ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಆನ್ಲೈನ್ ತರಗತಿಗಳ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಜಿಟಲ್ ಶಿಕ್ಷಣಕಾಗಿ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜೊತೆಗೆ ಆನ್ಲೈನ್ ತರಗತಿಗಳ ಸಮಯವನ್ನು ಕೂಡ ಸೀಮಿತಗೊಳಿಸಿದೆ
ಮಾನವ ಸಂಪನ್ಮೂಲ ಸಚಿವಾಲಯದ ಪ್ರಕಾರ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯ ಸಮಯ 30 ನಿಮಿಷಗಳನ್ನು ಮೀರಬಾರದು. 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಶೈಕ್ಷಣಿಕ ಕ್ಯಾಲೆಂಡರ್ ಅಳವಡಿಸಿಕೊಳ್ಳಲು ಮಾರ್ಗಸೂಚಿ ಸೂಚಿಸಿದೆ.
1 ರಿಂದ 12ನೇ ತರಗತಿಗಳ ಸಮಯಾವಕಾಶ
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು 30 ನಿಮಿಷ ಮೀರಬಾರದು. ಇದನ್ನು ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಒಂದರಿಂದ ಎಂಟನೇ ತರಗತಿಗಳಿಗೆ ತಲಾ 45 ನಿಮಿಷಗಳ ಎರಡು ಆನ್‌ಲೈನ್ ಸೆಷನ್‌ಗಳು ಮಾತ್ರ ಇರಬೇಕು ಹಾಗೂ 9 ರಿಂದ 12 ನೇ ತರಗತಿಗಳಿಗೆ ನಾಲ್ಕು ಆನ್ಲೈನ್ ಸೆಷನ್‌ಗಳು ನಡೆಯಲಿವೆ.