Team India: ಐಪಿಎಲ್ 2023 ರಲ್ಲಿ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಹೆಣಗಾಡುತ್ತಿದ್ದರೆ, 32 ವರ್ಷದ ರಾಹುಲ್ ತ್ರಿಪಾಠಿ ಈ ಋತುವಿನಲ್ಲಿ ತಮ್ಮ ಬಿರುಗಾಳಿಯ ಆಟವನ್ನು ತೋರಿಸುತ್ತಿದ್ದಾರೆ. ರಾಹುಲ್ ತ್ರಿಪಾಠಿ ಇದುವರೆಗೆ ಟೀಮ್ ಇಂಡಿಯಾ ಪರ ಕೇವಲ 5 ಪಂದ್ಯಗಳನ್ನು ಆಡಿದ್ದಾರೆ. ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಬ್ಯಾಟ್ ಬೀಸಿದ್ದು, ಸ್ಫೋಟಕ ಇನ್ನಿಂಗ್ಸ್ ಕಂಡು ಬಂದಿದೆ
SRH vs PKB: ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಆಕರ್ಷಕ ಇನ್ನಿಂಗ್ಸ್ ಆಡಿದ್ದು, ಇನ್ನೊಂದು ತುದಿಯಿಂದ ಬೆಂಬಲ ಸಿಗದಿದ್ದರೂ ಔಟಾಗದೆ 99 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ 20 ಓವರ್ಗಳಲ್ಲಿ 9 ವಿಕೆಟ್’ಗೆ 143 ರನ್’ಗಳ ಗೌರವಾನ್ವಿತ ಸ್ಕೋರ್ ಗಳಿಸಿತು.
India vs New Zealand 3rd T20 : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯ ಇಂದು ಸಂಜೆ 7:00 ಗಂಟೆಗೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಯಾವ ತಂಡ ಗೆಲ್ಲುತ್ತದೆಯೋ ಆ ತಂಡ ಟಿ20 ಸರಣಿಯನ್ನು ಗೆಲ್ಲಲಿದೆ.
India vs New Zealand : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿಯ ಎರಡನೇ ಪಂದ್ಯ ನಾಳೆ ಅಂದರೆ ಜನವರಿ 29 ರಂದು ರಾತ್ರಿ 7:00 ರಿಂದ ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್ಗಳಿಂದ ಸೋಲು ಕಂಡಿತ್ತು.
India vs Bangladesh: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ಆಯ್ಕೆಗಾರರು 31 ವರ್ಷದ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ. ಈ ಆಟಗಾರ ತನ್ನ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಈ ಆಟಗಾರನಿಗೆ ಅವಕಾಶ ಸಿಕ್ಕರೆ ಅದೃಷ್ಟ ಖುಲಾಯಿಸಲಿದೆ.
ಇನ್ನು ಈ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಈ ಪಂದ್ಯದಲ್ಲೂ ಬಲಿಷ್ಠ ಬ್ಯಾಟ್ಸ್ಮನ್ಗೆ ಸ್ಥಾನ ನೀಡಿಲ್ಲ. ಈ ಆಟಗಾರ 31ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ.
ಜೂನ್ 26 ರಂದು ಪ್ರಾರಂಭವಾಗುವ ಐರ್ಲೆಂಡ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾದ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕರನ್ನಾಗಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕರನ್ನಾಗಿ ಹೆಸರಿಸಲಾಗಿದೆ.ಇನ್ನೊಂದೆಡೆಗೆ ರಾಹುಲ್ ತ್ರಿಪಾಠಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.