Saina Nehwal Corona Positive - ಬ್ಯಾಂಕಾಕ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ, ಅಂತರರಾಷ್ಟ್ರೀಯ ಕ್ಯಾಲೆಂಡರ್ ದೀರ್ಘಕಾಲದವರೆಗೆ ಪ್ರಭಾವಕ್ಕೆ ಒಳಗಾಗಿತ್ತು ಮತ್ತು ಇದೀಗ ಸೈನಾ ಯೋನೆಕ್ಸ್ ಥೈಲ್ಯಾಂಡ್ ಓಪನ್ ಸೂಪರ್ 1000 ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿತ್ತು. ಪಂದ್ಯಾವಳಿ ಜನವರಿ 12 ರಿಂದ 17 ರವರೆಗೆ ನಡೆಯಲು ನಿರ್ಧರಿಸಲಾಗಿದೆ ಆದರೆ, ಈಗ ಸೈನಾ ಆಡುವುದು ಬಹುತೇಕ ಕಠಿಣ ಎನ್ನಲಾಗುತ್ತಿದೆ.
3rd COVID test here in bangkok 😢😢... The tournament starts tomorrow 👍👍 #bangkok #Thailandopen #tournament #badminton pic.twitter.com/Lc5c7YZkQa
— Saina Nehwal (@NSaina) January 11, 2021
ಇದಕ್ಕೂ ಮೊದಲು, ಲಂಡನ್ ಒಲಿಂಪಿಕ್ಸ್ (2012) ಕಂಚಿನ ಪದಕ ವಿಜೇತೆಯಾಗಿರುವ ಸೈನಾ (Saina Nehwal) ಕೋವಿಡ್ -19 ಪ್ರೋಟೋಕಾಲ್ ಅಡಿಯಲ್ಲಿ ಬಿಡಬ್ಲ್ಯೂಎಫ್ ವಿಧಿಸಿರುವ ನಿರ್ಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವಾರು ಟ್ವೀಟ್ಗಳನ್ನು ಮಾಡಿದ್ದರು. "ತನಿಖೆಯಲ್ಲಿ ಎಲ್ಲರೂ ನಕಾರಾತ್ಮಕವಾಗಿದ್ದರೂ ವೈದ್ಯರು ಮತ್ತು ತರಬೇತುದಾರರು ನಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲವೇ?" ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ನಾವು ನಾಲ್ಕು ವಾರಗಳವರೆಗೆ ನಾವು ನಮ್ಮ ಫಿಟ್ನೆಸ್ ಹೀಗೆ ಕಾಯ್ದುಕೊಳ್ಳಬೇಕು? ನಾವು ಉತ್ತಮ ಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಆಡಲು ಬಯಸುತ್ತೇವೆ. ದಯವಿಟ್ಟು ಇದನ್ನು ಪರಿಹರಿಸಿ. " ಎಂದು ಸೈನಾ ಟ್ವೀಟ್ ಮಾಡಿದ್ದರು.
ಥೈಲ್ಯಾಂಡ್ ನಲ್ಲಿ ಭಾರತೀಯ ತಂಡ
BWF ವರ್ಲ್ಡ್ ಟೂರ್ ಫೈನಲ್ನ ಎರಡು ಸೂಪರ್ 1000 ಸ್ಪರ್ಧೆಗಳಲ್ಲಿ ಭಾಗವಹಿಸಲು ಇಡೀ ಭಾರತೀಯ ತಂದ ಥೈಲ್ಯಾಂಡ್ ರಾಜಧಾನಿಯಲ್ಲಿದೆ. ಈ ಕುರಿತು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಸೈನಾ "ನಮ್ಮನ್ನು ವಾರ್ಮ್ ಅಪ್ / ಕೂಲ್ ಡೌನ್ / ಸ್ಟ್ರೆಚಿಂಗ್ ಮಾಡಲು ಸಮಯವನ್ನು ನೀಡಲಾಗುತ್ತಿಲ್ಲ. ನಾವು ವಿಶ್ವದ ಅತ್ಯುತ್ತಮ ಆಟಗಾರರ ನಡುವಿನ ಸ್ಪರ್ಧೆಯ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇವೆ. " ನಾವು ನಮ್ಮ ಫಿಸಿಯೋ ಹಾಗೂ ತರಬೇತುದಾರರನ್ನು ಇಲ್ಲಿಗೆ ಕರೆ ತರಲು ಸಾಕಷ್ಟು ಖರ್ಚು ಮಾಡಿದ್ದೇವೆ. ಅವರು ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದಾಗಿದ್ದರೆ ಅದನ್ನು ಮೊದಲೇ ಏಕೆ ಸ್ಪಷ್ಟಪಡಿಸಲಾಗಿಲ್ಲ?" ಎಂದು ಸೈನಾ ಪ್ರಶ್ನಿಸಿದ್ದಾರೆ.
