ಕೊರಿಯಾ ಓಪನ್‌: ಸೆಮಿಫೈನಲ್ ಗೆ ತಲುಪಿದ ಪಿ.ಕಶ್ಯಪ್

ಶುಕ್ರವಾರ ನಡೆದ ಕೊರಿಯಾ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರುಪಲ್ಲಿ ಕಶ್ಯಪ್ 24-22, 21-8ರಿಂದ ಡೆನ್ಮಾರ್ಕ್‌ನ ಜಾನ್ ಒ ಜೋರ್ಗೆನ್ಸನ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

Last Updated : Sep 27, 2019, 06:13 PM IST
ಕೊರಿಯಾ ಓಪನ್‌: ಸೆಮಿಫೈನಲ್ ಗೆ ತಲುಪಿದ ಪಿ.ಕಶ್ಯಪ್  title=
file photo

ನವದೆಹಲಿ: ಶುಕ್ರವಾರ ನಡೆದ ಕೊರಿಯಾ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರುಪಲ್ಲಿ ಕಶ್ಯಪ್ 24-22, 21-8ರಿಂದ ಡೆನ್ಮಾರ್ಕ್‌ನ ಜಾನ್ ಒ ಜೋರ್ಗೆನ್ಸನ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

37 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಕಶ್ಯಪ್ ಎರಡು ನೇರ ಪಂದ್ಯಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಮೊದಲ ಪಂದ್ಯದಲ್ಲಿ ಎದುರಾಳಿಯಿಂದ ಕಠಿಣ ಹೋರಾಟವನ್ನು ಎದುರಿಸಿದ ನಂತರ ಕಶ್ಯಪ್ ಪಂದ್ಯವನ್ನು ಗೆದ್ದರು. ಎರಡನೇ ಗೇಮ್‌ನಲ್ಲಿ, ಕಶ್ಯಪ್ ತನ್ನ ಎದುರಾಳಿಯನ್ನು ಮೀರಿಸಿ 21-8ರಿಂದ ಆಟವನ್ನು ತಮ್ಮದಾಗಿಸಿಕೊಂಡರು. ಗುರುವಾರದಂದು ನಡೆದ ಪಂದ್ಯದಲ್ಲಿ ಪಿ.ಕಶ್ಯಪ್ ಎರಡನೇ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಡೇರೆನ್ ಲಿವ್ ಅವರನ್ನು 21-17, 11-21, 21-12ರಿಂದ ಹಿಂದಿಕ್ಕಿದರು.

ಈಗ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಮತ್ತು ಸಾಯಿ ಪ್ರಣೀತ್ ಅವರನ್ನು ಟೂರ್ನಿಯಿಂದ ಹೊರ ಬಂದ ನಂತರ ಕೊರಿಯಾ ಓಪನ್‌ನಲ್ಲಿ ಉಳಿದಿರುವ ಏಕೈಕ ಭಾರತೀಯ ಕಶ್ಯಪ್ ಆಗಿದ್ದಾರೆ. ಸೆಪ್ಟೆಂಬರ್ 28 ರಂದು ವಿಶ್ವದ ನಂಬರ್ ಒನ್ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದ್ದಾರೆ. 

Trending News