IND vs BAN: ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಆಟಗಾರನ ಅದೃಷ್ಟ ಖುಲಾಯಿಸಲಿದೆ?!

India vs Bangladesh: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ಆಯ್ಕೆಗಾರರು 31 ವರ್ಷದ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ. ಈ ಆಟಗಾರ ತನ್ನ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಈ ಆಟಗಾರನಿಗೆ ಅವಕಾಶ ಸಿಕ್ಕರೆ ಅದೃಷ್ಟ ಖುಲಾಯಿಸಲಿದೆ.

Written by - Puttaraj K Alur | Last Updated : Dec 3, 2022, 07:34 AM IST
  • ಬಾಂಗ್ಲಾ ಪ್ರವಾಸಕ್ಕೆ 31 ವರ್ಷದ ಆಟಗಾರನಿಗೆ ಭಾರತದ ಆಯ್ಕೆಗಾರರು ತಂಡದಲ್ಲಿ ಸ್ಥಾನ ನೀಡಿದ್ದಾರೆ
  • ರೋಹಿತ್ ಶರ್ಮಾ ನಾಯಕತ್ವದಲ್ಲಿ ರಾಹುಲ್ ತ್ರಿಪಾಠಿಗೆ ಸಿಕ್ತು ಆಡುವ ಅವಕಾಶ
  • ಹಲವು ಸರಣಿಗಳಲ್ಲಿ ತಂಡದಲ್ಲಿದ್ದರೂ ರಾಹುಲ್ ತ್ರಿಪಾಠಿಗೆ ಆಡುವ ಅವಕಾಶ ಸಿಕ್ಕಿಲ್ಲ
IND vs BAN: ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಆಟಗಾರನ ಅದೃಷ್ಟ ಖುಲಾಯಿಸಲಿದೆ?!  title=
ರಾಹುಲ್ ತ್ರಿಪಾಠಿಗೆ ಆಡುವ ಅವಕಾಶ

ನವದೆಹಲಿ: ಬಾಂಗ್ಲಾದೇಶ ಪ್ರವಾಸದಲ್ಲಿರುವ 31 ವರ್ಷದ ಆಟಗಾರನಿಗೆ ಭಾರತದ ಆಯ್ಕೆಗಾರರು ತಂಡದಲ್ಲಿ ಸ್ಥಾನ ನೀಡಿದ್ದಾರೆ. ಈ ಆಟಗಾರ ಟೀಂ ಇಂಡಿಯಾ ಪರ ಇನ್ನೂ ಒಂದು ಪಂದ್ಯವನ್ನು ಆಡಿಲ್ಲ. ಈ ಆಟಗಾರನು ಐಪಿಎಲ್ 2022ರಿಂದ ಭಾರತ ತಂಡಕ್ಕೆ ಹಲವು ಬಾರಿ ಆಯ್ಕೆಯಾಗಿದ್ದಾನೆ, ಆದರೆ ಒಮ್ಮೆಯೂ ಆಡುವ 11ರ ಭಾಗವಾಗಿರಲಿಲ್ಲ. ಈ ಆಟಗಾರ ಇದೀಗ ಬಾಂಗ್ಲಾದೇಶ ಪ್ರವಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ.

ಈ ಆಟಗಾರನ ಅದೃಷ್ಟ ಖುಲಾಯಿಸಲಿದೆ?

ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ತಂಡದ ಏಕದಿನ ತಂಡದಲ್ಲಿ 31 ವರ್ಷದ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಸ್ಥಾನ ಪಡೆದಿದ್ದಾರೆ. ಈ ಸರಣಿಯಲ್ಲಿ ರಾಹುಲ್ ತ್ರಿಪಾಠಿಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ರಾಹುಲ್ ತ್ರಿಪಾಠಿ ರೋಹಿತ್ ನಾಯಕತ್ವದಲ್ಲಿ ತಂಡದ ಭಾಗವಾಗಿದ್ದರು, ಆದರೆ ಆಡುವ ಅವಕಾಶ ದೊರೆತಿರಲಿಲ್ಲ.

ಇದನ್ನೂ ಓದಿ: “ನಾವು ವಜ್ರಗಳನ್ನು ಹುಡುಕಲು ಹೋಗಿ ಚಿನ್ನವನ್ನು ಕಳೆದುಕೊಂಡಿದ್ದೇವೆ”

ತಂಡದಲ್ಲಿ ನಿರಂತರವಾಗಿ ಅವಕಾಶ ಸಿಗುತ್ತಿದೆ

ರಾಹುಲ್ ತ್ರಿಪಾಠಿ ತನ್ನ ಚೊಚ್ಚಲ ಪಂದ್ಯಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದಾನೆ. ದೇಶಿಯ ಕ್ರಿಕೆಟ್‌ನಲ್ಲೂ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇಲ್ಲಿಯವರೆಗೆ 4 ಸರಣಿಗಳಲ್ಲಿ ಟೀಂ ಇಂಡಿಯಾದ ತಂಡದ ಭಾಗವಾಗಿದ್ದ ಅವರು ಈ ಎಲ್ಲಾ ಸರಣಿಗಳಲ್ಲಿಯೂ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು. ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತು ಇಂಗ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸದಲ್ಲಿಯೂ ತಂಡದೊಂದಿಗೆ ತೆರಳಿದ್ದರು.

ಐಪಿಎಲ್ 2022ರಲ್ಲೂ ಛಾಪು ಮೂಡಿಸಿರುವ ಆಟಗಾರ

ಐಪಿಎಲ್ 2022ರಲ್ಲಿ ರಾಹುಲ್ ತ್ರಿಪಾಠಿ 14 ಪಂದ್ಯಗಳಲ್ಲಿ 414 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನದಿಂದಾಗಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಐರ್ಲೆಂಡ್ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 2 ಟಿ-20 ಪಂದ್ಯಗಳಿಗೆ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೇವಲ 1 ಟಿ-20 ಪಂದ್ಯಕ್ಕೆ ರಾಹುಲ್ ತ್ರಿಪಾಠಿ ಅವರನ್ನು ತಂಡಕ್ಕೆ ಸೇರಿಸಲಾಯಿತು. ಇದರ ನಂತರ ಅವರು ಜಿಂಬಾಬ್ವೆ ಪ್ರವಾಸ ಮತ್ತು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಧವನ್ ನಾಯಕತ್ವದಲ್ಲಿ ತಂಡದ ಭಾಗವಾಗಿದ್ದರು. ದುರಾದೃಷ್ಟವೆಂದರೆ ಈ ಆಟಗಾರನಿಗೆ ಈ ಯಾವ ಸರಣಿಯಲ್ಲಿಯೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ: One Over 6 Wickets: 6 ಬಾಲ್ ಗಳಲ್ಲಿ 6 ವಿಕೆಟ್, ಬೌಲರ್ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News