Saina Nehwal Corona Positive - ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಯೋನೆಕ್ಸ್ ಥೈಲ್ಯಾಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ಭಾಗವಹಿಸಬೇಕಿದೆ. ಆದರೆ, ಈಗ ಅವರು ಟೂರ್ನಿಯಲ್ಲಿ ಭಾಗವಹಿಸುವುದು ಬಹುತೇಕ ಕಠಿಣ ಎಂದೇ ಹೇಳಲಾಗುತ್ತಿದೆ.
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 13-21, 15-21ರಲ್ಲಿ ಜಪಾನ್ನ ಕೆಂಟೊ ಮೊಮೊಟಾ ವಿರುದ್ಧ ಸೆಮಿಫೈನಲ್ ನಲ್ಲಿ ಸೋತ ನಂತರ ಪರುಪಲ್ಲಿ ಕಶ್ಯಪ್ ಈಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ಕೊರಿಯಾ ಓಪನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರುಪಲ್ಲಿ ಕಶ್ಯಪ್ 24-22, 21-8ರಿಂದ ಡೆನ್ಮಾರ್ಕ್ನ ಜಾನ್ ಒ ಜೋರ್ಗೆನ್ಸನ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.