ನಿಮ್ಮ ಜೇಬಿನಲ್ಲಿರುವ 50, 200ರ ನೋಟು ನಕಲಿಯೇ ಚೆಕ್ ಮಾಡಿಕೊಳ್ಳಿ..!

ಎಚ್ಚರ..! ನಿಮ್ಮ ಬಳಿ ಇರುವ  50 ಮತ್ತು 200 ರೂಪಾಯಿ ನೋಟು ನಕಲಿಯಾಗಿರಬಹುದು. ಇತ್ತೀಚಿನ ದಿನಗಳಲ್ಲಿ 50 ಮತ್ತು 200 ರೂಪಾಯಿಗಳ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ.  

Written by - Ranjitha R K | Last Updated : Feb 12, 2021, 03:33 PM IST
  • ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ ನಕಲಿ ನೋಟುಗಳು
  • ನಕಲಿ ನೋಟುಗಳನ್ನು ತಿಳಿಯುವುದು ಹೇಗೆ
  • ನೋಟುಗಳು ಅಸಲಿಯೋ ನಕಲಿಯೋ ಪತ್ತೆ ಹಚ್ಚಲು ಆರ್ ಬಿಐ ಮಾರ್ಗದರ್ಶನ
ನಿಮ್ಮ ಜೇಬಿನಲ್ಲಿರುವ  50, 200ರ ನೋಟು ನಕಲಿಯೇ ಚೆಕ್ ಮಾಡಿಕೊಳ್ಳಿ..! title=
ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ ನಕಲಿ ನೋಟುಗಳು (file photo)

ನವದೆಹಲಿ : How to check FAKE NOTES : ಎಚ್ಚರ..! ನಿಮ್ಮ ಬಳಿ ಇರುವ  50 ಮತ್ತು 200 ರೂಪಾಯಿ ನೋಟು ನಕಲಿಯಾಗಿರಬಹುದು. ಇತ್ತೀಚಿನ ದಿನಗಳಲ್ಲಿ 50 ಮತ್ತು 200 ರೂಪಾಯಿಗಳ ನಕಲಿ ನೋಟುಗಳು (Fake Notes) ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ನಕಲಿ ನೋಟುಗಳ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ  ಆರ್ ಬಿಐ (RBI) ಮುಂದಾಗಿದೆ. 

ನಕಲಿ ನೋಟುಗಳನ್ನು ಪರಿಶೀಲಿಸುವುದು ಹೇಗೆ ? 
ನಮ್ಮಲ್ಲಿರುವ ನೋಟು ಅಸಲಿಯೋ ನಕಲಿಯೋ ಎಂಬುದನ್ನು ಪತ್ತೆಹಚ್ಚುವುದು ಹೇಗೆ ಎನ್ನುವುದೇ ಪ್ರಶ್ನೆ. ಇದಕ್ಕಾಗಿ ಆರ್ ಬಿಐ (RBI) ಸಾರ್ವಜನಿಕರಿಗೆ ನಕಲಿ ನೋಟುಗಳ (Fake notes) ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.  ಹಣಕಾಸು ಜಾಗೃತಿ ಸಪ್ತಾಹದ ಅಂಗವಾಗಿ  ರಿಸರ್ವ್ ಬ್ಯಾಂಕ್ (Reserve Bank of India) ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹತ್ತು, ಇಪ್ಪತ್ತು, ಐವತ್ತು ಮತ್ತು ಇನ್ನೂರು ರೂಪಾಯಿಗಳ ನಕಲಿ ನೋಟನ್ನು (Fake Note) ಗುರುತಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಕಿರು ಪುಸ್ತಕದ ಮೂಲಕ ಮಾಹಿತಿ ನೀಡಲಾಯಿತು.  

