ನವದೆಹಲಿ: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 13-21, 15-21 ಅಂತರದಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಮಿಫೈನಲ್ ನಲ್ಲಿ ಸೋತ ನಂತರ ಪರುಪಲ್ಲಿ ಕಶ್ಯಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ವಿಶ್ವದ ನಂಬರ್ 1 ಆಟಗಾರನಾಗಿರುವ ಜಪಾನಿನ ಕೆಂಟೋ ಮೊಮೊಟಾ ನೇರ ಪಂದ್ಯಗಳಲ್ಲಿ ಪಿ.ಕಶ್ಯಪ್ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಕಶ್ಯಪ್ ನೇರ ಪಂದ್ಯಗಳಲ್ಲಿ ಡೆನ್ಮಾರ್ಕ್‌ನ ಜಾನ್ ಒ ಜೋರ್ಗೆನ್ಸನ್‌ರನ್ನು ಸೋಲಿಸಿ ಸೆಮಿಸ್‌ನಲ್ಲಿ ಸ್ಥಾನ ಗಳಿಸಿದ್ದರು.
ಸೆಮಿಫೈನಲ್ ನಲ್ಲಿ ಮೊದಲ ಗೇಮ್ ನಿಂದಲೂ ಪ್ರಾಬಲ್ಯ ಸಾಧಿಸಿದ ಜಪಾನಿನ ಆಟಗಾರ ಕೆಂಟೋ ಅವರು ಕಶ್ಯಪ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಎರಡನೇ ಗೇಮ್ ನಲ್ಲಿ ಕಶ್ಯಪ್ ಪ್ರಯಾಸಪಟ್ಟರಾದರೂ ಕೂಡ ಅವರ ಶ್ರಮ ಅವರಿಗೆ ಪಂದ್ಯ ಗೆಲ್ಲುವಷ್ಟು ಸಾಕಾಗಲಿಲ್ಲ.