Araga Jnanendra : 'ಕಾಂಗ್ರೆಸ್ ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ'

ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ಅವರ ವಿಪಲಕ್ಕೆ ಅವರು ಏನ್ ಬೇಕಾದ್ರೂ ಮಾತನಾಡಬಹುದು. ಅವರು ಪಾದಯಾತ್ರೆ ಮಾಡಿದ್ದೆ ತಪ್ಪು. ಅವರು ಮಾಡಿದ ನಿರ್ಧಾರವೇ ತಪ್ಪು. ರಾಜಕೀಯದ ಲಾಭ ಪಡೆಯಲು ಪಾದಯಾತ್ರೆ ಮಾಡಲು ಹೊರಟ್ರು, ಅವರಿಗೆ ರಾಜಕೀಯ ಲಾಭಕ್ಕಿಂತ ನಷ್ಟ ಆಯ್ತು. ಬೇರೆ ಏನೂ ಆಗಲಿಲ್ಲ ಎಂದರು.

Written by - Channabasava A Kashinakunti | Last Updated : Jan 14, 2022, 10:49 AM IST
  • ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ
  • ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ.
  • ನಾವು ಈ ಯೋಜನೆಯನ್ನ ಜಾರಿಗೆ ತರುತ್ತೇವೆ
Araga Jnanendra : 'ಕಾಂಗ್ರೆಸ್ ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ' title=

ಬೆಂಗಳೂರು : ರಾಜ್ಯದಲ್ಲಿ ಕೊವಿಡ್ ಜಾಸ್ತಿಯಾಗಿದೆ, ಕೊವಿಡ್ ನಿಯಂತ್ರಣಕ್ಕೆ ಜನರು ಸಹಕರಿಸಬೇಕು. ಮಾಸ್ಕ್ ಇಲ್ಲ ಓಡಾಡಬಾರದು, ಅಂತರ ಕಾಡಿಕೊಳ್ಳಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು(Araga Jnanendra), ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರ ಇಲ್ಲ. ಅವರ ವಿಪಲಕ್ಕೆ ಅವರು ಏನ್ ಬೇಕಾದ್ರೂ ಮಾತನಾಡಬಹುದು. ಅವರು ಪಾದಯಾತ್ರೆ ಮಾಡಿದ್ದೆ ತಪ್ಪು. ಅವರು ಮಾಡಿದ ನಿರ್ಧಾರವೇ ತಪ್ಪು. ರಾಜಕೀಯದ ಲಾಭ ಪಡೆಯಲು ಪಾದಯಾತ್ರೆ ಮಾಡಲು ಹೊರಟ್ರು, ಅವರಿಗೆ ರಾಜಕೀಯ ಲಾಭಕ್ಕಿಂತ ನಷ್ಟ ಆಯ್ತು. ಬೇರೆ ಏನೂ ಆಗಲಿಲ್ಲ ಎಂದರು.

ಇದನ್ನೂ ಓದಿ : ಈ ಮೇಕೆದಾಟು ಯಾತ್ರೆಯನ್ನು ನಾವು ನಿಲ್ಲಿಸುತ್ತಿಲ್ಲ, ಕೇವಲ ಮುಂದೂಡುತ್ತಿದ್ದೇವೆ- ಡಿ.ಕೆ.ಶಿವಕುಮಾರ್

ಮೇಕೆದಾಟು ಯೋಜನೆಗೆ(Mekedatu Project) ನಾಡಿನಲ್ಲಿ ಯಾರದ್ದು ವಿರೋಧ ಇದೆ ಹೇಳಿ? ಯಾವ ಪಕ್ಷದ ವಿರೋಧ ಇದೆ?ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಾರೆ? ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲು ಆಗದೆ. ಈಗ ಕಾಲ್ ನಡಿಗೆ ಜಾತಾ ಮಾಡಿ ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನಕ್ಕೆ ಮೇಕೆದಾಟು ಯೋಜನೆಯ ಲಾಭ ಕೊಡಿಸಬೇಕು. ಅದು ಬಿಟ್ಟು ಅದರ ಹೆಸರಿನಲ್ಲಿ ತಮ್ಮ ಲಾಭ ಮಾಡಿಕೊಳ್ಳಲು ಹೊರಟ್ರೆ? ಖಂಡಿತ ಇದು ನಾಚಿಕೆಗೇಡು ಎಂದರು.

ಹಿಂದಿನ ಸಾರಿ ಇವರು ಪಾದಯಾತ್ರೆ ಮಾಡಿದ್ರು. ಕೃಷ್ಣೆ(Krishna River) ಕಡೆಗೆ ಇದೇ ದಿನ 14 ನೇ ತಾರೀಕು ಸಾಂಕ್ರಾಂತಿ ದಿನ ಕೊಡಲ ಸಂಗಮಕ್ಕೆ ಹೋಗಿ, ಅಲ್ಲಿನ ನೀರನ್ನು ಹಿಡಿದು ಶತಪಥ ಮಾಡಿದ್ರು ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೀನಿ ಎಂದು. ಏನ್ ಆಯ್ತು, ಇಡೀ 5 ವರ್ಷ 7500 ಸಾವಿರ ಕೋಟಿ ಖರ್ಚು ಮಾಡಿದ್ರು. ವರ್ಷ ಕ್ಕೆ ಹತ್ತು ಸಾವಿರ ಕೋಟಿ ಕೊಡಲಿಲ್ಲ. ಹಾಗೇ ನೀರಾವರಿ ಯೋಜನೆ ಬಗ್ಗೆ ಬದ್ಧತೆ ಕಾಂಗ್ರೆಸ್ ಗೆ ಇಲ್ಲ. ನಿನ್ನೆ ಸಿಎಂ ಹೇಳಿದ್ದಾರೆ ನಾವು ಮಾಡುತ್ತೇವೆ ಎಂದು. ಈ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಜ.17 ರಂದು ಕೌನ್ಸೆಲಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News