“ವಿಶ್ವಕಪ್ ಟ್ರೋಫಿ ಗೆಲ್ಲಲು ಪ್ರಯತ್ನಿಸಬೇಡಿ…”- ಭಾರತ ಕ್ರಿಕೆಟ್ ತಂಡಕ್ಕೆ ಸದ್ಗುರು ಶಾಕಿಂಗ್ ಸಲಹೆ

Sadhguru Winning Manthra for Team India: ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈ ಅಮೋಘ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ಸದ್ಗುರು ಸಹ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ.

Written by - Bhavishya Shetty | Last Updated : Nov 19, 2023, 12:57 PM IST
    • ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.
    • ಈ ಅಮೋಘ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ.
    • ಸದ್ಗುರು ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ.
“ವಿಶ್ವಕಪ್ ಟ್ರೋಫಿ ಗೆಲ್ಲಲು ಪ್ರಯತ್ನಿಸಬೇಡಿ…”- ಭಾರತ ಕ್ರಿಕೆಟ್ ತಂಡಕ್ಕೆ ಸದ್ಗುರು ಶಾಕಿಂಗ್ ಸಲಹೆ title=
Sadhguru Statement on World Cup

Sadhguru Winning Manthra for Team India: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಫೈನಲ್‌’ಗೆ ಸಂಪೂರ್ಣ ವೇದಿಕೆ ಸಿದ್ಧವಾಗಿದೆ. ನವೆಂಬರ್ 19 ರಂದು ಅಂದರೆ ಇಂದು ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದು, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಕುಣಿದಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ, ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈ ಅಮೋಘ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ಸದ್ಗುರು ಸಹ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ.

ಇದನ್ನೂ ಓದಿ: “ವಿಶ್ವಕಪ್ ಟ್ರೋಫಿ ಗೆಲ್ಲೋದು ಇದೇ ಶ್ರೇಷ್ಠ ತಂಡ”- ಟಾಸ್’ಗೂ ಮುನ್ನ ಭವಿಷ್ಯ ನುಡಿದ ರಿಕಿ ಪಾಂಟಿಂಗ್

ಸದ್ಗುರು ಅವರ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌’ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, "ವಿಶ್ವಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಚೆಂಡನ್ನು ಸರಿಯಾಗಿ ಬಾರಿಸಿ! ದೇಶದ 1 ಬಿಲಿಯನ್ ಜನರ ಬಗ್ಗೆ ನೀವು ಯೋಚಿಸಿದರೆ ಅಥವಾ ವಿಶ್ವಕಪ್ ಗೆದ್ದ ಬಳಿಕ ಸಂಭವಿಸುವ ಎಲ್ಲಾ ವಿಚಾರಗಳ ಬಗ್ಗೆ ಈಗಲೇ ಯೋಚಿಸಿದರೆ, ಚೆಂಡು ನಿಮ್ಮ ವಿಕೆಟ್‌’ಗಳನ್ನು ಉರುಳಿಸುತ್ತದೆ” ಎಂದು ಹೇಳಿದ್ದಾರೆ

"ಹಾಗಾದರೆ, ಈ ವಿಶ್ವಕಪ್ ಗೆಲ್ಲುವುದು ಹೇಗೆ? ಅದರ ಬಗ್ಗೆ ಯೋಚಿಸಬೇಡಿ. ಚೆಂಡನ್ನು ಹೇಗೆ ಹೊಡೆಯಬೇಕು? ಹೇಗೆ ಎದುರಾಳಿ ತಂಡದ ವಿಕೆಟ್‌’ಗಳನ್ನು ಉರುಳಿಸಬೇಕು ಎಂಬುದರ ಬಗ್ಗೆ ನೀವು ಯೋಚಿಸಿ. ನಮ್ಮ ಕ್ರಿಕೆಟ್ ತಂಡವು ಆಟವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 10ರಲ್ಲಿ 10 ಗೆಲುವುಗಳು. ಇದು ಅನುಕರಣೀಯ ನಾಯಕತ್ವ ಮತ್ತು ಅದ್ಭುತ ವೈಯಕ್ತಿಕ ಆಟಗಾರರ ಪ್ರದರ್ಶನ. ಈ ಅಜೇಯ ತಂಡವು ಫೈನಲ್ ಬಗ್ಗೆ ಯಾವುದೇ ಚಿಂತೆ ಮಾಡಬಾರದು" ಎಂದು ಹೇಳಿದ್ದಾರೆ.

ಇದನ್ನೂ ಓದಿ: 1983, 2011ರ ಅಂಕಿಅಂಶಗಳ ಪ್ರಕಾರ ವಿಶ್ವಕಪ್ ಫೈನಲ್’ನಲ್ಲಿ ಟಾಸ್ ವೇಳೆ ಹೀಗಾದರೆ ಭಾರತಕ್ಕೆ ಅದೃಷ್ಟ!

ತಂಡಕ್ಕೆ ತಮ್ಮ ಸಲಹೆಯನ್ನು ತಿಳಿಸಿದ ಸದ್ಗುರು, "ಮುಖ್ಯವಾದ ವಿಷಯವೆಂದರೆ ನಾವು ಎದುರಾಳಿಯನ್ನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ, ಅಥವಾ ಅವರು ಯಾರೆಂಬುದರ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ. ಒಟ್ಟಾರೆಯಾಗಿ ಆಡಬೇಕು. ಸರಿಯಾದ ರೀತಿಯಲ್ಲಿ ಹೇಗೆ ಆಡಬೇಕು ಎಂಬುದು ನಮ್ಮ ಕಾಳಜಿ. ಮತ್ತು ನಮ್ಮ ಹುಡುಗರು ಅದೇ ರೀತಿ ಆಡುತ್ತಾರೆ ಎಂದು ನನಗೆ ಖಾತ್ರಿಯಿದೆ, ಇದು ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷವನ್ನು ತರುತ್ತದೆ” ಎಂದು ಕೊಂಡಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News