ಗಿಲ್ಗಿಟ್ ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತ್ಯ ಸ್ಥಾನ – ಪಾಕ್ ನಿರ್ಧಾರ ತಿರಸ್ಕರಿಸಿದ ಭಾರತ

ಅಕ್ರಮ ಮತ್ತು ಬಲವಂತದಿಂದ  ಭಾರತಕ್ಕೆ ಸೇರಿದ ಭೂಮಿಯ ಒಂದು ಭಾಗಕ್ಕೆ ಬದಲಾವಣೆ ತರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ  ತಿರಸ್ಕರಿಸುತ್ತದೆ.  ಪಾಕಿಸ್ತಾನ ಕೂಡಲೇ ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶವನ್ನು ತೆರವು ಮಾಡಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. 

Last Updated : Nov 2, 2020, 10:52 AM IST
  • ಗಿಲ್ಗಿಟ್ – ಬಾಲ್ಟಿಸ್ತಾನ ಪ್ರದೇಶಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ ನೀಡಿರುವ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
  • ಗಿಲ್ಗಿಟ್ ಬಾಲ್ಟಿಸ್ತಾನಕ್ಕೆ ಬದಲಾವಣೆ ತರುವ ಪಾಕ್ತಿಸ್ತಾನದ ನಿರ್ಧಾರವನ್ನು ಭಾರತ ತಿರಸ್ಕರಿಸುತ್ತದೆ – ವಿದೇಶಾಂಗ ಇಲಾಖೆ
  • ಗಿಲ್ಗಿಟ್ ಬಾಲ್ಟಿಸ್ತಾನದಿಂದ ಪಾಕ್ ಮೊದಲು ಕಾಲ್ತೆಗೆಯಬೇಕು – ಭಾರತ
  • ಗಿಲ್ಗಿಟ್ ಬಲ್ಟಿಸ್ತಾನದಲ್ಲಿ ಮಾನವ ಹಕ್ಕುಗಳ ನಿರಂತರ ಹನನ - ಭಾರತ
ಗಿಲ್ಗಿಟ್ ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತ್ಯ ಸ್ಥಾನ – ಪಾಕ್ ನಿರ್ಧಾರ ತಿರಸ್ಕರಿಸಿದ ಭಾರತ title=

ನವದೆಹಲಿ : ಗಿಲ್ಗಿಟ್ – ಬಾಲ್ಟಿಸ್ತಾನ ಪ್ರದೇಶಕ್ಕೆ ತಾತ್ಕಾಲಿಕವಾಗಿ  ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ ನೀಡಿರುವ ಪಾಕಿಸ್ತಾನದ (Pakistan) ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. 

ಅಕ್ರಮ ಮತ್ತು ಬಲವಂತದಿಂದ  ಭಾರತಕ್ಕೆ ಸೇರಿದ ಭೂಮಿಯ ಒಂದು ಭಾಗಕ್ಕೆ ಬದಲಾವಣೆ ತರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ  ತಿರಸ್ಕರಿಸುತ್ತದೆ.  ಪಾಕಿಸ್ತಾನ ಕೂಡಲೇ ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶವನ್ನು ತೆರವು ಮಾಡಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. 

PoKಗೆ ಸಂಬಂಧಿಸಿದಂತೆ ಕೊನೆಗೂ ಭಾರತದ ಮುಂದೆ ಮಂಡಿಯೂರಿದ ಪಾಕಿಸ್ತಾನ

ಗಿಲ್ಗಿಟ್ ಬಾಲ್ಟಿಸ್ತಾನ  (Gilgit Baltistan) ಭಾರತದ ಭೂಪ್ರದೇಶ. ಕಾನೂನಿನ ಪ್ರಕಾರ ಭಾರತದ ಅವಿಭಾಜ್ಯ ಅಂಗ.  ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವ  ಈ ಪ್ರದೇಶದ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕು ಇಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ  (Anurag Srivastava) ತಿಳಿಸಿದ್ದಾರೆ.  

ಪಾಕ್ ಆಕ್ರಮಿತ  ಈ ಪ್ರದೇಶದಲ್ಲಿ ಕಳೆದ ಏಳು ವರ್ಷಗಳಿಂದ ಮಾನವ ಹಕ್ಕುಗಳನ್ನು ಸತತವಾಗಿ ಹನನ ಮಾಡಲಾಗುತ್ತಿದೆ. ಜನರನ್ನು ಶೋಷಿಸಲಾಗುತ್ತಿದೆ. ಅವರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇಲ್ಲ ಎಂದು ಭಾರತ ಅಪಾದಿಸಿದೆ.  

ಪಾಕ್ ಗೆ ಏಕಾಏಕಿ ಶಾಕ್ ನೀಡಿದ ಸೌದಿ ಅರೇಬಿಯಾ ಮಾಡಿದ್ದೇನು ಗೊತ್ತೇ?

ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶದಲ್ಲಿ ಯಾವುದೇ ಭೌತಿಕ ಬದಲಾವಣೆ ತರುವ ಮೊದಲು, ಆ ಪ್ರದೇಶದಿಂದ ಪಾಕಿಸ್ತಾನ ಕಾಲ್ತೆಗೆಯಬೇಕು ಎಂದು ಭಾರತ  ಒತ್ತಾಯಿಸಿದೆ.

ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನ ನೀಡುವ ನಿರ್ಧಾರವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಭಾನುವಾರ ಪ್ರಕಟಿಸಿದ್ದರು. ಪಾಕಿಸ್ತಾನದ  ಈ ನಿರ್ಧಾರಕ್ಕೆ ಗಿಲ್ಟಿಗ್ ಬಾಲ್ಟಿಸ್ತಾನದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ.
 

Trending News