April Month Bank Holidays : ಏಪ್ರಿಲ್ ತಿಂಗಳಲ್ಲಿ ಎಷ್ಟು 'ದಿನ ಬ್ಯಾಂಕ್ ರಜೆ' ಇರಲಿದೆ ಗೊತ್ತಾ?

ಈ ತಿಂಗಳಲ್ಲಿ 9 ದಿನಗಳ ಕಾಲ ರಜೆ ಇರಲಿದೆ.

Last Updated : Mar 28, 2021, 01:45 PM IST
  • ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.
  • ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
  • ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
April Month Bank Holidays : ಏಪ್ರಿಲ್ ತಿಂಗಳಲ್ಲಿ ಎಷ್ಟು 'ದಿನ ಬ್ಯಾಂಕ್ ರಜೆ' ಇರಲಿದೆ ಗೊತ್ತಾ? title=

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(RBI) ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ರಾಮನವಮಿ, ಗುಡ್ ಫ್ರೈಡೇ, ಬಿಹು, ತಮಿಳು ಹೊಸ ವರ್ಷಾಚರಣೆ ಮುಂತಾದ ಹಬ್ಬಗಳು ಸಾಲು ಸಾಲು ರಜೆಗಳನ್ನು ತಂದಿವೆ. ಒಟ್ಟಾರೆ, ಈ ತಿಂಗಳಲ್ಲಿ 9 ದಿನಗಳ ಕಾಲ ರಜೆ ಇರಲಿದೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ(Govt Holiday) ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

Holi 2021ರ ಬಳಿಕ 11 ಕೋಟಿ 74 ಲಕ್ಷ ರೈತರಿಗೆ ಸಿಗಲಿದೆ ಈ ಸಂತಸದ ಸುದ್ದಿ!

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ(Independence Day Holiday) (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿ ಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. 

Coronavirus: ಒಂದರಿಂದ ಎಂಟನೇ ತರಗತಿವರೆಗೆ ಈ ಬಾರಿಯೂ ನಡೆಯಲಿದೆ Online classes

ದಿನಾಂಕ ದಿನ ರಜಾದಿನಗಳು
ಏಪ್ರಿಲ್ 01, 2021 ಗುರುವಾರ ವಾರ್ಷಿಕ ಖಾತೆಗಳ ಮುಕ್ತಾಯ, ಹೊಸ ಆರ್ಥಿಕ ವರ್ಷಾರಂಭ
ಏಪ್ರಿಲ್ 02 ಶುಕ್ರವಾರ ಗುಡ್ ಫ್ರೈಡೇ
ಏಪ್ರಿಲ್ 05 ಸೋಮವಾರ ಬಾಬು ಜಗಜೀವನ್ ರಾಮ್ ಹುಟ್ಟುಹಬ್ಬ
ಏಪ್ರಿಲ್ 06 ಮಂಗಳವಾರ ತಮಿಳುನಾಡು ವಿಧಾನಸಭೆ ಚುನಾವಣೆ
ಏಪ್ರಿಲ್ 13 ಮಂಗಳವಾರ ಗುಡಿ ಪಡ್ವಾ, ತೆಲುಗು ಹೊಸ ವರ್ಷಾಚರಣೆ, ಉಗಾದಿ, ಬೈಸಾಕಿ
ಏಪ್ರಿಲ್ 14 ಬುಧವಾರ ಡಾ. ಅಂಬೇಡ್ಕರ್ ಜಯಂತಿ, ತಮಿಳು ಹೊಸ ವರ್ಷಾಚರಣೆ, ವಿಶು, ಬೊಹಾಗ್ ಬಿಹು, ಬಿಜು, ಚೆರೊಬಾ
ಏಪ್ರಿಲ್ 15 ಗುರುವಾರ ಹಿಮಾಚಲ ದಿನ, ಬೆಂಗಾಳಿ ದಿನಾಚರಣೆ, ಬಿಹು, ಸರ್ಹುಲ್
ಏಪ್ರಿಲ್ 16 ಶುಕ್ರವಾರ ಬೊಹಾಂಗ್ ಬಿಹು
ಏಪ್ರಿಲ್ 21 ಬುಧವಾರ ಶ್ರೀರಾಮನವಮಿ, ಗರಿಯಾ ಪೂಜಾ

ಬ್ಯಾಂಕ್ ಕಚೇರಿಗಳು ಬಂದ್ ಆಗಿದ್ದರೂ, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್(Internet Banking) ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

Coronavirus : ನಿಯಂತ್ರಣವಿಲ್ಲದಿದ್ದರೆ ಒಬ್ಬ ಪೀಡಿತ 406 ಜನರಿಗೆ ಸೋಂಕು ಹರಡಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

Trending News