ಇದನ್ನೂ ಓದಿ : ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್

50 ರ ನೋಟು ಅಸಲಿಯೇ ಎಂದು ಗುರುತಿಸುವುದು ಹೇಗೆ? :
. 50 ಅನ್ನು ದೇವನಾಗರಿಯಲ್ಲಿ ಬರೆಯಲಾಗಿರುತ್ತದೆ
.ಮಧ್ಯದಲ್ಲಿ ಮಹಾತ್ಮ ಗಾಂಧಿ (Mahatma Gandhi) ಫೋಟೋ ಇದೆ
. ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ
.ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ
. ಎಲೆಕ್ಟೊಯಿಪ್ 50 ವಾಟರ್ ಮಾರ್ಕ್ (Water Mark) ಹೊಂದಿರುತ್ತದೆ
.ನಂಬರ್ ಪ್ಯಾನಲ್ ಅನ್ನು ಮೇಲೆ ಎಡಭಾಗದಲ್ಲಿ ಮತ್ತು ಕೆಳಗೆ ಬಲಭಾಗದಲ್ಲಿ ಸಣ್ಣದರಿಂದ ದೊಡ್ಡ ಗಾತ್ರದಲ್ಲಿ ಬರೆಯಲಾಗಿದೆ.
.50 ರೂಪಾಯಿ ನೋಟನ್ನು ಯಾವ ವರ್ಷ ಮುದ್ರಿಸಲಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ
. ಸ್ವಚ್ಛ ಭಾರತ್ ನ (Swatch Bharath) ಲೋಗೋ ಮತ್ತು ಸ್ಲೋಗನ್ 50 ರೂಪಾಯಿ ನೋಟಿನಲ್ಲಿ ಇರುತ್ತದೆ. 
. ನಂಬರ್ ಪ್ಯಾನಲ್  ಮತ್ತು ಅದರ ಸೈಜ್ 66 * 135 ಮಿ.ಮೀ ಆಗಿರುತ್ತದೆ

ಇದನ್ನೂ ಓದಿ : ಶೀಘ್ರದಲ್ಲಿಯೇ ದೇಶಾದ್ಯಂತ One Nation, One Ombudsman ಯೋಜನೆ ಜಾರಿ: RBI

200 ರೂಪಾಯಿ ನೋಟಿನಲ್ಲೂ ಇಂಥಹ ಕೆಲ ವಿಚಾರಗಳಿರುತ್ತವೆ.
. ದೇವನಾಗರಿಯಲ್ಲಿ 200 ಎಂದು ಬರೆಯಲಾಗಿರುತ್ತದೆ 
. ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಣ್ಣ ಅಕ್ಷರಗಳಲ್ಲಿ 200  ಎಂದು ಬರೆಯಲಾಗಿರುತ್ತದೆ 
. ಬಣ್ಣ ಬದಲಾವಣೆ ಸೇರಿದಂತೆ  ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ
. ನೋಟನ್ನು (Note) ತಿರುಗಿಸಿ ನೋಡಿದಾಗ ಸೇಫ್ಟಿ ಥ್ರೆಡ್ನ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ
. ಗವರ್ನರ್ ಸಹಿ ಇರುತ್ತದೆ
. ರಿಸರ್ವ್ ಬ್ಯಾಂಕಿನ ಚಿಹ್ನೆ, ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರೋಟೈಪ್ 200 ವಾಟರ್‌ಮಾರ್ಕ್ ಅನ್ನು ಹೊಂದಿರತ್ತದೆ
.ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ

ಬ್ಯಾಂಕಿಂಗ್ (Bank) ಸೇವೆಗಳಿಗೆ ಸಂಬಂಧಪಟ್ಟಂತೆ ದೂರುಗಳಿದ್ದರೆ, ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಯಾವುದೇ ಸಂಸ್ಥೆಯ ವಿರುದ್ಧ, ಲೋಕಪಾಲ್ ಎದುರು ಆನ್ ಲೈನ್ ನಲ್ಲಿ ತಮ್ಮ ದೂರನ್ನು ದಾಖಲಿಸಬಹುದು. ಇದಕ್ಕಾಗಿ https://cms.rbi.org.inನಲ್ಲಿ ರಿಜಿಸ್ಟ್ರೇಷನ್ ಮಾಬೇಕಾಗುತ್ತದೆ. ಯಾವುದೇ ಬ್ಯಾಂಕಿನ ಸೇವೆ ತೃಪ್ತಿ ನಿಡುವ ಮಟ್ಟದಲ್ಲಿ ಇರದಿದ್ದಲ್ಲಿ ಸಾರ್ವಜನಿಕರು ದೂರು ನೀಡಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News