ರಿಯಾನ್ ಇಂಟರ್ನ್ಯಾಷನಲ್ ಶಾಲೆಯ ಪ್ರಿನ್ಸಿಪಾಲ್, ಟೀಚರ್ಸ್ ಪೋಲೀಸರ ವಶಕ್ಕೆ

ಶುಕ್ರವಾರ ನಡೆದ ದೇಶವೇ ಬೆಚ್ಚಿ ಬೀಳುವ ಎರಡನೇ ತರಗತಿ ಬಾಲಕನ ಕೊಲೆಗೆ ಸಂಬಂಧಿಸಿದಂತೆ ಆ ಶಾಲೆಯ ಪ್ರಿನ್ಸಿಪಾಲ್ ಸೇರಿದಂತೆ ಶಾಲಾ ಸಿಬ್ಬಂದಿಯನ್ನು ಪೊಲೀಸರು ಬಂದಿಸಿದ್ದಾರೆ.   

Last Updated : Sep 11, 2017, 10:50 AM IST
ರಿಯಾನ್ ಇಂಟರ್ನ್ಯಾಷನಲ್ ಶಾಲೆಯ ಪ್ರಿನ್ಸಿಪಾಲ್, ಟೀಚರ್ಸ್ ಪೋಲೀಸರ ವಶಕ್ಕೆ  title=

ನವ ದೆಹಲಿ: ವಿಶೇಷ ತನಿಖಾಧಿಕಾರಿಗಳ ತನಿಖೆಯ ನಂತರ ಶಾಲಾ ಸುತ್ತಲೂ ಬಿಗಿ ಭದ್ರತೆ ಏರ್ಪಟ್ಟಿದ್ದು, ಏಳು ವರ್ಷದ ಹುಡುಗನ ಹತ್ಯೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಮತ್ತು ಕೆಲವು ಶಿಕ್ಷಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಉಳಿದ ಶಿಕ್ಷಕರನ್ನೂ ಸಹ ತನಿಖೆ ನಡೆಸಲಾಗಿದೆ. 

ಈ ಮಧ್ಯೆ ಇಂದು ಬೆಳಿಗ್ಗೆ ರಾಜ್ಯ ಸರ್ಕಾರವು ಮಂಗಳವಾರದ ವರೆಗೂ ಶಾಲೆಗೆ ರಜೆ ಘೋಷಿಸಿದೆ. 

ಪೋಷಕರು ನೀಡಿದ ಮಾಹಿತಿಯಂತೆ ಅಧಿಸೂಚನೆಯು 6 ರಿಂದ 12 ತರಗತಿಗಳು ಪರೀಕ್ಷೆಗಾಗಿ ಬುಧವಾರ ಪುನಃ ಪ್ರಾರಂಭವಾಗಲಿದೆ ಆದರೆ ಕಿರಿಯ ಮತ್ತು ನರ್ಸರಿ ಶಾಲಾ ವಿಭಾಗಗಳು ಮುಂದಿನ ಸೂಚನೆ ರವರೆಗೆ ಮುಚ್ಚಲ್ಪಡುತ್ತವೆ ಎಂದು ಹೇಳಿದರು.

ಹಿಂದಿನ ಭಾನುವಾರ, ವಿಶೇಷ ತನಿಖಾ ತಂಡ (ಸಿಐಟಿ) ಶಾಲೆಗೆ ಚಾಲಕರು ಮತ್ತು ಕಂಡಕ್ಟರ್ಗಳಂತಹ ಸಿಬ್ಬಂದಿಗಳಿಗೆ ಯಾವುದೇ ಪ್ರತ್ಯೇಕ ಶೌಚಾಲಯಗಳಿಲ್ಲ ಎಂದು ತಿಳಿಸಿದಾಗ, ಆಡಳಿತ ಮಂಡಳಿಯು  ತಮ್ಮ ಉದ್ಯೋಗಿಗಳ ಗುರುತನ್ನು ಪರಿಶೀಲಿಸಲಿಲ್ಲ ಎಂದು ತಿಳಿಸಿದರು.

ಶಾಲೆಯ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಎಲ್ಲೆಡೆ ಸ್ಥಾಪನೆಯಾಗಿಲ್ಲ ಎಂದು ತನಿಖಾ ತಂಡವು ನೀಡಿದ ವರದಿ ಕೂಡ ಹೈಲೈಟ್ ಮಾಡಿತು. 

ಶಾಲೆಯ ಸ್ಥಾಪನೆಯು ಗಡಿಯನ್ನು ಮೀರಿ ಕಟ್ಟಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿತ್ತು.

ಏಳು ವರ್ಷದ ಮೃತ ಬಾಲಕನನ್ನು ಕ್ರೂರವಾಗಿ ಕೊಂದ ಹಂತಕರ ವಿರುದ್ಧ ಶೀಘ್ರ ತನಿಖೆ ನಡೆಸುವಂತೆ ಹರಿಯಾಣ ಸರ್ಕಾರ ಒತ್ತಾಯಿಸಿದೆ. ಈಗಾಗಲೇ ಶಿಕ್ಷಣ ಸಂಸ್ಥೆಯ ವಿರುದ್ಧ ಕೈಗೊಂಡಿರುವ ಕ್ರಮಗಳು ಪೋಷಕರಿಗೆ ಸಮಾಧಾನಕರವಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಹೇಳಿದ್ದಾರೆ.
 
ಮಗುವಿನ ಕೊಲೆಯಲ್ಲಿ ತೀವ್ರ ಪಿತೂರಿ ನಡೆದಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೋಷಕರು ಈ ಕುರಿತು ಸೋಮುವಾರ ಬೆಳಿಗ್ಗೆ ಕುಟುಂಬವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದೆ.

Trending News