ಬೆಂಗಳೂರು: ನ್ಯಾಯಾಲಯ ಮೇಕೆದಾಟು ಪಾದಯಾತ್ರೆ(Mekedatu Project Dispute) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ಪ್ರತಿಭಟನೆ ನಮ್ಮ ಹಕ್ಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಠ ಮುಂದುವರಿಸುತ್ತಿದ್ದಾರೆ. ನ್ಯಾಯಾಲಯದ ಮೇಲೂ ಕಾಂಗ್ರೆಸ್ಸಿಗರಿಗೆ ಗೌರವ ಇಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ. ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
#SuperSpreaderCONgress ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ನಾಯಕರು ತಮ್ಮ ನೀಚ ರಾಜಕಾರಣಕ್ಕಾಗಿ ಸಂವಿಧಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದೆ. ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ(Congress Padayatra) ಬೇಡ ಎಂಬ ಸರ್ಕಾರದ ಮನವಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ. ನಿಮ್ಮ ವೈಯಕ್ತಿಕ ಹಠ ಸಾಧನೆಗಾಗಿ ಜನರನ್ನೇಕೆ ಸಂಕಷ್ಟಕ್ಕೆ ದೂಡುತ್ತಿದ್ದೀರಿ? ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಈಗಲಾದರೂ #ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ ಅಥವಾ #SuperSpreaderCONgress ಎನಿಸಿಕೊಳ್ಳುತ್ತೀರಾ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ನ್ಯಾಯಾಲಯ ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ಪ್ರತಿಭಟನೆ ನಮ್ಮ ಹಕ್ಕು ಎಂದು @siddaramaiah ಹಠ ಮುಂದುವರಿಸುತ್ತಿದ್ದಾರೆ.
ನ್ಯಾಯಾಲಯದ ಮೇಲೂ ಕಾಂಗ್ರೆಸ್ಸಿಗರಿಗೆ ಗೌರವ ಇಲ್ಲವೇ?
ಕಾಂಗ್ರೆಸ್ ನಾಯಕರು ತಮ್ಮ ನೀಚ ರಾಜಕಾರಣಕ್ಕಾಗಿ ಸಂವಿಧಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.#SuperSpreaderCONgress
— BJP Karnataka (@BJP4Karnataka) January 12, 2022
ಮಾನ್ಯ @DKShivakumar ಅವರೇ, ನೀವು ಮೇಕೆದಾಟು ಹೋರಾಟ ನಡೆಸಿ. ಆದರೆ ಅದಕ್ಕೆ ಸಮಯ ಸಂದರ್ಭದ ಅರಿವು ಬೇಡವೇ?#ಕೋವಿಡ್‌ಯಾತ್ರೆ ಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ.
ಎಚ್ಚೆತ್ತುಕೊಳ್ಳಿ, ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣದಾಟಿಸಬೇಡಿ.#SuperSpreaderCONgress
— BJP Karnataka (@BJP4Karnataka) January 12, 2022
ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬಂದ 10 ಜನರಿಗೆ ಕೊರೊನಾ ಸೋಂಕು..!
‘ಮೇಕೆದಾಟು ಪಾದಯಾತ್ರೆ(Mekedatu Padayatra)ಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯವಿತ್ತೇ ಎಂದು ಕೆಪಿಸಿಸಿಯನ್ನು ಪ್ರಶ್ನಿಸಿದೆ. ಕಾಂಗ್ರೆಸ್ಸಿಗರೇ ಜನರ ಭಾವನೆಯನ್ನು ಧಿಕ್ಕರಿಸಿದಿರಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದಿರಿ, ನ್ಯಾಯಾಲಯಕ್ಕಾದರೂ ತಲೆಬಾಗುವಿರಾ?’ ಅಂತಾ ಪ್ರಶ್ನಿಸಿದೆ.
ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬ ಸರ್ಕಾರದ ಮನವಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ.
ನಿಮ್ಮ ವೈಯಕ್ತಿಕ ಹಠ ಸಾಧನೆಗಾಗಿ ಜನರನ್ನೇಕೆ ಸಂಕಷ್ಟಕ್ಕೆ ದೂಡುತ್ತಿದ್ದೀರಿ?
ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಈಗಲಾದರೂ #ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ ಅಥವಾ #SuperSpreaderCONgress ಎನಿಸಿಕೊಳ್ಳುತ್ತೀರಾ?
— BJP Karnataka (@BJP4Karnataka) January 12, 2022
‘ಕಾಂಗ್ರೆಸ್ ಹಮ್ಮಿಕೊಂಡಿರುವ #ಕೋವಿಡ್‌ಯಾತ್ರೆಯಲ್ಲಿ ಎಚ್.ಎಂ.ರೇವಣ್ಣ, ಸಿ.ಎಂ.ಇಬ್ರಾಹಿಂ, ಎನ್.ಎಚ್.ಶಿವಶಂಕರ ರೆಡ್ಡಿ ಕೋವಿಡ್ ಸೋಂಕಿತರಾಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರೂ ಯಾತ್ರೆ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ, ಆದರೂ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಸಿದ್ದರಾಮಯ್ಯ ಕಿಮ್ಮತ್ತು ನೀಡುತ್ತಿಲ್ಲ. ಡಿಕೆಶಿಯವರೇ ನೀವು ಮೇಕೆದಾಟು ಹೋರಾಟ ನಡೆಸಿ. ಆದರೆ ಅದಕ್ಕೆ ಸಮಯ ಸಂದರ್ಭದ ಅರಿವು ಬೇಡವೇ? #ಕೋವಿಡ್‌ಯಾತ್ರೆ ಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ. ಎಚ್ಚೆತ್ತುಕೊಳ್ಳಿ, ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣದಾಟಿಸಬೇಡಿ’ ಅಂತಾ ಬಿಜೆಪಿ ಮತ್ತೊಂದು ಟ್ವೀಟ್ ನಲ್ಲಿ ಟೀಕಿಸಿದೆ.
ಕಾಂಗ್ರೆಸ್ ಹಮ್ಮಿಕೊಂಡಿರುವ #ಕೋವಿಡ್‌ಯಾತ್ರೆ ಮತ್ತು ಕೋವಿಡ್ ಸೋಂಕಿತರು
√ ಎಚ್.ಎಂ. ರೇವಣ್ಣ
√ ಸಿ.ಎಂ. ಇಬ್ರಾಹಿಂ
√ ಎನ್.ಎಚ್. ಶಿವಶಂಕರ ರೆಡ್ಡಿಕಾಂಗ್ರೆಸ್ ಹಿರಿಯ ನಾಯಕರೂ ಯಾತ್ರೆ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ, ಆದರೂ @DKShivakumar ಮತ್ತು @siddaramaiah ಕಿಮ್ಮತ್ತು ನೀಡುತ್ತಿಲ್ಲ.#SuperSpreaderCONgress
— BJP Karnataka (@BJP4Karnataka) January 12, 2022
ಇದನ್ನೂ ಓದಿ: Instagram Fraud: ಮಾಡೆಲಿಂಗ್ ಹೆಸರಲ್ಲಿ ಯುವತಿಯರ ಫೋಟೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವ ಅಂದರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.