ಕಾವೇರಿ ನದಿ ರಕ್ಷಣೆಗೆ ಪಣ ತೊಟ್ಟ ನಟಿ ಕಂಗನಾ ರಾವತ್ ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರಾವತ್ ಯಾವಾಗಲೂ ಪರಿಸರ ಮತ್ತು ಸಾಮಾಜಿಕ ಸಮಸ್ಯೆ ಕುರಿತ ವಿಚಾರಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದು ಸ್ಥಳೀಯ ನೇಕಾರರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದರಿಂದ ಹಿಡಿದು ಏಕ-ಬಳಕೆಯ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವವರೆಗೆ ಅವರು ಮುಕ್ತವಾಗಿ ಬೆಂಬಲಿಸಿದ್ದಾರೆ. 

Last Updated : Aug 31, 2019, 02:21 PM IST
ಕಾವೇರಿ ನದಿ ರಕ್ಷಣೆಗೆ ಪಣ ತೊಟ್ಟ ನಟಿ ಕಂಗನಾ ರಾವತ್ ಹೇಳಿದ್ದೇನು? title=

ಮುಂಬೈ: ಬಾಲಿವುಡ್ ನಟಿ ಕಂಗನಾ ರಾವತ್ ಯಾವಾಗಲೂ ಪರಿಸರ ಮತ್ತು ಸಾಮಾಜಿಕ ಸಮಸ್ಯೆ ಕುರಿತ ವಿಚಾರಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದು ಸ್ಥಳೀಯ ನೇಕಾರರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದರಿಂದ ಹಿಡಿದು ಏಕ-ಬಳಕೆಯ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವವರೆಗೆ ಅವರು ಮುಕ್ತವಾಗಿ ಬೆಂಬಲಿಸಿದ್ದಾರೆ. 

ಈಗ ನದಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಅರಣ್ಯ ವ್ಯಾಪ್ತಿಯನ್ನು ಹೆಚ್ಚಿಸಲು ಸದ್ಗುರು ಇಶಾ ಫೌಂಡೇಶನ್ ಅವರ ಕಾವೇರಿ ಕೂಗು ಅಭಿಯಾನಕ್ಕೆ ಕಂಗನಾ ಬೆಂಬಲಿಸುವುದಾಗಿ ನಿರ್ಧರಿಸಿದ್ದಾರೆ. ಕಾವೇರಿ ಕೂಗು ಎಂಬುದು ಹನ್ನೆರಡು ವರ್ಷಗಳ ಕಾರ್ಯಕ್ರಮವಾಗಿದ್ದು, ಇದು 242 ಕೋಟಿ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ, ಆ ಮೂಲಕ ಜಲಾನಯನ ಪ್ರದೇಶದಲ್ಲಿ ನೀರಿನ ಧಾರಣವನ್ನು ಹೆಚ್ಚಿಸುತ್ತದೆ ಮತ್ತು ನದಿಯನ್ನು ಪುನರುಜ್ಜೀವನಗೊಳಿಸುತ್ತದೆ. 

ಈಗ ಅಭಿಯಾನಕ್ಕೆ ಬೆಂಬಲಿಸುವ ಕುರಿತಾಗಿ ಮಾತನಾಡಿದ ಕಂಗನಾ 'ನಮ್ಮ ಜೀವನಾಡಿಯಾಗಿರುವ ನದಿಗಳು ಅಸ್ತಿತ್ವದಲ್ಲಿಲ್ಲ. ಚೆನ್ನೈನಲ್ಲಿನ ಬರ ಜಾಗತಿಕ ಸಮಸ್ಯೆಯಾಯಿತು. ಲಿಯೊನಾರ್ಡೊ ಡಿಕಾಪ್ರಿಯೊ ಅವರು ಅಮೇರಿಕಾದಲ್ಲಿದ್ದರೂ ಅದರ ಬಗ್ಗೆ ಕಾಳಜಿ ವಹಿಸಿದ್ದರು. ನನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲದಿದ್ದರೆ ನಾನು ಅವಮಾನದಿಂದ ಸಾಯುತ್ತೇನೆ ಎಂದು ನಿಮಗೆ ಅನಿಸುವುದಿಲ್ಲವೇ? "ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಮಾತನಾಡಿ 'ನಾವು ಪ್ರತಿಯೊಬ್ಬರೂ ಸಸಿಗಾಗಿ ಕೇವಲ 42 ರೂ ನೀಡಬೇಕಾಗಿದೆ. ಪ್ರತಿ ವರ್ಷ ಮತ್ತು ಇಶಾ ಫೌಂಡೇಶನ್‌ನ ಸ್ವಯಂಸೇವಕರು ಅವುಗಳನ್ನು ನೆಡುತ್ತಾರೆ. ನಮ್ಮ ಜನಸಂಖ್ಯೆ 1.3 ಬಿಲಿಯನ್. ನಾವು ಪ್ರತಿಯೊಬ್ಬರೂ ಸಸಿಗಾಗಿ ದಾನ ಮಾಡಿದರೆ ನಾವು ಹೊಂದಬಹುದಾದ ಹಸಿರು ಪಟ್ಟಿಯನ್ನು ಕಲ್ಪಿಸಿಕೊಳ್ಳಿ! ನನ್ನ ಸಹೋದರಿ ರಂಗೋಲಿ ಅವರು ಈ ಅಭಿಯಾನವನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು, ಇದರಿಂದಾಗಿ ಅವರ ಮಗ ಪೃಥ್ವಿ ಹಸಿರು ಜಗತ್ತಿನಲ್ಲಿ ಬೆಳೆಯುತ್ತಾರೆ. ಪ್ರತಿಯೊಬ್ಬರಿಗೂ ನನ್ನ ಮನವಿಯೆಂದರೆ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸಿ ಈ ಕಾರಣಕ್ಕೆ ಸಹಾಯ ಮಾಡಲು ಮುಂದೆ ಬನ್ನಿ. ನನ್ನ ಗಳಿಕೆಯ ಬಹುಪಾಲು ಭಾಗವನ್ನು ಈ ಕಾರಣಕ್ಕಾಗಿ ಅರ್ಪಿಸುತ್ತೇನೆ' ಎಂದು ಕಂಗನಾ ತಿಳಿಸಿದ್ದಾರೆ.

Trending News