ಪ್ರಪಂಚದಾದ್ಯಂತ ಜನರು ಆನ್ಲೈನ್ ಮೂಲಕ ಬಹುತೇಕ ಕೆಲಸಗಳನ್ನು ಮಾಡುತ್ತಿದ್ದಾರೆ, ಅದು ಶಿಕ್ಷಣವಾಗಿರಲಿ ಅಥವಾ ಇನ್ನಿತರ ಸಾಫ್ಟವೇರ್ ಕೆಲಸವಾಗಿರಲಿ ಇಂಟರ್ನೆಟ್ ಎನ್ನುವುದು ಈಗ ಜೀವನದ ಅವಿಭಾಜ್ಯ ಅಂಗವಾಗಿದೆ.
Online Classes - ಆನ್ಲೈನ್ ಶಿಕ್ಷಣದ (Online Education) ಕಾರಣ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರಲ್ಲಿ ಸಮೀಪ ದೃಷ್ಟಿದೋಷಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಹರಿಯಾಣ ಸರ್ಕಾರ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಟ್ಯಾಬ್ಲೆಟ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳು ಹರಿಯಾಣ ಸರ್ಕಾರ ಒದಗಿಸುವ ಉಚಿತ ಟ್ಯಾಬ್ಲೆಟ್ ಮೂಲಕ ತಮ್ಮ ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
NCERT ವರದಿಯ ಪ್ರಕಾರ "ಸುಮಾರು ಶೇ.27 ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೊವಿಡ್-19 ಕಾಲದಲ್ಲಿ ಆನ್ಲೈನ್ ಶಿಕ್ಷಣ ನೀಡಲು ಹಾಗೂ ಶಿಕ್ಷಣ ಪಡೆಯಲು ತಮ್ಮ ಮೊಬೈಲ್ ಫೋನ್ ಬಳಸುತ್ತಿದ್ದಾರೆ" ಎನ್ನಲಾಗಿದೆ.
ಮನೆಯಿಂದಲೇ ಮಾಡುವಂತರ ವೃತ್ತಿ ಅಥವಾ ವ್ಯವಹಾರಗಳು ಇದೀಗ ಬೆಳೆಯುತ್ತಿವೆ ಎಂಬುದರ ಕುರಿತು ನೀವು ಸಂಶೋಧನೆ ಮಾಡಬಹುದು. ನಿಮಗಾಗಿ ಇಲ್ಲಿ ಹೆಚ್ಚಿನ ಅವಕಾಶಗಳಿವೆಯೇ? ಎಂಬುದನ್ನು ಪರಿಶೀಲಿಸಿ ಆಗ ಮಾತ್ರ ನಿಮಗೆ ಪ್ರತಿಕೂಲತೆಯಿಂದ ಅವಕಾಶ ಸಿಗುತ್ತದೆ. ಅಂದರೆ ವಿಪತ್ತಿನಲ್ಲೂ ನೀವು ಅವಕಾಶಗಳನ್ನು ನೋಡುತ್ತೀರಿ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಜಿಟಲ್ ಶಿಕ್ಷಣಕ್ಕಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ನೂತನ ಮಾರ್ಗಸೂಚಿಗಳ ಪ್ರಕಾರ ಆನ್ಲೈನ್ ತರಗತಿಗಳ ಸಮಯವನ್ನು ಸಹ ಸೀಮಿತಗೊಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.