ನವದೆಹಲಿ: ರಿಯಾನ್ ಇಂಟರ್ನ್ಯಾಷನಲ್ ಭಂಡಾಸಿ ಶಾಖೆಯ ಪ್ರಾಂಶುಪಾಲರಾದ ನೀರಜ್ ಬಾತ್ರಾ ಅವರನ್ನು ನಗರದ ಮತ್ತೊಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಗುರ್ಗಾಂವ್ ಜಿಲ್ಲಾ ಆಡಳಿತ ಅನುಮತಿ ನೀಡಿದೆ. ಪ್ರಾಂಶುಪಾಲರು ಏಳು ವರ್ಷದ ಬಾಲಕ ಪ್ರದ್ಯುಮ್ನ ಠಾಕೂರ್ ಸಾವಿನಲ್ಲಿ ನೇರವಾಗಿ ಪಾಲ್ಗೊಂಡಿಲ್ಲವಾದ್ದರಿಂದ ಬಾತ್ರಾಗೆ ಕ್ಲೀನ್ ಚಿಟ್ ನೀಡಿ, ರಿಯಾನ್ ಇಂಟರ್ನ್ಯಾಷನಲ್ ಶಾಲೆಯ ಮತ್ತೊಂದು ಶಾಖೆಯಲ್ಲಿ ಕರ್ತವ್ಯಕ್ಕೆ ಮರಳಲು ಅನುಮತಿ ನೀಡಿ ಆದೇಶಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗುರ್ಗಾಂವ್ ಉಪ ಕಮಿಷನರ್ ವಿನಯ್ ಪ್ರತಾಪ್ ಸಿಂಗ್, "ಪ್ರದ್ಯುಮ್ನ ಠಾಕೂರ್ ಮರಣದ ನಂತರ ನಾನು ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್ ನ ಆದಲಿತಗಾರನಾಗಿದ್ದೇನೆ. ಬಾತ್ರಾ ಬಗ್ಗೆ ನಾನು ಎಲ್ಲ ರೀತಿಯಲ್ಲೂ ಮಾತನಾಡಿದ್ದೇನೆ. ನಾವು ಅವರನ್ನು ಸೆಕ್ಟರ್-40 ರಲ್ಲಿನ ಶಾಲೆಯಲ್ಲಿ ಕರ್ತವ್ಯಕ್ಕೆ ಮರಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು." ಬಾತ್ರ ಮತ್ತೆ ಕರ್ತವ್ಯಕ್ಕೆ ಮರಳಿರುವುದು ಪದ್ಯುಮ್ನ ಪೋಷಕರಲ್ಲಿ ಸಂತಸವನ್ನುಂಟು ಮಾಡಿಲ್ಲ.