RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ಆರ್‌ಬಿಐನ ಮೊನಿಟರಿ ಪಾಲಿಸಿ ಕಮಿಟಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

Written by - Ranjitha R K | Last Updated : Apr 7, 2021, 11:59 AM IST
  • ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ - ಶಕ್ತಿಕಾಂತ ದಾಸ್
  • ಬಡ್ಡಿದರಗಳನ್ನು ಬದಲಾಯಿಸದಿರಲು ಎಂಪಿಸಿ ಸದಸ್ಯರ ತೀರ್ಮಾನ
  • ಆರ್‌ಬಿಐ ನೀತಿಯ ನಂತರ ಏರಿಕೆ ಕಂಡ ಶೇರು ಪೇಟೆ
RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ   title=
ಬಡ್ಡಿದರಗಳನ್ನು ಬದಲಾಯಿಸದಿರಲು ಎಂಪಿಸಿ ಸದಸ್ಯರ ತೀರ್ಮಾನ (file photo)

ನವದೆಹಲಿ : RBI Monetary Policy: ಆರ್‌ಬಿಐನ ಮೊನಿಟರಿ ಪಾಲಿಸಿ ಕಮಿಟಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.  MPC  ಸಭೆಯ ನಂತರ, ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯವನ್ನು ತಿಳಿಸಿದ್ದಾರೆ. ಬಡ್ಡಿದರಗಳನ್ನು ಬದಲಾಯಿಸದಿರಲು ಎಂಪಿಸಿಯ ಎಲ್ಲ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾವೊಬ್ಬ ಸದಸ್ಯ ಕೂಡಾ ಬಡ್ಡಿದರಗಳನ್ನು ಬದಲಾಯಿಸುವ ಬಗ್ಗೆ ತಮ್ಮ ಒಲವು ತೋರಿಸಲಿಲ್ಲ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 

ಆರ್‌ಬಿಐನ (RBI)ಈ  ನಿರ್ಧಾರದ ನಂತರ, ರೆಪೊ ದರವು 4% ರಷ್ಟಿರಲಿದೆ. ಇನ್ನು ರಿವರ್ಸ್ ರೆಪೊ ದರವು 3.35% ರಷ್ಟಿರಲಿದೆ. ರೆಪೋ ದರ (Repo rate) ಅಂದರೆ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಪಡೆಯುವ ಸಾಲದ ಮೇಲೆ ವಿಧಿಸಲಾಗುವ ಬಡ್ಡಿ ದರವಾಗಿರುತ್ತದೆ.  ರಿವರ್ಸ್ ರೆಪೊ ಅಂದರೆ ಬ್ಯಾಂಕುಗಳು ತಮ್ಮ ಹಣವನ್ನು ರಿಸರ್ವ್ ಬ್ಯಾಂಕಿನಲ್ಲಿ ಇಡುವುದಕ್ಕೆ ವಿಧಿಸುವ ದರವಾಗಿದೆ. MSF  ಮತ್ತು ಬ್ಯಾಂಕ್ ದರಗಳಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಇದನ್ನೂ ಓದಿ :  ನಿಮ್ಮ UPI ಪಾವತಿ ಫೇಲ್ ಆಗಿದೆಯಾ? ಅದಕ್ಕೆ  ಬ್ಯಾಂಕ್ ನೀಡಲಿದೆ ಪ್ರತಿದಿನ ₹ 100 ಪರಿಹಾರ!

ಕರೋನಾ (Coronavirus) ಸಾಂಕ್ರಾಮಿಕದ ಕಾರಣದಿಂದ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಹಾಕುವ ಪರಿಸ್ಥಿತಿ ಇದೆ.  ಇದು ಗ್ರೋಥ್ ರಿಕವರಿ (Growth recovery) ಮೇಲೆ ಪರಿಣಾಮ ಬೀರಲಿದೆ ಎಂದು ಶಕ್ತಿಕಾಂತ ದಾಸ್ (Shaktikant Das) ಸ್ಪಷ್ಟಪಡಿಸಿದ್ದಾರೆ.  ರಿಸರ್ವ್ ಬ್ಯಾಂಕಿನ ನೀತಿ  ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಶೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ. 

ಇದನ್ನೂ ಓದಿ :  Debit-Credit ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಹಿಂಪಡೆಯುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News