ಭಾರತ ತನ್ನ ಡಿಜಿಟಲೀಕರಣದ ಬಳಕೆಯ ಮೂಲಕ ಆರ್ಥಿಕ ಸೇರ್ಪಡೆ ಮತ್ತು ಬಡತನ ಕಡಿತವನ್ನು ಸಾಧಿಸಲು ಸಹಾಯ ಮಾಡಲು ಸಾಧ್ಯವಾಗಿದೆ ಎಂದು UN ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ .
Cybercrime: ಬುಧವಾರ ಆರೋಪಿಯ ಸ್ಥಳವನ್ನು ಗಾಜಿಯಾಬಾದ್ನ ಲೋನಿಯಲ್ಲಿ ಪತ್ತೆ ಮಾಡಲಾಯಿತು. ನಂತರ ಗುಪ್ತಾನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Digital Payment : ಡಿಜಿಟಲ್ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಜೂನ್ 10) ಬಿಡುಗಡೆಗೊಳಿಸಿದ ದತ್ತಾಂಶ ತಿಳಿಸಿದೆ.
ಪಡಿತರ ಚೀಟಿದಾರರಿಗೆ ಮೊದಲ ಬಾರಿಗೆ ಸರ್ಕಾರವು ಅನೇಕ ದೊಡ್ಡ ಸೌಲಭ್ಯಗಳನ್ನು ನೀಡುತ್ತಿದೆ. ಈಗ ಪಡಿತರ ಚೀಟಿ ಸಂಬಂಧಿತ ಸೇವೆಗಳು ದೇಶಾದ್ಯಂತ 3.7 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.
ಈಗ ನೀವು ಅಂತಹ ಎಲ್ಲಾ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಭಾಗೇ ಹರಿಸಿಕೊಳ್ಳಬಹುದು. ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗಿದೆ.
IRCTC New feature - ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಎರಡರಲ್ಲೂ ಖರೀದಿಸಿದ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ ನಿಮಗೆ ಈ ಸೌಲಭ್ಯ ಸಿಗುತ್ತದೆ. IRCTC-ipay ಗೇಟ್ವೇ ಮೂಲಕ ಟಿಕೆಟ್ ಖರೀದಿಸಿದ ನಂತರ ಅದನ್ನು ರದ್ದುಗೊಳಿಸಿದ ಪ್ರಯಾಣಿಕರು, ಇನ್ಮುಂದೆ ಮರುಪಾವತಿಗಾಗಿ 48 ರಿಂದ 72 ಗಂಟೆಗಳ ಕಾಲ ಕಾಯಬೇಕಾಗಿಲ್ಲ.
Digital India Challange - ಕೇಂದ್ರ ಸರ್ಕಾರ(Central Government) ಡಿಜಿಟಲ್ ಇಂಡಿಯಾ (Digital India) ಅಡಿ ಹೊಸ ಚಾಲೆಂಜ್ ಆರಂಭಿಸಿದ್ದು, ಈ ಚಾಲೆಂಜ್ ಜನರಿಗೆ 5 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ಮೊದಲು ಜನರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅದರ ನಂತರ ವಿಜೇತರಿಗೆ ಬಹುಮಾನದ ಮೊತ್ತವನ್ನು ನೀಡಲಾಗುವುದು.
ಸ್ಮಾರ್ಟ್ ಫೋನ್ ಬಳಕೆದಾರರಿಗೆ mAadhaar ತುಂಬಾ ಉಪಯುಕ್ತವಾಗಿದೆ. ನೀವು ಇನ್ನೂ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡದಿದ್ದರೆ ತಡಮಾಡದೆಯೇ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ಏಕೆಂದರೆ ಈ ಒಂದು ಅಪ್ಲಿಕೇಶನ್ ನಿಮ್ಮ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
National Payments Corporation Of India(NPCI)-SBI Payments - SBI Payments ಒಡಂಬಡಿಕೆಗೆ ಸಹಿ ಹಾಕುವ ಮೂಲಕ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI), 'RuPay SoftPoS' ಸೇವೆ ಬಿಡುಗಡೆಗೊಳಿಸಿದೆ.
How To Apply For Passport Through DigiLocker - ಪಾಸ್ಪೋರ್ಟ್ ಪಡೆಯಲು ನೀವೂ ಕೂಡ ಸರದಿಯಲ್ಲಿ ನಿಂತು ಸುಸ್ತಾಗಿದ್ದರೆ, ಖಂಡಿತವಾಗಿಯೂ ಈ ಸುದ್ದಿಯನ್ನು ಓದಬೇಕು. 'ಮೇಡ್ ಇನ್ ಇಂಡಿಯಾ' ಆಪ್ (Digital India) ಡಿಜಿಲಾಕರ್ (DigiLocker), ಪಾಸ್ಪೋರ್ಟ್ ಪಡೆಯಲು ಮೂಲ ಡಾಕ್ಯುಮೆಂಟ್ ನೀಡುವ ಕಷ್ಟಕ್ಕೆ ಪರಿಹಾರ ಒದಗಿಸಿದೆ.
ಡಿಜಿಟಲ್ ಇಂಡಿಯಾದಲ್ಲಿ ಪಾಸ್ಪೋರ್ಟ್ ಪಡೆಯುವುದು ಈಗ ಸುಲಭವಾಗಿದೆ. ವಿದೇಶಾಂಗ ಸಚಿವಾಲಯವು ಡಿಜಿಲಾಕರ್ ಪ್ಲಾಟ್ಫಾರ್ಮ್ (DigiLocker Platform) ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯೊಂದಿಗೆ, ಅರ್ಜಿದಾರರು ಇನ್ನು ಮುಂದೆ ಮೂಲ ದಾಖಲೆಗಳನ್ನು ಪಾಸ್ಪೋರ್ಟ್ ಕಚೇರಿಗೆ ಹೊತ್ತೊಯ್ಯುವ ಅಗತ್ಯವಿರುವುದಿಲ್ಲ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದಡಿಯಲ್ಲಿ ದೇಶದಲ್ಲಿ ಈವರೆಗೆ 420 ಇ-ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ರಾಜ್ಯಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 2015 ರ ಸೆಪ್ಟೆಂಬರ್ನಿಂದ ಈ ಸೌಲಭ್ಯದ ಮೂಲಕ 18.37 ಕೋಟಿ ವಹಿವಾಟು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಟಲ್ ಇನ್ನೋವೇಶನ್ ಮಿಷನ್ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು MyGov ನೀತಿ ಆಯೋಗ್ ಭಾರತೀಯ ಟೆಕ್ ಉದ್ಯಮಿಗಳು ಮತ್ತು ಸ್ಟಾರ್ಟ್ಅಪ್ಗಳಿಗಾಗಿ ಡಿಜಿಟಲ್ ಇಂಡಿಯಾ ಆತ್ಮ ನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಘೋಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.