ಈ ವಾರವೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ಮುಂದಿಯ ವಾರ ಬ್ಯಾಂಕ್ ತೆರೆದಿರುವುದು ಮೂರೇ ದಿನ

ಮಾರ್ಚ್ 27 ರಂದು ತಿಂಗಳ ನಾಲ್ಕನೇ ಶನಿವಾರದ ಕಾರಣ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಅದರ ನಂತರ ಭಾನುವಾರ.    

Written by - Ranjitha R K | Last Updated : Mar 24, 2021, 05:19 PM IST
  • ಮುಂದಿನ 2 ದಿನಗಳಲ್ಲಿ ಅದನ್ನು ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ
  • ತಪ್ಪಿದರೆ ಏಪ್ರಿಲ್ 3 ರವರೆಗೆ ಕಾಯಬೇಕಾಗುತ್ತದೆ.
  • 7 ದಿನಗಳಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ ಬ್ಯಾಂಕ್
ಈ ವಾರವೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ಮುಂದಿಯ ವಾರ ಬ್ಯಾಂಕ್ ತೆರೆದಿರುವುದು ಮೂರೇ ದಿನ title=
7 ದಿನಗಳಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ ಬ್ಯಾಂಕ್ (file photo)

ನವದೆಹಲಿ: Bank Holidays: ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ತುರ್ತು ಕೆಲಸಗಳಿದ್ದರೆ, ಮುಂದಿನ 2 ದಿನಗಳಲ್ಲಿ ಅದನ್ನು ಮುಗಿಸಿಕೊಳ್ಳಿ.  ಮಾರ್ಚ್ 27 ರಿಂದ ಏಪ್ರಿಲ್ 4 ರವರೆಗೆ ಬ್ಯಾಂಕುಗಳು (Bank) ಕೇವಲ ಮೂರು  ದಿನಗಳವರೆಗೆ ಮಾತ್ರ ತೆರೆದಿರುತ್ತವೆ. ಒಂದು ವೇಳೆ ಈ ವೇಳೆಯಲ್ಲಿ ಬ್ಯಾಂಕ್ ಕೆಲಸವನ್ನು ಮುಗಿಸಲು ಸಾಧ್ಯವಾಗದೆ ಹೋದರೆ ಮತ್ತೆ ಏಪ್ರಿಲ್ 3 ರವರೆಗೆ ಕಾಯಬೇಕಾಗುತ್ತದೆ.

ಮಾರ್ಚ್ 27 ರಂದು ತಿಂಗಳ ನಾಲ್ಕನೇ ಶನಿವಾರದ (Saturday) ಕಾರಣ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಅದರ ನಂತರ ಭಾನುವಾರ.  ಮುಂದಿನ ದಿನ ಮಾರ್ಚ್ 29 ರಂದು ಹೋಳಿಹಬ್ಬ (Holi). ಈ ದಿನ ಉತ್ತರಭಾರತದಲ್ಲಿ  ಬ್ಯಾಂಕಿಗೆ ರಜೆ ಇರುತ್ತದೆ.  ಬ್ಯಾಂಕಿನ  ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕಿನ ಪ್ರಮುಖ ಕೆಲಸಗಳನ್ನು ಈ ವಾರ ಮಾಡಬೇಕು.

ಇದನ್ನೂ ಓದಿ : ಅಂತರಾಷ್ಟ್ರೀಯ ಬ್ಯಾಹ್ಯಾಕಾಶ ನಿಲ್ದಾಣದಲ್ಲಿನ ಬ್ಯಾಕ್ಟೀರಿಯಾಗೆ ಭಾರತೀಯ ವಿಜ್ಞಾನಿ ಹೆಸರು

7 ದಿನಗಳಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ ಬ್ಯಾಂಕ್ :
ಮುಂದಿನ ವಾರ ಮಾರ್ಚ್ ೨೯, 30 ಮತ್ತು ಏಪ್ರಿಲ್ 3 ರಂದು ಮಾತ್ರ ಬ್ಯಾಂಕ್ ಗ್ರಾಹಕರಿಗೆ (Customer) ತೆರೆದಿರುತ್ತದೆ. ಮಾರ್ಚ್ 31 ಹಣಕಾಸು ವರ್ಷದ (Finacial year) ಕೊನೆಯ ದಿನವಾಗಿರುತ್ತದೆ. ಆ ದಿನ ಬ್ಯಾಂಕ್ ತನ್ನ ಆಂತರಿಕ ಕೆಲಸಗಳನ್ನು ನಿಭಾಯಿಸುತ್ತದೆ. ಗ್ರಾಹಕರ ಕೆಲಸಗಳು ಬ್ಯಾಂಕಿನಲ್ಲಿ ನಡೆಯುವುದಿಲ್ಲ. 

ರಜಾದಿನಗಳ ಪಟ್ಟಿ ಇಲ್ಲಿದೆ
ಮಾರ್ಚ್ 27 - ನಾಲ್ಕನೇ ಶನಿವಾರ  (ರಜೆ)
ಮಾರ್ಚ್ 28 - ಭಾನುವಾರ(ರಜೆ)
ಮಾರ್ಚ್ 31 - ಹಣಕಾಸು ವರ್ಷದ ಕೊನೆಯ ದಿನ, ಗ್ರಾಹಕರ ಕೆಲಸ ನಡೆಯುವುದಿಲ್ಲ
ಏಪ್ರಿಲ್ 1 - ಬ್ಯಾಂಕಿನ ವಾರ್ಷಿಕ ಖಾತೆಯ ಮುಕ್ತಾಯ ವರ್ಷ.
ಏಪ್ರಿಲ್ 2 - ಗುಡ್ ಫ್ರೈಡೆ (ರಜೆ)
ಏಪ್ರಿಲ್ 4 - ಭಾನುವಾರ (ರಜೆ)

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ.  ಇದರಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸದ ದಿನಾಂಕಗಳನ್ನು ಉಲ್ಲೇಖಿಸಿದೆ .  ಹಾಗಾಗಿ ಬ್ಯಾಂಕ್ ರಜಾ ದಿನಗಳನ್ನ ತಿಳಿದುಕೊಂಡು ನಿಮ್ಮ ಕೆಲಸ ಪೂರೈಸಿಕೊಳ್ಳಿ.  

ಇದನ್ನೂ ಓದಿ : ಈ ಕಂಪನಿ ನೀಡುತ್ತಿದೆ ಭರ್ಜರಿ ಉದ್ಯೋಗಾವಕಾಶ ; ಪ್ರತಿ ತಿಂಗಳ ವೇತನ 7 ಲಕ್ಷ ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News