2021 ರ ಏಪ್ರಿಲ್ 17 ರಂದು ವ್ಯವಹಾರ ಅವಧಿ ಮುಕ್ತಾಯದ ನಂತರ, ಆರ್ಟಿಜಿಎಸ್ (RTGS) ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಡಿಸಾಸ್ಟರ್ ರಿಕವರಿ ಸಮಯವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಸುಧಾರಿಸಲು ಆರ್ಟಿಜಿಎಸ್ ಅನ್ನು ತಾಂತ್ರಿಕವಾಗಿ ಅಪ್ ಡೇಟ್ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
RBI Monetary Policy - ಆರ್ಬಿಐನ ಹಣಕಾಸು ನೀತಿ ಸಮಿತಿ (MPC) ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಕೇಂದ್ರೀಯ ಬ್ಯಾಂಕ್ ನ ಈ ನಿರ್ಧಾರದಿಂದ ಸ್ಥಿರ ಖಾತೆಯಲ್ಲಿ (Fixed Deposit)ಹೂಡಿಕೆ ಮಾಡುವವರಿಗೆ ಲಾಭ ಸಿಗಲಿದೆ.
ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದಾಗ ಒಂದೊಮ್ಮೆ ಹರಿದ ನೋಟುಗಳನ್ನು ಪಡೆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ನೀವು ಈ ನೋಟುಗಳನ್ನು ಸುಲಭವಾಗಿ ಬದಲಾಯಿಸಿ ಹೊಸ ನೋಟುಗಳನ್ನು ಪಡೆಯಬಹುದು.
Auto-Debit Payments: ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಬಿಲ್, ವಿದ್ಯುತ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಗಳನ್ನು ಆಟೋ ಡೆಬಿಟ್ ಮೂಲಕ ಪಾವತಿಸುವ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.
Loan Moratorium ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಮೊರಟೋರಿಯಂ ಅವಧಿಯನ್ನು ಆಗಸ್ಟ್ 31 ರ ನಂತರ ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೆ ವೇಳೆ ಈ ಆರು ತಿಂಗಳ ಅವಧಿಯಲ್ಲಿ ಯಾವುದೇ ಸಾಲಗಾರರಿಂದ ಪಡೆದ ಬಡ್ಡಿಗೆ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
2 ಲಕ್ಷಕ್ಕೂ ಹೆಚ್ಚು ಜನರ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ನ ಡೇಟಾವನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಅಥವಾ ಹ್ಯಾಕಿಂಗ್ ಮಾಡುವ ಬಗ್ಗೆ ಸರ್ಕಾರಕ್ಕೆ ದೂರು ಬಂದಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲಾಯಿತು. ಒಂದು ವೇಳೆ ಹೌದು ಎಂದಾದರೆ, ಈ ವಿಷಯದಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಲಾಯಿತು.
ಸೆಪ್ಟೆಂಬರ್ 30, 2021 ರ ವೇಳೆಗೆ, ಎಲ್ಲಾ ಬ್ಯಾಂಕ್ ಗಳೂ ಇಮೇಜ್ ಆಧಾರಿತ ಸಿಟಿಎಸ್ ವ್ಯವಸ್ಥೆಯ ವ್ಯಾಪ್ತಿಗೆ ಬರುವುದು ಅನಿವಾರ್ಯವಾಗಿದೆ. ಎಲ್ಲಾ ಶಾಖೆ ಗಳಲ್ಲು ಸಿಟಿಎಸ್ ಅಳವಡಿಸಿರುವ ಬಗ್ಗೆ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ
National Payments Corporation Of India(NPCI)-SBI Payments - SBI Payments ಒಡಂಬಡಿಕೆಗೆ ಸಹಿ ಹಾಕುವ ಮೂಲಕ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI), 'RuPay SoftPoS' ಸೇವೆ ಬಿಡುಗಡೆಗೊಳಿಸಿದೆ.
Petrol-Diesel Prices: ಸಾಮಾನ್ಯ ಜನರಿಗೆ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಿಂದ ಪರಿಹಾರ ಸಿಗಲಿದೆ ಎಂದು ತೋರುತ್ತದೆ. ಏಕೆಂದರೆ ದುಬಾರಿ ಇಂಧನವು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು, ಇದು ಸರ್ಕಾರದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಬಗ್ಗೆ ಸರ್ಕಾರದೊಳಗೆ ಗಂಭೀರ ಚರ್ಚೆ ನಡೆದಿದೆ.
Deccan Urban Co-op Bank: ಬ್ಯಾಂಕಿನ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆ ಆರ್ಬಿಐ ಈ ಬಾಂಕಿನ ಎಲ್ಲಾ ಉಳಿತಾಯ ಮತ್ತು ಚಾಲ್ತಿ ಖಾತೆ ಗ್ರಾಹಕರಿಗೆ 6 ತಿಂಗಳಲ್ಲಿ ಕೇವಲ ಒಂದು ಸಾವಿರ ರೂಪಾಯಿಗಳನ್ನು ಹಿಂಪಡೆಯಲು ಅವಕಾಶ ನೀಡಿದೆ.
How to open Locker in Bank: ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಹೊಂದಿಲ್ಲ ಎಂದಾದಲ್ಲಿ ಅದಕ್ಕಾಗಿ ಇಂದೇ ಅಪ್ಲೈ ಮಾಡಿ. ಏಕೆಂದರೆ Locker Facility ಕುರಿತು ಶೀಘ್ರದಲ್ಲಿಯೇ ಮಹತ್ವದ ನಿರ್ಣಯವೊಂದು ಹೊರಬೀಳುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.