Canada Travel: ಕೆನಡಾಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಅಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಅಲರ್ಟ್ ಜಾರಿಗೊಳಿಸಿದೆ. ವಿಶೇಷ ಅಡ್ವೈಸರಿ ಜಾರಿಗೊಳಿಸಿರುವ ವಿದೇಶಾಂಗ ಸಚಿವಾಲಯ ಜನರು ಎಚ್ಚರದಿಂದ ಇರಲು ಸೂಚಿಸಿದೆ.
ಪಾಕಿಸ್ತಾನ ಸರಕಾರ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸೋಮವಾರ ಎರಡು ಅಧಿಕೃತ ಹೇಳಿಕೆಗಳನ್ನು ನೀಡಿದೆ.
2022 ರ ಹೊಸ ವರ್ಷದ ಮೊದಲ ದಿನದಂದು ಲಸಿಕೆಗಳನ್ನು ಸರಬರಾಜು ಮಾಡಿದ ನಂತರ ಮುಂಬರುವ ವಾರಗಳಲ್ಲಿ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.
ಡಿಜಿಟಲ್ ಇಂಡಿಯಾದಲ್ಲಿ ಪಾಸ್ಪೋರ್ಟ್ ಪಡೆಯುವುದು ಈಗ ಸುಲಭವಾಗಿದೆ. ವಿದೇಶಾಂಗ ಸಚಿವಾಲಯವು ಡಿಜಿಲಾಕರ್ ಪ್ಲಾಟ್ಫಾರ್ಮ್ (DigiLocker Platform) ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯೊಂದಿಗೆ, ಅರ್ಜಿದಾರರು ಇನ್ನು ಮುಂದೆ ಮೂಲ ದಾಖಲೆಗಳನ್ನು ಪಾಸ್ಪೋರ್ಟ್ ಕಚೇರಿಗೆ ಹೊತ್ತೊಯ್ಯುವ ಅಗತ್ಯವಿರುವುದಿಲ್ಲ.
ಕೃಷಿ ಕಾನೂನುಗಳ (Agriculture Laws) ವಿರುದ್ಧ ರೈತರ ಪ್ರತಿಭಟನೆಗೆ (Farmers Protest) ಪ್ರತಿಕ್ರಿಯಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಕಾನೂನುಗಳನ್ನು ಬೆಂಬಲಿಸಿದೆ. ರೈತ ಚಳವಳಿಯ ಬಗ್ಗೆ ಅಮೆರಿಕ ನೀಡಿದ ಹೇಳಿಕೆಯ ನಂತರ ಭಾರತ ಪ್ರತಿಕ್ರಿಯಿಸಿದೆ.
ಅಕ್ರಮ ಮತ್ತು ಬಲವಂತದಿಂದ ಭಾರತಕ್ಕೆ ಸೇರಿದ ಭೂಮಿಯ ಒಂದು ಭಾಗಕ್ಕೆ ಬದಲಾವಣೆ ತರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ತಿರಸ್ಕರಿಸುತ್ತದೆ. ಪಾಕಿಸ್ತಾನ ಕೂಡಲೇ ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶವನ್ನು ತೆರವು ಮಾಡಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟ್ರೆಸ್ ಅವರ ಹೇಳಿಕೆಗೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಕಾಶ್ಮೀರದ ಬಗ್ಗೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜನ್ಮಸ್ಥಳವಾದ ಗುರುದ್ವಾರ ನಂಕಣ ಸಾಹಿಬ್ ಶುಕ್ರವಾರ ಜನಸಮೂಹದ ಮೇಲೆ ಹಿಂಸಾತ್ಮಕ ಹಲ್ಲೆ ನಡೆದಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯ ಸಿಖ್ ಭಕ್ತರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಲಾಯಿತು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅದು ಆಂತರಿಕ ವಿಷಯಕ್ಕೆ ಸಂಬಂಧಿಸಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಶನಿವಾರದಂದು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಕಾಶ್ಮೀರದ ವಿಚಾರವಾಗಿ ಭಾರತವನ್ನು ಟೀಕಿಸಿ ನಿರ್ಣಯ ಕೈಕೊಂಡ 57 ದೇಶಗಳ ಸಂಸ್ಥೆಗೆ ಭಾರತ ಪ್ರತ್ಯುತ್ತರ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.