಾದ್ಯಂತದ ಹಿತೈಷಿಗಳ ಸಂದೇಶಗಳ ಜೊತೆಗೆ, ಸದ್ಗುರುಗಳು ಶೀಘ್ರವಾಗಿ ಚೇತರಿಸಿಕೊಳ್ಳುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ,

ಈ ಸಮಯದಲ್ಲಿ ಸದ್ಗುರುಗಳಿಗೆ ಹರಿದುಬಂದ ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಈಶ ಫೌಂಡೇಶನ್ ಅಪಾರವಾದ ಕೃತಜ್ಞತೆಯನ್ನು ಹೊಂದಿದೆ.

ಫೋಟೋ ಮತ್ತು ವಿಡಿಯೋಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

ನೀವು ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು +91 94874 75346 ಗೆ ಕರೆ ಮಾಡಿ, ಅಥವಾ mediarelations@ishafoundation.org ಗೆ ಬರೆದು ಕಳೆಸಿ.

ಇನ್ನರ್ ಇಂಜಿನಿಯರಿಂಗ್: ಆರಂಭಿಕರಿಗಾಗಿ ಸದ್ಗುರುಗಳು ವಿನ್ಯಾಸಗೊಳಿಸಿರುವ ಈ ಶಕ್ತಿಯುತ  ಕಾರ್ಯಕ್ರಮವು ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತದೆ, ಮತ್ತು ಉಸಿರಾಟದ ಮೂಲಕ ಪ್ರಾಣಶಕ್ತಿಯನ್ನು ಶುದ್ಧೀಕರಿಸುವ 21 ನಿಮಿಷಗಳ ಯೋಗಾಭ್ಯಾಸವನ್ನು ಒಳಗೊಂಡಿದೆ.

ಎಕ್ಸ್ಟಸಿ ಆಫ್ ಎನ್ಲೈಟನ್ ಮೆಂಟ್: ದೆಹಲಿ, ಮುಂಬೈ, ಟೊರೊಂಟೊ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವು, ಸದ್ಗುರುಗಳೊಂದಿಗೆ ಒಂದು ದಿನದ ಅನುಭವಾತ್ಮಕ  ಉನ್ನತ ಮಟ್ಟದ ಧ್ಯಾನ ಕಾರ್ಯಕ್ರಮವನ್ನು ಅನುಭವಿಸುವ ಅವಕಾಶವನ್ನು ಒದಗಿಸುತ್ತದೆ.

;

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News