ಇದನ್ನು ಓದಿ-ರಾಹುಲ್ ದ್ರಾವಿಡ್, ಸೈನಾ ಮತ್ತು ಪ್ರಕಾಶ್ ಪಡುಕೋಣೆಗೆ ಸೇರಿದಂತೆ ಹಲವರಿಗೆ ಕೋಟಿ-ಕೋಟಿ ವಂಚಿಸಿದೆ ಈ ಕಂಪನಿ
The physios and trainers cannot meet us during the entire tour after all of us have tested negative ? @bwfmedia @bwf_ac 4 weeks of this 🤷♀️🤷♀️ how is it possible to maintain ourselves . We want to play the tournament in good condition. Please sort this @bwfmedia .
— Saina Nehwal (@NSaina) January 5, 2021
ಈ ಆಟಗಾರರೂ ಕೂಡ ಟೂರ್ನಿಯಲ್ಲಿ ಶಾಮೀಲಾಗಿದ್ದಾರೆ
ಎಚ್.ಎಸ್.ಪ್ರಣಯ್, ಪಾರುಪಲ್ಲಿ ಕಶ್ಯಪ್, ಸಮೀರ್ ವರ್ಮಾ, ಧ್ರುವ್ ಕಪಿಲಾ, ಮನು ಅತ್ರಿ ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಬ್ಯಾಂಕಾಕ್ ತಲುಪಿದ್ದಾರೆ. ಪಾರುಪಲ್ಲಿ ಕಶ್ಯಪ್ ತಮ್ಮ ಪತ್ನಿ ಸೈನಾ ಅವರೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, "ದೀರ್ಘ ಕಾಯುವಿಕೆಯ ನಂತರ, ನಾವು ಥೈಲ್ಯಾಂಡ್ನ ಕೋರ್ಟ್ (ಆಟದ ಪಟ್ಟಿ ) ಗೆ ಹಿಂದಿರುಗುತ್ತಿದ್ದೇವೆ. ಇದು ನಮ್ಮಲ್ಲಿ ಕುತೂಹಲ ಮೂಡಿಸಿದೆ" ಎಂದು ಬರೆದುಕೊಂಡಿದ್ದರು.
ಇದನ್ನು ಓದಿ-BJP ಸೇರಿದ ಖ್ಯಾತ ಬ್ಯಾಡ್ಮಿಂಟನ್ ತಾರೆ
Thailand open 2021 👍 #bangkok #badminton #tournament 😊 pic.twitter.com/kHDYbhOtZo
— Parupalli Kashyap (@parupallik) January 8, 2021
ಸೈನಾ ಬಳಿ ಮಾರ್ಚ್ ವರೆಗೆ ಕಾಲಾವಕಾಶ ಇದೆ
ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಸೈನಾ ಬಳಿ ಮಾರ್ಚ್ ವರೆಗೆ ಸಮಯಾವಕಾಶ ಇದೆ. ಆದರೆ ತರಬೇತಿಯ ಕೊರತೆಯು ತನ್ನ ಸಾಧನೆಯ ಮೇಲೆ ಪರಿಣಾಮ ಬೀರಬಹುದು ಎಂದು ಸೈನಾ ಆತಂಕಗೊಂಡಿದ್ದಾರೆ. ಮಾಜಿ ವಿಶ್ವ ನಂಬರ್ ಒನ್ ಆಟಗಾರ ಈ ವಿಷಯದ ಬಗ್ಗೆ ಬಿಡಬ್ಲ್ಯೂಎಫ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ, "ಇಡೀ ತಂಡಕ್ಕೆ ಅಭ್ಯಾಸಕ್ಕಾಗಿ ಕೇವಲ ಒಂದು ಗಂಟೆ ಸಿಗುತ್ತಿದೆ. ಒಂದೇ ಸಮಯದಲ್ಲಿಎಲ್ಲರೂ ಜಿಮ್ ಮಾಡಬೇಕು. ಒಲಿಂಪಿಕ್ ಅರ್ಹತೆಗಾಗಿ ನಮ್ಮ ಬಳಿ ಕೇವಲ ಮಾರ್ಚ್ ವರೆಗೆ ಸಮಯಾವಕಾಶ ಇದೆ, ಹೀಗಾಗಿ ಫಿಟ್ನೆಸ್ ವಿಷಯದಲ್ಲಿ ಇದು ಸರಿಯಲ್ಲ " ಎಂದು ಸೈನಾ ಹೇಳಿದ್ದಾರೆ.
The physios and trainers cannot meet us during the entire tour after all of us have tested negative ? @bwfmedia @bwf_ac 4 weeks of this 🤷♀️🤷♀️ how is it possible to maintain ourselves . We want to play the tournament in good condition. Please sort this @bwfmedia .
— Saina Nehwal (@NSaina) January 5, 2021
ಇದನ್ನು ಓದಿ-ಹೈದ್ರಾಬಾದ್ ಪೋಲೀಸರ ಕಾರ್ಯಾಚರಣೆಗೆ ಸೈನಾ ನೆಹ್ವಾಲ್ ಸೆಲ್ಯೂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.