ಮೈಸೂರು ರಸ್ತೆಯ ನೈಸ್ ರೋಡ್ ಬಳಿ ಕಾಂಗ್ರೆಸ್ ಹಾಕಿದಂತ ಬಂಟಿಂಗ್ ಮತ್ತು ಬ್ಯಾನರ್ ಗಳನ್ನ ಬಿಬಿಎಂಪಿ ಸಿಬ್ಬಂದಿ ತೆರವುಗೊಳಸುತ್ತಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮೇಕೆದಾಟು ಪಾದಯಾತ್ರೆ(Mekedatu Padayatra) 2.0’ಗಾಗಿ ಮಂಡ್ಯದಿಂದ ಬೆಂಗಳೂರಿಗೆ ಹೊರಡಲು ಬದಲಿ ಮಾರ್ಗ ಮಾಡಿದ್ದು, ಮಂಡ್ಯದ ಮದ್ದೂರು ಬಳಿ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸದ್ಯದಲ್ಲೇ ಕೈಬಿಡುವ ಲೆಕ್ಕಾಚಾರವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಿಂತನೆ ನಡೆಸುತ್ತಿದ್ದಾರೆ.
ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ಅವರ ವಿಪಲಕ್ಕೆ ಅವರು ಏನ್ ಬೇಕಾದ್ರೂ ಮಾತನಾಡಬಹುದು. ಅವರು ಪಾದಯಾತ್ರೆ ಮಾಡಿದ್ದೆ ತಪ್ಪು. ಅವರು ಮಾಡಿದ ನಿರ್ಧಾರವೇ ತಪ್ಪು. ರಾಜಕೀಯದ ಲಾಭ ಪಡೆಯಲು ಪಾದಯಾತ್ರೆ ಮಾಡಲು ಹೊರಟ್ರು, ಅವರಿಗೆ ರಾಜಕೀಯ ಲಾಭಕ್ಕಿಂತ ನಷ್ಟ ಆಯ್ತು. ಬೇರೆ ಏನೂ ಆಗಲಿಲ್ಲ ಎಂದರು.
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ‘ಕೈ’ ನಾಯಕರು ಹಮ್ಮಿಕೊಂಡಿರುವ ಪಾದಯಾತ್ರೆ ವಿಚಾರವಾಗಿ ಹೈಕೋರ್ಟ್ ವಿಭಾಗೀಯ ಪೀಠ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.