ನವದೆಹಲಿ: Online Ecucation - ಕೊರೊನಾ ಮಹಾಮಾರಿಯ (Corona Pandemic) ಕಾರಣ ಇಡೀ ವಿಶ್ವಾದ್ಯಂತ ಕೋಲಾಹಲ ಸೃಷ್ಟಿಯಾಗಿದೆ. ಪ್ರತಿ ನಿತ್ಯ ಕೊವಿಡ್-19 (Covid-19) ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇನ್ನೊಂದೆಡೆ ಕೊರೊನಾ (Coronavirus) ಕಾರಣ ಹಲವು ಬದಲಾವಣೆಗಳು ಕಂಡುಬರುತ್ತಿವೆ. ಈ ಬದಲಾವಣೆಗಳ ಅಡಿ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ದೊಡ್ಡ ಬದಲಾವಣೆಯನ್ನು ಗಮನಿಸಲಾಗುತ್ತಿದೆ. ವಾಸ್ತವದಲ್ಲಿ ಕೊವಿಡ್-19 ಮಹಾಮಾರಿಯ ಬಳಿಕ ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಇದರಿಂದ ಮುಂಬರುವ ದಿನಗಳಲ್ಲಿ ಅಪಾರ ಪ್ರಮಾಣದ ಹಾನಿ ಕಾಣಲು ಸಿಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಆನ್‌ಲೈನ್ ಶಿಕ್ಷಣ (Online Education)ವ್ಯವಸ್ಥೆಯಡಿಯಲ್ಲಿ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್ (Smartphone) ಅಥವಾ ಲ್ಯಾಪ್‌ಟಾಪ್-ಕಂಪ್ಯೂಟರ್ (Laptop-Computer) ಮುಂದೆ ಕಳೆಯಬೇಕಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಮೀಪದೃಷ್ಟಿ ದೋಷಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ಮಕ್ಕಳ ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್‌ಗಳು ಸುಲಭವಾಗಿ ಲಭ್ಯವಿರುವ ಕಾರಣ ಅವುಗಳನ್ನು ಆನ್‌ಲೈನ್ ತರಗತಿಗಳಿಗೆ (Online Classes) ಹೆಚ್ಚು ಬಳಸಲಾಗುತ್ತದೆ.
ಇದನ್ನೂ ಓದಿ- Crying Benefits: ಅಳುವುದರಿಂದ ಸಿಗುವ ಪ್ರಯೋಜನ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು
ಸ್ಮಾರ್ಟ್ ಫೋನ್ ಗಳಿಂದ ಹೆಚ್ಚು ಹಾನಿ
ಸ್ಮಾರ್ಟ್‌ಫೋನ್‌ನಿಂದಾಗಿ, ದೃಷ್ಟಿ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಮತ್ತು ಇದರಿಂದ ದೃಷ್ಟಿ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆನ್‌ಲೈನ್ ತರಗತಿಗಳಿಗೆ (Online Classes) ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಉಚಿತವಲ್ಲ. ಆದರೆ, ದುಬಾರಿ ಗ್ಯಾಜೆಟ್‌ಗಳನ್ನು ಖರೀದಿಸುವುದು ಸಹ ಎಲ್ಲರ ವಿಷಯವಲ್ಲ. ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಸಾಕಷ್ಟು ಹಾನಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ದೊಡ್ಡ ಪರದೆ (Big Screen) ಅಂದರೆ ಲ್ಯಾಪ್‌ಟಾಪ್ (Laptop) ಅಥವಾ ಕಂಪ್ಯೂಟರ್ (Computer) ಬಳಕೆ ಆನ್‌ಲೈನ್ ಅಧ್ಯಯನಕ್ಕೆ ಹೆಚ್ಚು ಸೂಕ್ತವೆಂದು ವೈದ್ಯರು ನಂಬುತ್ತಾರೆ. ಸಾಧ್ಯವಾದರೆ, ಟಿವಿಯನ್ನು (Television) ಈ ಕೆಲಸಕ್ಕಾಗಿ ಅಥವಾ ಅಧ್ಯಯನಕ್ಕಾಗಿ ಸಹ ಬಳಸಬಹುದು. ವೈದ್ಯರ ಪ್ರಕಾರ, ಪರದೆಯನ್ನು ಕಣ್ಣುಗಳಿಗೆ ಹತ್ತಿರಲ್ಲಿ ಇಡುವುದು, ಕೋಣೆಯಲ್ಲಿ ಕಡಿಮೆ ಬೆಳಕು, ಸಣ್ಣ ಫಾಂಟ್, ಸಣ್ಣ ಪರದೆ, ತಪ್ಪಾಗಿ ಕುಳಿತುಕೊಳ್ಳುವ ಭಂಗಿ ಮುಂತಾದ ಕಾರಣಗಳಿಂದ ಸಮೀಪ ದೃಷ್ಟಿದೋಷ ಉಂಟಾಗುತ್ತದೆ.
ಇದನ್ನೂ ಓದಿ-Benefits of soaked gram : ಈ ಐದು ಕಾರಣಕ್ಕಾಗಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಕಾಳು ತಿನ್ನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