ಅಪರಾಧಿಯು ಪೋಷಕರು-ಶಿಕ್ಷಕ ಸಭೆ ಮತ್ತು ಪರೀಕ್ಷೆಯನ್ನು ಮುಂದೂಡಬಹುದೆಂದು ಯೋಚಿಸಿ, ಪ್ರದ್ಯುಮನ್ ಎಂಬ ಏಳು ವರ್ಷದ ಬಾಲಕನನ್ನು ಶಾಲೆಯ ಶೌಚಾಲಯದಲ್ಲಿ ಕೊಲೆ ಮಾಡಿರುವುದಾಗಿ ಸಿಬಿಐ ಹೇಳಿದೆ.
ಈ ಪ್ರಕರಣದಲ್ಲಿ ಬಸ್ ಕಂಡಕ್ಟರ್ ಬಂಧನಕ್ಕೆ ಸಂಬಂಧಿಸಿದಂತೆ ತಾನು ಅನುಮಾನ ಹೊಂದಿದ್ದೆ ಎಂದು ಪ್ರದುಮನ್ನ ತಂದೆ ಹೇಳಿದರು. ಅದಕ್ಕಾಗಿಯೇ ತಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದು, ತನಿಖೆಯಿಂದ ತಮಗೆ ತೃಪ್ತಿಯಿದೆ ಎಂದು ಅವರು ಹೇಳಿದ್ದಾರೆ.
ಗುರ್ಗಾವ್ನ ರಯಾನ್ ಇಂಟರ್ನ್ಯಾಷನಲ್ ಗ್ರೂಪ್ ಸ್ಕೂಲ್ನ ಎರಡನೇ ತರಗತಿ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ, ಸಿಬಿಐ, ಹರಿಯಾಣ ಸರ್ಕಾರ ಮತ್ತು ಸಿಬಿಎಸ್ಇಗೆ ಸುಪ್ರೀಂ ಕೋರ್ಟ್ ಇಂದು ನೋಟಿಸ್ ಜಾರಿಗೊಳಿಸಿದೆ. ಮೃತ ಬಾಲಕನ ತಂದೆ ವರುಣ್ ಠಾಕೂರ್ ಅವರು ಈ ಹಿಂದೆ ಅಗ್ರ ನ್ಯಾಯಾಲಯಕ್ಕೆ ತೆರಳಿ, ಶಾಲೆಯ ತೀವ್ರವಾದ ಆಡಳಿತಾತ್ಮಕ ಲೋಪದೋಷಗಳ ಬಗ್ಗೆ ಆರೋಪಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.